ಅಂತೂ ಇಂತೂ ಹೋಳ್ಗೆ ಮಾಡೋದು ಕಲ್ತೆ ಎಂದ ಮೋಕ್ಷಿತಾ;ನಮ್ ಮನೆ ಸೊಸೆ ನೀನೇ ಎಂದ ನೆಟ್ಟಿಗರು!
ಮನೆಯಲ್ಲಿ ಬಲು ಬೇಗ ಹೋಳಿಗೆ ಮಾಡುವುದು ಕಲಿತ ಮೋಕ್ಷಿತಾ ಪೈ. ಹೊರಣ ಸೂಪರ್ ಎಂದ ಫ್ಯಾನ್ಸ್.
ಮನೆಯಲ್ಲಿ ಬಲು ಬೇಗ ಹೋಳಿಗೆ ಮಾಡುವುದು ಕಲಿತ ಮೋಕ್ಷಿತಾ ಪೈ. ಹೊರಣ ಸೂಪರ್ ಎಂದ ಫ್ಯಾನ್ಸ್.
ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಪಾರು, ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ಈ ವರ್ಷ ಯುಗಾದಿ ಹಬ್ಬವನ್ನು ಸಖತ್ ಅದ್ಧೂರಿಯಾಗಿ ಆಚರಿಸಿದ್ದಾರೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ.
ಯುಗಾದಿ ಹಬ್ಬದಂದು ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಯಲ್ಲಿ ಹೋಳಿಗೆ ಮಾಡುತ್ತಾರೆ. ಹೀಗಾಗಿ ಗೊತ್ತಿಲ್ಲದನ್ನು ಕಲಿತು ಮಾಡುವುದೇ ಮೋಕ್ಷಿತಾ ಪೈ ಸ್ಪೆಷಾಲಿಟಿ ಎನ್ನಬಹುದು.
'ಅಂತೂ ಇಂತೂ ಹೋಳ್ಗೆ ಮಾಡೋದು ಕಲ್ತೆ .Thankyuu sooo much Bhargavi ಹೋಳಿಗೆ ಮಾಡೋದು ಹೇಗೆ ಅಂತ ಹೇಳ್ಕೊಟ್ಟಿದ್ದಕ್ಕೆ'ಎಂದು ತಮ್ಮ ಸ್ನೇಹಿತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಮೋಕ್ಷಿತಾ.
ಹೋಳಿಗೆ, ಹೊರಣ ಎಲ್ಲವೂ ಎಲ್ಲೋ ಎಲ್ಲೋ ಇರುತ್ತೆ ಅಂತ ಮೋಕ್ಷಿತಾ ಕೂಡ ಎಲ್ಲೋ ಬಣ್ಣದ ಸೆಲ್ವಾರ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಾವು ಮಾಡಿರುವ ಹೋಳಿಗೆಯ ಫೋಟೋವನ್ನು ಮೋಕ್ಷಿತಾ ಪೈ ಅಪ್ಲೋಡ್ ಮಾಡಿ ಸಂಭ್ರಮಿಸಿದ್ದಾರೆ.
ಇಷ್ಟು ಮಾಡಿದ್ರೆ ಸಾಕು ನೋಡಿ ನಮ್ಮ ಅಮ್ಮ ಖುಷಿ ಪಡುತ್ತಾರೆ. ನಮ್ಮ ಮನೆಯ ಸೊಸೆ ನೀವೇ ಓಕೆನಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಮುಗಿದ ಮೇಲೆ ಮೋಕ್ಷಿತಾ ಯಾವುದೇ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಬದಲಿಗೆ ಫ್ಯಾಮಿಲಿ ಮತ್ತು ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆಯಲು ಶುರು ಮಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಮದುವೆ ಪ್ರಪೋಸಲ್‌ಗಳು ಜಾಸ್ತಿ ಆಗಿದೆ ಅಂದ್ರೆ ಸುಳ್ಳಲ್ಲ. ಮೋಕ್ಷಿತಾ ಕ್ರಿಯೇಟಿವಿಟಿಗೆ ಫಿದಾ ಆಗಿ ನೀನೇ ನನ್ನ ಹುಡುಗಿ ಎಂದು ಕೂಡ ಬಾಯ್ಸ್ ಮೆಸೇಜ್ ಮಾಡಿರುತ್ತಾರೆ.