'ಕಳಪೆ' ಪಟ್ಟಕ್ಕೆ ಹೆದರಿ ಬಾತ್‌ರೂಮ್‌ನಲ್ಲಿ ಪ್ರಜ್ಞೆ ತಪ್ಪಿದ್ದು ನಾಟಕ; ಚೈತ್ರಾ ಕುಂದಾಪುರ ವಿರುದ್ಧ ನೆಟ್ಟಿಗರ ಆಕ್ರೋಶ

First Published | Nov 16, 2024, 9:47 AM IST

ಆಟ ಸ್ಟ್ರಾಂಗ್ ಆಗುತ್ತಿದ್ದಂತೆ ಗೇಮ್ ಪ್ಲ್ಯಾನ್ ಮಾಡಲು ಮುಂದಾದ ಚೈತ್ರಾ ಕುಂದಾಪುರ. ಬಾತ್‌ರೂಮಿನಲ್ಲಿ ತಲೆ ಸುತ್ತಿ ಬಿದ್ದಿದ್ದು ನಾಟಕವೇ?

ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಭಾಷಣಗಾರ್ತಿ ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಒಂಟಿಯಾಗಿ ಬಾತ್‌ರೂಮ್‌ಗೆ ತೆರಳಿದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

 ಈ ವಾರ ನಡೆದ ಜೋಡಿ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ ಅಲ್ಲದೆ ಗೇಮ್ ಪ್ಲ್ಯಾನ್ ಮಾಡಲು ಹೋಗಿ ಜೊತೆಯಾಗಿದ್ದ ಶಿಶಿರ್‌ನ ದೂರ ಮಾಡಿ ತ್ರಿವಿಕ್ರಮ್ ಜೋಡಿಯಾಗಲು ಮುಂದಾಗಿದ್ದರು. ಇದು ಮನೆಯಲ್ಲಿ ದೊಡ್ಡ ಜಗಳವನ್ನು ಸೃಷ್ಟಿ ಮಾಡಿತ್ತು. 

Tap to resize

ಆದರೆ ಬಾತ್‌ರೂಮಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ಕುಂದಾಪುರರನ್ನು ಕಂಡು ಬಿಗ್ ಬಾಸ್ ಕೂಡಲೇ ಗೌತಮಿ ಮತ್ತು ಮೋಕ್ಷಿತಾರನ್ನು ಸಹಾಯಕ್ಕೆ ಕಳುಹಿಸಿದ್ದಾರೆ. ಏನೇ ಪ್ರಯತ್ನ ಪಟ್ಟರು ಪ್ರಜ್ಞೆ ಬಾರದ ಕಾರಣ ತಕ್ಷಣವೇ ಕನ್ಫೆಷನ್‌ ರೂಮಿಗೆ ಕರೆದುಕೊಂಡು ಹೋಗಿ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು.

ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ವಾರ ಉತ್ತಮ ಕಳಪೆ ಟಾಸ್ಕ್‌ ಕೂಡ ಚೈತ್ರಾ ಇಲ್ಲದೆ ನಡೆದಿದೆ. ಹೀಗಾಗಿ ಜನರು ಲಿಂಕ್ ಕ್ರಿಯೇಟ್ ಮಾಡುತ್ತಿದ್ದಾರೆ. 

 ಈ ವಾರ ಅತಿ ಹೆಚ್ಚು ಟಾರ್ಗೆಟ್ ಆಗಿರುವ ಚೈತ್ರಾ ಕುಂದಾಪುರ ಕಳಪೆ ಪಟ್ಟಕ್ಕೆ ಹೆದರಿ ಬಾತ್‌ರೂಮಿನಲ್ಲಿ ಯಾರೂ ಇಲ್ಲದ ಸಮಯಲ್ಲಿ ತಲೆ ಸುತ್ತು ಬಿದ್ದಿರುವ ನಾಟಕ ಶುರು ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 

 ಉತ್ತಮ ಮತ್ತು ಕಳಪೆ ಕೊಡುವ ಸಮಯದಲ್ಲಿ ಚೈತ್ರಾ ಕುಂದಾಪುರ ಅವರನ್ನು ಹೊರತು ಪಡಿಸಿ ಕೊಡಬೇಕು ಎಂದು ಬಿಗ್ ಬಾಸ್ ಆದೇಶಿಸುತ್ತಾರೆ. ಹೀಗಾಗಿ ಇದು ಗಿಮಿಕ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Latest Videos

click me!