ಭದ್ರಿನಾಥನ ಸನ್ನಿಧಿಯಲ್ಲಿ ನಟಿ ಕೃತಿಕಾ ರವೀಂದ್ರ… ದರ್ಶನ ಪಡೆದ ನಾನೇ ಪುಣ್ಯವತಿ ಎಂದ ನಟಿ

Published : May 23, 2026, 10:49 AM IST

ನಟಿ ಕೃತಿಕಾ ರವೀಂದ್ರ ಆಧ್ಯಾತ್ಮಿಕ ಯಾತ್ರೆ ಮಾಡುತ್ತಲೇ ಇರುತ್ತಾರೆ. ಇತ್ತಿಚೆಗೆ ಕೇದರನಾಥನ ದರ್ಶನ ಪಡೆದ ನಟಿ, ಇದೀಗ ಭದ್ರಿನಾಥನ ದರ್ಶನ ಪಡೆದು ಬಂದಿದ್ದು, ದೇವರ ಮುಂದೆ ಹತ್ತು ನಿಮಿಷ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿರುವುದಕ್ಕೆ ನಾನೇ ಪುಣ್ಯವತಿ ಎಂದಿದ್ದಾರೆ ನಟಿ. 

PREV
16
ಕೃತಿಕಾ ರವೀಂದ್ರ

ಕನ್ನಡ ಕಿರುತೆರೆಯಲ್ಲಿ ‘ರಾಧಾ ಕಲ್ಯಾಣ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಕೃತಿಕಾ ರವೀಂದ್ರ, ಬಳಿಕ ‘ಭೂಮಿಗೆ ಬಂದ ಭಗವಂತ’ ಮೂಲಕ ಮತ್ತೆ ಕನ್ನಡಿಗರಿಗೆ ಹತ್ತಿರವಾದರು. ಸಿನಿಮಾಗಳಲ್ಲೂ ಅಭಿನಯಿಸಿದ್ದರು ನಟಿ. ಸದ್ಯ ಎಲ್ಲದರಿಂದ ಬ್ರೇಕ್ ಪಡೆದು ತಮ್ಮ ಸ್ಪಿರೀಚುವಲ್ ಜರ್ನಿ ಮೂಲಕ ಜನರಿಗೆ ಪ್ರೇರಣೆ ನೀಡುತ್ತಾ, ಜನಪ್ರಿಯತೆ ಪಡೆಯುತ್ತಿದ್ದಾರೆ.

26
ಆಧ್ಯಾತ್ಮಿಕ ಯಾತ್ರೆ

ಕೃತಿಕಾ ರವೀಂದ್ರ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಮೂಲಕ ಪೂರ್ತಿಯಾಗಿ ನಟನೆಯಿಂದ ಬ್ರೇಕ್ ತೆಗೆದುಕೊಂಡು ಆಧ್ಯಾತ್ಮಿಕ ಯಾತ್ರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೆಚ್ಚಾಗಿ ಸೋಲೋ ಟ್ರಾವೆಲ್ ಮಾಡುವ ಕೃತಿಕಾ ರವೀಂದ್ರ, ಒಂದೇ ವರ್ಷದಲ್ಲಿ 12 ಜ್ಯೋತಿರ್ಲಿಂಗ್ ದರ್ಶನ ಪಡೆದು ಬಂದಿದ್ದಾರೆ.

36
ಭದ್ರಿನಾಥನ ಸನ್ನಿಧಿಯಲ್ಲಿ ಕೃತಿಕಾ

ಇತ್ತೀಚೆಗೆ ನಟಿ ಕೇದಾರನಾಥನ ದರ್ಶನ ಪಡೆದು ಬಂದಿದ್ದರು. ಆದಾದ ಬಳಿಕ ಇದೀಗ ಭದ್ರಿನಾಥ ಕ್ಷೇತ್ರಕ್ಕೆ ತೆರಳಿದ್ದು, ಅಲ್ಲಿ ಭದ್ರಿನಾಥನ ಮುಂದೆ ಹತ್ತು ನಿಮಿಷ ಕುಳಿತುಕೊಳ್ಳುವ ಅವಕಾಶ ಪಡೆದುದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಪುಣ್ಯವತಿ ಎಂದಿದ್ದಾರೆ. ಈ ಕುರಿತು ನಟಿ ಏನು ಹೇಳಿದ್ರು ನೋಡಿ.

46
ಆದಿ ಶಂಕರಾಚಾರ್ಯರು ಸ್ಥಾಲಿಸಿದ ಧಾಮ

ಭದ್ರಿನಾಥ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ಚಾರ್‌ಧಾಮಗಳಲ್ಲಿ ಒಂದು. ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ, ನಿರ್ದಿಷ್ಟವಾಗಿ ಬದರಿನಾರಾಯಣನ ರೂಪದಲ್ಲಿ, ಅಲ್ಲಿ ಅವನು ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ ಎಂದು ಕೃತಿಕಾ ಭದ್ರಿನಾಥ ದೇಗುಲದ ಸೌಂದರ್ಯ ಹಾಗೂ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದ್ದಾರೆ.

56
ಯಾವ ಜನ್ಮದ ಪುಣ್ಯ

ಭದ್ರಿನಾಥ ಧಾಮದ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿರುವ ನಟಿ, ಅಲ್ಲಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಗರ್ಭಗುಡಿಯ ಮುಂದೇನೆ 10 ನಿಮಿಷ ಕೂರೊ ಹಾಗೆ ಮಾಡಿ, ಕಣ್ತುಂಬ ನಿನ್ನ ನೋಡೋ ಹಾಗೆ ಮಾಡಿದ್ದಕ್ಕೆ ಧನ್ಯೋಸ್ಮಿ. ಎಷ್ಟು ಜನ್ಮದ ಪುಣ್ಯಾನೋ ಏನೋ ನಂದು. ಜೈ ಬದ್ರಿ ವಿಶಾಲ್ ಎಂದು ಕೃತಿಕಾ ಬರೆದುಕೊಂಡು ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

66
ಕೃತಿಕಾ ರವೀಂದ್ರ ಕರಿಯರ್

ಅಂದ ಹಾಗೇ ಕೃತಿಕಾ ಇತ್ತೀಚೆಗಷ್ಟೇ ತಮ್ಮ ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಅಲ್ಲದೇ ಅವರು ‘ರಾಜನಿವಾಸ’ ಎನ್ನುವ ಸಿನಿಮಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ನಟಿಸಿದ್ದು, ಸಿನಿಮಾ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಹೊಚ್ಚ ಹೊಸ ಧಾರಾವಾಹಿಯಲ್ಲೂ ನಟಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories