ಹಬ್ಬದಂದು ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಧರಿಸಿದ ನೇಹಾ ಗೌಡ ಫ್ಯಾಮಿಲಿ; ಫೋಟೋ ವೈರಲ್

Published : Apr 01, 2025, 12:07 PM ISTUpdated : Apr 01, 2025, 12:13 PM IST

ಒಂದೇ ಡಿಸೈನ್ ಒಂದೇ ಸ್ಟೈಲ್‌ನಲ್ಲಿ ಬಟ್ಟೆ ಧರಿಸಿದ ಗೊಂಬೆ ಫ್ಯಾಮಿಲಿ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.  

PREV
16
ಹಬ್ಬದಂದು ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಧರಿಸಿದ ನೇಹಾ ಗೌಡ ಫ್ಯಾಮಿಲಿ; ಫೋಟೋ ವೈರಲ್

'ಲಕ್ಷ್ಮಿ ಬಾರಮ್ಮ' ಸೀರಿಯಲ್ ನೋಡುತ್ತಿದ್ದ ಪ್ರತಿಯೊಬ್ಬರಿಗೂ ಗೊಂಬೆ ಅಂದ್ರೆ ಯಾರು? ಯಾರಿಗೆ ಗೊಂಬೆ ಎಂದು ಕರೆಯುತ್ತಾರೆ ಎಂದು ಸ್ಪಷ್ಟವಾಗಿ ತಿಳಿದಿರುತ್ತದೆ. ಇದು ಅದೇ ಗೊಂಬೆಯ ಫ್ಯಾಮಿಲಿ.

26

ಕಿರುತೆರೆ ನಟಿ ನೇಹಾ ಗೌಡರನ್ನು ಅಭಿಮಾನಿಗಳು ಹೆಚ್ಚಾಗಿ ಪಾತ್ರದ ಹೆಸರಾದ ಗೊಂಬೆ ಎಂದು ಕರೆಯುತ್ತಾರೆ. ಕೆಲವು ತಿಂಗಳ ಹಿಂದೆ ನಟಿ ನೇಹಾ ಮುದ್ದಾದ ಗೊಂಬೆಗೆ ಜನ್ಮ ನೀಡಿದರು. ಫುಲ್ ಫ್ಯಾಮಿಲಿ ಮೊದಲ ಹಬ್ಬ ಆಚರಿಸುತ್ತಿದೆ.

36

ನೇಹಾ ಗೌಡ ಮಗಳ ಮೊದಲ ಯುಗಾದಿ ಹಬ್ಬಕ್ಕೆ ಡಿಸೈನರ್ ಉಡುಪು ಮಾಡಿಸಿದ್ದಾರೆ. ಇಲ್ಲಿ ಮಗಳ ಮಾತ್ರವಲ್ಲ ಇಡೀ ಫ್ಯಾಮಿಲಿ ಒಂದೇ ಬಣ್ಣದ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

46

'ಒಂದೇ ಬಣ್ಣದ ಒಂದೇ ಡಿಸೈನ್ ಇರುವ ಡ್ರೆಸ್‌ನಲ್ಲಿ ಈ ವರ್ಷ ಯುಗಾದಿ ಹಬ್ಬವನ್ನು ಆಚರಿಸಿದ್ದೀವಿ. ತುಂಬಾ ಪ್ರೀತಿ ಮತ್ತು ರುಚಿರುಚಿಯಾದ ಅಡುಗೆಗಳಿತ್ತು' ಎಂದು ನೇಹಾ ಬರೆದುಕೊಂಡಿದ್ದಾರೆ.

56

'ನಾವು ಒಂದು ದಿನ ಹಿಂದೆ ಬಟ್ಟೆ ಡಿಸೈನ್ ಮಾಡಲು ಆರ್ಡರ್ ಕೊಟ್ಟಿದ್ದು. ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ. ರಾತ್ರಿ ಹಗಲು ಲೆಕ್ಕಿಸದೆ ನಮಗೆಂದು ಡಿಸೈನ್ ಮಾಡಿದ್ದಾರೆ' ಎಂದು ನೇಹಾ ಹೇಳಿದ್ದಾರೆ.

66

'ಹೊಸ ಬಟ್ಟೆ ಧರಿಸಿದ ಮೇಲೆ ನಮ್ಮವರ ಮುಖದಲ್ಲಿ ಖುಷಿ ನೋಡಿ ನಿಜಕ್ಕೂ ನಮಗೆ ಡಬಲ್ ಖುಷಿ ಆಯ್ತು.ತುಂಬಾ ಥ್ಯಾಂಕ್ಸ' ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories