ಬಡವನನ್ನು ಮದುವೆ ಆಗ್ತೀರಾ? ಟ್ರಿಪ್‌ ಹೋಗೋಕೆ ಹೇಗೆ ಹಣ ಉಳಿಸುತ್ತೀರಿ?: ಡೈರೆಕ್ಟ್‌ ಉತ್ತರಿಸಿದ Namratha Gowda

Published : Aug 23, 2025, 03:24 PM IST

ಬಡವರ ಮನೆ ಹುಡುಗನನ್ನು ಮದುವೆ ಆಗ್ತೀರಾ? ಟ್ರಿಪ್‌ ಹೋಗೋಕೆ ಹೇಗೆ ಹಣ ಉಳಿಸ್ತೀರಿ? ಎಂದು ನಟಿ ನಮ್ರತಾ ಗೌಡಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ. 

PREV
15

ಕನ್ನಡ ಧಾರಾವಾಹಿ ನಟಿ, ಬಿಗ್‌ ಬಾಸ್‌ ಕನ್ನಡ ಸ್ಪರ್ಧಿ ನಮ್ರತಾ ಗೌಡ ಅವರು ಆಗಾಗ ಟ್ರಿಪ್‌ಗಳಿಗೆ ಹೋಗುತ್ತಿರುತ್ತಾರೆ. ನಟನೆ, ಮಾಡೆಲಿಂಗ್‌, ಯುಟ್ಯೂಬ್‌ ಚಾನೆಲ್‌ ಎಂದು ಅವರು ಬ್ಯುಸಿ ಇರುತ್ತಾರೆ. ಈ ಮಧ್ಯೆ ಅವರು ಮನೆ, ಕಾರ್‌ ಎಂದು ಒಂದಿಷ್ಟು ಹಣ ಹೂಡಿದ್ದರು. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ ಟ್ರಿಪ್‌ ಹೋಗೋಕೆ ಹೇಗೆ ಹಣ ಉಳಿಸ್ತೀರಿ ಎಂದು ಪ್ರಶ್ನೆಮಾಡಲಾಗಿತ್ತು. ಅದಕ್ಕೀಗ ಅವರು ಉತ್ತರ ಕೊಟ್ಟಿದ್ದಾರೆ.

25

“ನಾನು ಬಟ್ಟೆಗಳಿಗೆ, ಟ್ರಿಪ್‌ಗೆ ಸಿಕ್ಕಾಪಟ್ಟೆ ಹಣ ಹಾಕುತ್ತಿದ್ದೇನೆ. ಎಲ್ಲದರಿಂದಲೂ ಎಸ್ಕೇಪ್‌ ಆಗೋಕೆ ಇದೊಂದು ಇರೋದು. ನನಗೆ ಜವಾಬ್ದಾರಿಯಿಂದ ಇರಬೇಕು, ನನ್ನ ಸಂಪಾದನೆಯಿಂದ ಇನ್ನೇನಾದರೂ ಮಾಡಬೇಕು ಅಂತ ಅನಿಸುತ್ತದೆ, ಆದರೆ ಹೃದಯವು ಇರುವುದೊಂದೇ ಜೀವನ ಅಂತ ಕೂಡ ಹೇಳುವುದು” ಎಂದು ನಮ್ರತಾ ಗೌಡ ಹೇಳಿದ್ದಾರೆ.

35

“ಮಿಡಲ್‌ ಕ್ಲಾಸ್‌ ಹುಡ್ಗೀರ್‌ ಲೈಫ್‌ ಯಾವಾಗ ಸರಿ ಹೋಗತ್ತೆ” ಎಂದು ಓರ್ವರು ಪ್ರಶ್ನೆ ಮಾಡಿದ್ದರು. ಆಗ ನಮ್ರತಾ ಗೌಡ ಅವರು, “ಸರಿ ಹೋಗತ್ತೆ, ಹೋಗಲೇಬೇಕು” ಎಂದು ಹೇಳಿದ್ದಾರೆ.

45

“ನೀವು ಸಾಕಷ್ಟು ಜನರಿಗೆ ಸ್ಫೂರ್ತಿ” ಎಂದು ಇನ್ನೋರ್ವರು ಹೇಳಿದ್ದಾರೆ. ಆಗ ನಮ್ರತಾ ಗೌಡ ಅವರು, “ಜನ್ಮ ಸಾರ್ಥಕ” ಎಂದಿದ್ದಾರೆ. ಅಂದಹಾಗೆ ನಮ್ರತಾ ಗೌಡ ಕಳೆದ ಹದಿನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದಾರೆ. ಬಾಲನಟಿಯಾಗಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಅವರು, ʼಪುಟ್ಟಗೌರಿ ಮದುವೆʼ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಲೀಡ್‌ ಆಗಿ ಬಡ್ತಿ ಪಡೆದಿದ್ದರು.

55

“ಬಡವರ ಮನೆ ಹುಡುಗನನ್ನು ಮದುವೆ ಆಗ್ತೀರಾ?” ಎಂದು ಓರ್ವರು ಪ್ರಶ್ನೆ ಮಾಡಿದ್ದಾರೆ. ಆಗ ನಮ್ರತಾ ಗೌಡ ಅವರು, “ಹೃದಯ ಶ್ರೀಮಂತಿಕೆ ಮುಖ್ಯ, ದುಡ್ಡು ನಾವು ದುಡಿತೀವಿ” ಎಂದು ಹೇಳಿದ್ದಾರೆ.

Read more Photos on
click me!

Recommended Stories