ಕುಪ್ಪಂಡಾಸ್ ಜ್ಯುವೆಲ್ಲರಿ ಯಾರ್ ಅಪ್ಪನ ಮನೆ ಆಸ್ತೀನೂ ಅಲ್ಲ... ವರ್ತೂರ್ ಹೆಸರು ಕೇಳಿ ಯಾಕೆ ಹೀಗಂದಿದ್ದು ತನಿಷಾ?

Published : Aug 22, 2025, 08:45 PM IST

ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕುಪ್ಪಂಡಾಸ್ ಜ್ಯುವೆಲ್ಲರಿ ಯಾರ್ ಅಪ್ಪನ ಮನೆ ಆಸ್ತೀನೂ ಅಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

PREV
16

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡರೂ ಬಿಗ್ ಬಾಸ್ ಸೀಸನ್ 10ರ ಮೂಲಕ ಸದ್ದು ಮಾಡಿದ ಬೆಡಗಿ ತನಿಷಾ ಕುಪ್ಪಂಡಾ. ತಮ್ಮ ನೇರ ಮಾತು, ಆಟಗಳ ಮೂಲಕ ಬೆಂಕಿ ಅಂತಾನೇ ಫೇಮಸ್ ಆದವರು.

26

ಬಿಗ್ ಬಾಸ್ ಮನೆಯಲ್ಲಿರುವಾಗ ವರ್ತೂರ್ ಸಂತೋಷ್ ಮತ್ತು ತನಿಷಾ ಕುಪ್ಪಂಡಾ ಜೋಡಿ ತುಂಬಾನೆ ಫೇಮಸ್ ಆಗಿತ್ತು. ಅಲ್ಲಿಂದ ಹೊರ ಬಂದ ಮೇಲೆ ಸಹ ಇಬ್ಬರು ಹಲವಾರು ಕಡೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಸುಗುಸು ಸಹ ಕೇಳಿ ಬಂದಿತ್ತು.

36

ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ತನಿಷಾ ಕುಪ್ಪಂಡ  (Tanisha Kuppanda) ತಮ್ಮದೇ ಆದ ಕುಪ್ಪಂಡಾಸ್ ಜ್ಯುವೆಲ್ಲರಿ ತೆರೆದರು. ಅದರಲ್ಲೂ ಯಶಸ್ವಿಯಾಗಿ ಎರಡೆರಡು ಶೋ ರೂಮ್ ಗಳನ್ನು ಬೆಂಗಳೂರಿನಲ್ಲಿ ತೆರೆದಿದ್ದಾರೆ ತನಿಷಾ. ಈ ಜ್ಯುವೆಲ್ಲರಿ ಕುರಿತಂತೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು, ಇದೀಗ ಆ ಸಂಶಯಗಳಿಗೆ ತನಿಷಾ ನೇರ ಉತ್ತರ ಕೊಟ್ಟಿದ್ದಾರೆ.

46

ಕೆಲವು ದಿನಗಳ ಹಿಂದೆ ತನಿಷಾ ಕುಪ್ಪಂಡ ಅವರ ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸಂದರ್ಶಕಿ, ಇದು ನನ್ನ ಪ್ರಶ್ನೆ ಅಲ್ಲ, ಯೂಟ್ಯೂಬ್ ಅಲ್ಲಿ ತುಂಬಾ ಜನ ಹೇಳ್ತಿರೋದನ್ನು ಕೇಳಿ ನಾನು ಕೇಳುತ್ತಿರೋದು. ಇದಕ್ಕೆ ನಿಮ್ಮ ಕ್ಲಾರಿಟಿ ಬೇಕು ಎಂದು ಕೇಳಿದ್ದಾರೆ.

56

ತನಿಷಾಗೆ ಪ್ರಶ್ನೆ ಕೇಳುತ್ತಾ, ಕುಪ್ಪಂಡಾಸ್ ಜ್ಯುವೆಲ್ಲರಿಗೆ ಸ್ಪಾನ್ಸರ್ ಮಾಡಿದ್ದು, ವರ್ತೂರ್ ಸಂತೋಷ್ ಅಂತೆ. ಅವರೇ ಅದರ ಪಾರ್ಟ್ನರ್, ಬೆನ್ನೆಲುಬು, ಸಪೋರ್ಟರ್ ಎಲ್ಲವೂ ಹೌದು ಎನ್ನುವ ಮಾತು ಕೇಳಿ ಬರುತ್ತಿದೆ. ಅದು ನಿಜಾನ ಎಂದು ಕೇಳಿದ್ದಾರೆ.

66

ಇದಕ್ಕೆ ಉತ್ತರಿಸಿದ ತನಿಷಾ… ಇದನ್ನು ವರ್ತೂರ್ ಸಂತೋಷ್ ಕೇಳುತ್ತಿದ್ದರೆ ಸರಿಯಾಗಿ ಉತ್ತರ ಕೊಡುತ್ತಿದ್ದರು. ಕುಪ್ಪಂಡಾಸ್ ಜ್ಯುವೆಲ್ಲರಿಯನ್ನು ನಾನು ಯಾರ ಅಪ್ಪನ ಮನೆಯ ಆಸ್ತಿಯನ್ನು ಬಳಸಿ ಮಾಡಿಲ್ಲ. ಇದು ನಾನೇ ಸ್ಥಾಪಿಸಿದ ಜ್ಯುವೆಲ್ಲರಿ, ಇದಕ್ಕಿಂತ ನೇರವಾಗಿ ಉತ್ತರ ಕೊಡಲು ನನಗೆ ಬರೋದಿಲ್ಲ ಎಂದಿದ್ದಾರೆ.

Read more Photos on
click me!

Recommended Stories