ಅಬ್ಬಬ್ಬಾ ಏನ್ ಬ್ಯೂಟಿ…. Jyoti Poorvaj ಕಿಲ್ಲರ್ ಲುಕ್ ನೋಡಿ ಮಾತೇ ಮರೆತ ಅಭಿಮಾನಿಗಳು

Published : Nov 14, 2025, 09:10 PM IST

Jyoti Poorvaj: ನಟಿ ಜ್ಯೋತಿ ಪೂರ್ವಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಬೀಚ್ ಫೋಟೊಗಳನ್ನು (AI ಫೋಟೊ) ಶೇರ್ ಮಾಡಿದ್ದು, ನಟಿ ಸೀರೆ ಧರಿಸಿದ್ದರೂ ಸಹ ಆ ಬೋಲ್ಡ್, ಕಿಲ್ಲರ್ ಲುಕ್ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಈಕೆ ತ್ರಿಪುರ ಸುಂದರಿ ಎಂದು ಹಾಡಿ ಹೊಗಳುತ್ತಿದ್ದಾರೆ.

PREV
17
ಜ್ಯೋತಿ ಪೂರ್ವಜ್

ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ ನಟಿ ಜ್ಯೋತಿ ರೈ ಆಲಿಯಾಸ್ ಜ್ಯೋತಿ ಪೂರ್ವಜ್ ಇದೀಗ ತೆಲುಗು ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಸಿನಿಮಾಗಿಂತ ನಟಿ ತಮ್ಮ ಫೋಟೊಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ.

27
ಎರಡನೇ ಮದುವೆಯಾದ ನಟಿ

ಜ್ಯೋತಿ ರೈ ಮೊದಲನೇ ಮದುವೆಯಿಂದ ಡಿವೋರ್ಸ್ ಪಡೆದ ಬಳಿಕ. ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಎರಡನೇ ಮದುವೆಯಾಗಿದ್ದು, ತಮ್ಮ ಮಗ ಹಾಗೂ ಗಂಡನ ಜೊತೆ ಸುಂದರವಾಗಿ ಸಂಸಾರ ನಡೆಸುತ್ತಿದ್ದಾರೆ ನಟಿ.

37
ಕಿಲ್ಲರ್ ಸಿನಿಮಾ

ಸದ್ಯ ಜ್ಯೋತಿ ರೈ ಕಿಲ್ಲರ್ ಸಿನಿಮಾದಲ್ಲಿ ನಟಿಸಿದ್ದು, ಸೋಶಿಯಲ್ ಮೀಡಿಯಾ ತುಂಬಾ ನಟಿಯ ಸಖತ್ ಬೋಲ್ಡ್ ಆಗಿರುವ ಫೋಟೊಗಳೇ ವೈರಲ್ ಆಗುತ್ತಿವೆ. ನಟಿಯ ಕಿಲ್ಲರ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

47
ಸೀರೆಯಲ್ಲಿ ಸುಂದರಿ

ಇದೀಗ ಜ್ಯೋತಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಬೀಚ್ ಫೋಟೊಗಳನ್ನು ಒಂದಷ್ಟು ಶೇರ್ ಮಾಡಿದ್ದಾರೆ. ಆದರೆ ಬೀಚ್ ವೇರ್ ಧರಿಸಿಲ್ಲ, ಬದಲಾಗಿ ಬಿಳಿ ಬಣ್ಣದ ಸೀರೆಯುಟ್ಟು, ಸಮುದ್ರದ ಮುಂದೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

57
AI ಫೋಟೊಗಳೇ?

ಜ್ಯೋತಿ ಪೂರ್ವಜ್ ಶೇರ್ ಮಾಡಿರುವ ಫೋಟೊಗಳನ್ನು ನೋಡಿದ್ರೆ, ಅದು AI ಫೋಟೊಗಳಂತೆ ಕಾಣಿಸುತ್ತಿದೆ. ಆದರೆ ಅವು ನಿಜವಾಗಿಯೂ ನಟಿ ಶೂಟ್ ಮಾಡಿಸಿದಂತಹ ಫೋಟೊಗಳೆ ಅಥವಾ AI ಫೋಟೊಗಳೇ ಅನ್ನೋದು ಗೊತ್ತಿಲ್ಲ.

67
ಏನು ಹೇಳಿದ್ರು ನಟಿ

ಕಿಲ್ಲರ್ ಸಿನಿಮಾದ ಹಾಡಿನ ಬಿಡುಗಡೆ ಮತ್ತು ಗ್ಲಿಂಪ್ಸ್ ಧನ್ಯವಾದ ಕಾರ್ಯಕ್ರಮವು 18 ರಂದು ನಡೆಯಲಿದೆ. ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ನಟಿ ತಮ್ಮ ಫೋಟೊಗಳ ಜೊತೆಗೆ ಕಿಲ್ಲರ್ ಸಿನಿಮಾದ ಮಾಹಿತಿ ಹಂಚಿಕೊಂಡಿದ್ದಾರೆ.

77
ಕನ್ನಡ ಸಿನಿಮಾದಲ್ಲೂ ನಟನೆ

ಜ್ಯೋತಿ ರೈ ಸದ್ಯ ಸಿನಿಮಾ, ವೆಬ್ ಸೀರಿಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕಿಲ್ಲರ್ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲು ರೆಡಿಯಾಗುತ್ತಿದೆ. ಅಲ್ಲದೇ ಕನ್ನಡದ ಒಂದು ಸಿನಿಮಾದಲ್ಲೂ ಶೀಘ್ರದಲ್ಲಿ ಜ್ಯೋತಿ ರೈ ನಟಿಸಲಿದ್ದಾರೆ.

Read more Photos on
click me!

Recommended Stories