Brahmagantu: ದೀಪಾಗೆ ಅಗ್ನಿ ಪರೀಕ್ಷೆ! ಅವಳೇ ದಿಶಾ ಎನ್ನೋ ಗುಟ್ಟು ಸೌಂದರ್ಯಾಗೆ ತಿಳಿದುಹೋಯ್ತಾ?

Published : Nov 14, 2025, 05:22 PM IST

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದಿಶಾಳಾಗಿ ನಟಿಸುತ್ತಿರುವ ದೀಪಾಳನ್ನು ಸಂಕಷ್ಟಕ್ಕೆ ಸಿಲುಕಿಸಲು ಸೌಂದರ್ಯ ವಿಫಲಳಾಗುತ್ತಿದ್ದಾಳೆ. ಇದೀಗ, ಬ್ಲೌಸ್ ಹೊಲಿಸುವ ನೆಪದಲ್ಲಿ ದೀಪಾಳ ಅಂಗಡಿಗೆ ಭೇಟಿ ನೀಡಲು ಸೌಂದರ್ಯ ನಿರ್ಧರಿಸಿದ್ದಾಳೆ. ಸೌಂದರ್ಯಳ ಈ ನಿಗೂಢ ನಡೆಯು  ಕುತೂಹಲವನ್ನು ಸೃಷ್ಟಿಸಿದೆ.

PREV
17
ದೀಪಾ- ದಿಶಾ ಕಮಾಲ್​

ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ಸದ್ಯ ದೀಪಾ ದಿಶಾ ಆಗಿ ಎಲ್ಲರನ್ನೂ ಕುಣಿಸುತ್ತಿದ್ದಾಳೆ. ಒಂದೊಂದು ಸಲ ಪೇಚಿಗೆ ಸಿಲುಕಿ ಹೇಗೋ ಮ್ಯಾನೇಜ್​ ಮಾಡುತ್ತಿದ್ದಾಳೆ. ದಿಶಾ ಮತ್ತು ಚಿರುನ್ನು ಹೇಗಾದ್ರೂ ಒಂದು ಮಾಡಿ ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ಸೌಂದರ್ಯ ಹವಣಿಸುತ್ತಿದ್ದಾಳೆ.

27
ಊಟ ಬೇಡ

ದೀಪಾ ಮನೆಯಿಂದ ಕಳುಹಿಸಿರುವ ಊಟ ಬೇಡ ಎಂದು ದಿಶಾಗೆ ಚೈನೀಸ್​ ಫುಡ್​ ಆರ್ಡರ್​ ಮಾಡಿದ್ಲು ಸೌಂದರ್ಯ. ಆದರೆ ದೀಪಾಗೆ ಇವಳ ಅಸಲಿಯತ್ತು ಗೊತ್ತಾಗಿ, ನಾನು ಡಯೆಟ್​ನಲ್ಲಿ ಇದ್ದೇನೆ, ಇದೆಲ್ಲಾ ತಿನ್ನಲ್ಲ ಎಂದು ದೀಪಾ ಅರ್ಥಾತ್​ ತಾನೇ ಮಾಡಿದ ಅಡುಗೆಯನ್ನು ಹೊಗಳಿ ಹೊಗಳಿ ತಿಂದಳು. ಚಿರು ಕೂಡ ದೀಪಾ ಮಾಡಿದ ಅಡುಗೆಯನ್ನೇ ತಿಂದು ಸೌಂದರ್ಯಳ ಮರ್ಯಾದೆ ತೆಗೆದ.

37
ಹೆಜ್ಜೆ ಹೆಜ್ಜೆಯೂ ಅವಮಾನ

ಹೀಗೆ ಸೌಂದರ್ಯಳಿಗೆ ಹೆಜ್ಜೆ ಹೆಜ್ಜೆಯೂ ಅವಮಾನ ಆಗುತ್ತಲೇ ಇದೆ. ದೀಪಾಳಿಗೆ ಬುದ್ಧಿ ಕಲಿಸಲು ಹೋಗಿ ತಾನೇ ಬಕರಾ ಆಗ್ತಿದ್ದಾಳೆ. ಅವಳಿಗೆ ಏನು ಮಾಡುವುದೋ ತಿಳಿಯುತ್ತಿಲ್ಲ.

47
ಬ್ಲೌಸ್​ ಹೊಲಿಸಿಕೊಳ್ಳುವ ಬಯಕೆ

ಆದರೆ, ಇದೀಗ ಇದ್ದಕ್ಕಿದ್ದ ಹಾಗೆ ದೀಪಾಳ ಬಳಿ ಬ್ಲೌಸ್​ ಹೊಲಿಸಿಕೊಳ್ಳುವ ಬಯಕೆಯನ್ನು ಸೌಂದರ್ಯ ಇಟ್ಟಿದ್ದಾಳೆ. ಇದರಲ್ಲಿ ಏನೋ ಕುತಂತ್ರ ಇದೆ ಎಂದು ದೀಪಾಗೆ ತಿಳಿದರೂ ನಾನು ಹೊಲಿದುಕೊಡ್ತೇನೆ, ಸೀರೆ ಕೊಟ್ಟು ಅಳತೆ ಕೊಡಿ ಎಂದಿದ್ದಾಳೆ.

57
ಸೌಂದರ್ಯ ಸಂಶಯ?

ಆದರೆ ಸೌಂದರ್ಯ ಮಾತ್ರ, ಇಲ್ಲ ನಾನು ನಿನ್ನ ಅಂಗಡಿಯನ್ನು ನೋಡಿದ ಹಾಗೆ ಆಗುತ್ತದೆ. ಅಲ್ಲಿಯೇ ಬಂದು ಅಳತೆ ಕೊಡುತ್ತೇನೆ ಎಂದಿದ್ದಾಳೆ. ಇದು ದೀಪಾಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

67
ದೀಪಾ ಜೊತೆ ಹೊರಟ ಸೌಂದರ್ಯ

ದೀಪಾಳ ಜೊತೆ ಸೌಂದರ್ಯ ಹೊರಟೇ ಬಿಟ್ಟಿದ್ದಾಳೆ. ಅವಳು ಯಾಕೆ ಹೀಗೆ ಮಾಡಿದಳು ಎನ್ನುವುದು ಈಗಿರೋ ಪ್ರಶ್ನೆ. ದೀಪಾ ಮೇಲೆ ಅವಳಿಗೆ ಡೌಟ್​ ಬಂದಿದ್ಯಾ ಎಂದು ಎನ್ನಿಸುತ್ತಿದೆ.

77
ಸೌಂದರ್ಯಳ ನಡೆ ನಿಗೂಢ

ಇದು ಸಾಧ್ಯವಿಲ್ಲ ಎನ್ನುವುದೂ ಅಷ್ಟೇ ದಿಟ. ಇದರ ಸತ್ಯ ತಿಳಿದುಬಿಟ್ಟರೆ ಅಲ್ಲಿಗೆ ಸೀರಿಯಲ್​ ಮುಗಿದಂತೆ. ಆದರೆ ಸೌಂದರ್ಯಳ ನಡೆ ಸದ್ಯ ನಿಗೂಢವಾಗಿದೆ.

Read more Photos on
click me!

Recommended Stories