ಕಾಫಿ ಹೂವಿಗೆ ಮುತ್ತು ಕೊಟ್ರೆ ರೇಟ್ ಆಕಾಶ ಮುಟ್ಟದೆ ಏನ್ ಮಾಡುತ್ತೆ; ಭವ್ಯಾ ಗೌಡ ಫೋಟೋ ವೈರಲ್
ಭವ್ಯಾ ಗೌಡ ಕಾಫಿ ತೋಟದಲ್ಲಿ ಏನ್ ಮಾಡ್ತಿದ್ದಾರೆ? ನೀವು ಗೌಡ್ರು ಅಲ್ವಾ? ಮಡಿಕೇರಿ ಕಡೆ ಹೋಗಿರೋದು ಯಾಕೆ ಎಂದ ನೆಟ್ಟಿಗರು.
ಭವ್ಯಾ ಗೌಡ ಕಾಫಿ ತೋಟದಲ್ಲಿ ಏನ್ ಮಾಡ್ತಿದ್ದಾರೆ? ನೀವು ಗೌಡ್ರು ಅಲ್ವಾ? ಮಡಿಕೇರಿ ಕಡೆ ಹೋಗಿರೋದು ಯಾಕೆ ಎಂದ ನೆಟ್ಟಿಗರು.
ಕಿರಿತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿರುವ ಭವ್ಯಾ ಗೌಡ ಮಾರ್ಚ್ ತಿಂಗಳಿನಲ್ಲಿ ಮಡಿಕೇರಿಯ ಕಾಫಿ ತೋಟಗಳಿಗೆ ಭೇಟಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಬೆಳಗಿನಜಾವ ಕಾಫಿ ತೋಟದಲ್ಲಿ ನಿಂತು ಭವ್ಯಾ ಗೌಡ ಪೋಸ್ ಕೊಟ್ಟಿದ್ದಾರೆ. ಈಗ ಕಾಫಿ ಗಿಡಗಳಲ್ಲಿ ಹೂ ಬರುವ ಸಮಯ. ಹೂವಿನ ಪರಿಮಳ ಗಮಗಮ ಅನ್ನುತ್ತದೆ.
'ಈ ಜಾಗದಲ್ಲೇ ನನ್ನ ಮನಸ್ಸು ಬಿಟ್ಟಿದ್ದೀನಿ' ಎಂದು ಭವ್ಯಾ ಗೌಡ ಬರೆದುಕೊಂಡಿದ್ದಾರೆ. ಜೀನ್ಸ್ ಪ್ಯಾಂಟ್, ಕಪ್ಪು ಟೀ-ಶರ್ಟ್ ಹಾಗೂ ಜ್ಯಾಕೆಟ್ ಧರಿಸಿದ್ದಾರೆ.
ಕಾಫಿ ತೋಟದಲ್ಲಿ ಬೆಳಗಿನ ಜಾವ ಅರಳಿದ ಹೂವು... ಪ್ರಕೃತಿ ಪ್ರೇಮಿ.... ಸುಂದರಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಭವ್ಯಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಏನೇ ಅಪ್ಲೋಡ್ ಮಾಡಿದರು ವೈರಲ್ ಆಗುತ್ತದೆ. ಅಭಿಮಾನಿಗಳು ಹೆಚ್ಚಿರುವ ಕಾರಣವೇ ಭವ್ಯಾಗೆ ಬಿಗ್ ಸಪೋರ್ಟ್ ಸಿಕ್ಕಿರುವುದು.
ಇನ್ನು ರಿಯಾಲಿಟಿ ಶೋ ಮುಗಿದ ಮೇಲೆ ಯಾವುದೇ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಬದಲಿಗೆ ಯೂಟ್ಯೂಬ್ ಚಾನೆಲ್, ಸ್ನೇಹಿತರ ಜೊತೆ ಟ್ರಿಪ್ ಹಾಗೂ ಅಕ್ಕ-ತಂಗಿ ಜೊತೆ ಫೋಟೋಶೂಟ್ ಮಾಡಿಸಿಕೊಂಡು ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋಗೂ ಮುನ್ನ ಗೀತಾ ಧಾರಾವಾಹಿಯಲ್ಲಿ ಭವ್ಯಾ ನಟಿಸುತ್ತಿದ್ದರು. ಪ್ರಮುಖ ಪಾತ್ರಧಾರಿ ಗೀತಾ ಆಗಿ ಹಲವು ವರ್ಷಗಳ ಕಾಲ ವೀಕ್ಷಕರನ್ನು ಮನೋರಂಜಿಸಿದ್ದಾರೆ.
ಕಿರುತೆರೆಗೆ ಕಾಲಿಡಲು ಬಿಗ್ ಸಪೋರ್ಟ್ ಆಗಿ ನಿಂತಿದ್ದು ಟಿಕ್‌ಟಾಕ್, ಡಬ್‌ಸ್ಮ್ಯಾಶ್ ಹಾಗೂ ಮ್ಯೂಷಿಕಲಿ. ಅದಾದ ಮೇಲೆ ಬಂದಿದ್ದು ರೀಲ್ಸ್. ಇವರ ವಿಡಿಯೋಗಳನ್ನು ನೋಡಿ ನಿರ್ದೇಶಕರ ತಂಡ ಸಂಪರ್ಕಿಸಿ ಅವಕಾಶ ಕೊಟ್ಟಿದ್ದಂತೆ.