Sonu Srinivas Gowda Marriage: ಸೋನು ಗೌಡ ಕತ್ತಲ್ಲಿ ಅರಿಷಿಣದ ದಾರ! ತಾಯಿ ಮುಂದೆ ಮದುವೆ ಬಗ್ಗೆ ಹೇಳಿದ್ದೇನು?

Published : Aug 22, 2025, 08:42 PM IST

ಬಿಗ್‌ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡ ಅವರ ಕುತ್ತಿಗೆಯಲ್ಲಿರೋ ಅರಿಷಿಣದ ದಾರ ನೋಡಿ, ಕದ್ದುಮುಚ್ಚಿ ಮದುವೆ ಆದರಾ ಎನ್ನುವ ಪ್ರಶ್ನೆ ಬಂದಿದೆ. ಇದಕ್ಕೆ ಸ್ವತಃ ಸೋನು ಉತ್ತರ ಕೊಟ್ಟಿದ್ದಾರೆ. 

PREV
15

ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡ ಅವರ ಕುತ್ತಿಗೆಯಲ್ಲಿ ತಾಳಿ. ಹೌದು, ಸೋನು ಗೌಡ ಅವರು ಕುತ್ತಿಗೆಗೆ ಅರಿಷಿಣದ ದಾರ ಕಟ್ಟಿಕೊಂಡಿದ್ದು, ಹೇಳದೆ, ಕೇಳದೆ ಮದುವೆ ಆಗಿಬಿಟ್ಟರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರಂತೆ. ಇದಕ್ಕೆ ಸೋನು ಅವರೇ ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

25

ನನ್ನ ಕುತ್ತಿಗೆಯಲ್ಲಿ ಅರಿಷಿಣದ ದಾರ ಇರೋದು ನೋಡಿ ಅನೇಕರು ಹೇಳದೆ, ಕೇಳದೆ ಮದುವೆ ಆದರಾ? ಕದ್ದು ಮುಚ್ಚಿ ಮದುವೆ ಆದರಾ ಅಂತೆಲ್ಲ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇದಕ್ಕೆ ನಾನು ಉತ್ತರ ಕೊಡಬೇಕಿದೆ ಎಂದು ಸೋನು ಹೇಳಿದ್ದಾರೆ.

35

ಸೋನು ಶ್ರೀನಿವಾಸ್‌ ಗೌಡ ಅವರಿಗೆ ಮುಂದಿನ ವರ್ಷ ಮದುವೆ ಮಾಡ್ತೀವಿ ಅಂತ ಅವರ ತಾಯಿ ಹೇಳಿದ್ದಾರಂತೆ. ಒಳ್ಳೆಯ ಗುಣ ಇರೋ, ಚೆನ್ನಾಗಿ ನೋಡಿಕೊಳ್ಳೋ ಗೌಡ್ರು ಹುಡುಗನನ್ನೇ ಸೋನು ಮದುವೆ ಆಗ್ತಾರಂತೆ.

45

ನಾನು ಹತ್ತು ಸಾವಿರ ಜನರನ್ನು ಕರೆದು, ಮದುವೆ ಆಗ್ತೀನಿ. ಧಾಂ ಧೂಂ ಆಗಿ ನಾನು ಮದುವೆ ಆಗ್ತೀನಿ, ಹಾಗೆಲ್ಲ ಕದ್ದು ಮುಚ್ಚಿ ಮದುವೆ ಆಗೋದಿಲ್ಲ. ಈಗ ನನಗೆ ಮದುವೆ ಆಗಿಲ್ಲ ಎಂದು ಸೋನು ಶ್ರೀನಿವಾಸ್‌ ಗೌಡ ಅವರು ಹೇಳಿದ್ದಾರೆ.

55

ಸೋನು ಗೌಡ ಅವರು ಪಕ್ಕದಮನೆಯ ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಗಿದ್ದರು. ಅಲ್ಲಿ ದೇವಿಗೆ ಅರಿಷಿಣದ ದಾರ ಹಾಕಲಾಗಿತ್ತು. ಗುರೂಜಿ ಬಳಿ ಕೇಳಿ ಆ ದಾರವನ್ನು ಅವರು ಕಟ್ಟಿಕೊಂಡಿದ್ದಾರೆ. ತನ್ನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಅವರು ಆ ದಾರ ಕಟ್ಟಿಕೊಂಡಿದ್ದಾರಂತೆ.

Read more Photos on
click me!

Recommended Stories