ಮಾಜಿ ಬಿಗ್ಬಾಸ್ ಸ್ಪರ್ಧಿ ಭಾವನಾ ಬೆಳಗೆರೆ ಅವರು, ಬಿಗ್ಬಾಸ್ ಸ್ಕ್ರಿಪ್ಟೆಡ್ ಎನ್ನುವ ಆರೋಪದ ಬಗ್ಗೆ ಸುವರ್ಣ ಟಿವಿಯ ಬೆಂಗಳೂರು ಬಜ್ಗೆ ನೀಡಿರೋ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿ ನಡೆಯುವುದು ಏನು, ಸ್ಕ್ರಿಪ್ಟೆಡ್ ಆಗುವುದು ಏನು ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ವಿವರಿಸಿದ್ದಾರೆ.
ಬಿಗ್ಬಾಸ್ (Bigg Boss) ಎಂದಾಕ್ಷಣ ಇದರಲ್ಲಿ ಎಲ್ಲವೂ ಸ್ಕ್ರಿಪ್ಟೆಡ್ ಎನ್ನುವ ಮಾತು ಎಲ್ಲಾ ಭಾಷೆಗಳ ಷೋನಲ್ಲಿಯೂ ಇದೆ. ಹೀಗೆಯೇ ಮಾತನಾಡಬೇಕು ಎನ್ನುವುದರಿಂದ ಹಿಡಿದು, ಗಲಾಟೆ-ಗದ್ದಲ, ಲವ್ ಹೀಗೆ ಅಲ್ಲಿ ನಡೆಯುವ ಪ್ರತಿಯೊಂದನ್ನೂ ಮೊದಲೇ ಹೇಳಿರುತ್ತಾರೆ ಎಂಬ ಆರೋಪ ಇದ್ದೇ ಇದೆ.
29
ಬಿಗ್ಬಾಸ್ ಮೇಲೆ ಆರೋಪ
ಇದಾಗಲೇ ಕೆಲವು ಭಾಷೆಗಳ ಸ್ಪರ್ಧಿಗಳು ಇದೊಂದು ರೀತಿಯಲ್ಲಿ ಸ್ಕ್ರಿಪ್ಟೆಡ್ ಎಂಬುದಾಗಿ ಹೇಳಿದ್ದರೆ, ಮತ್ತೆ ಕೆಲವರು ಅದನ್ನು ನಿರಾಕರಿಸಿದ್ದಾರೆ. ಅಲ್ಲಿ ಎಲ್ಲವೂ ತಂತಾನೇಯಾಗಿಯೇ ನಡೆಯುವುದು, ಏನೂ ಮೊದಲೇ ಹೇಳಿಕೊಟ್ಟಿರುವುದಿಲ್ಲ ಎಂದಿದ್ದಾರೆ.
39
ವಾತಾವರಣ ಸೃಷ್ಟಿ
ಇನ್ನು ಕೆಲವರು, ಅಲ್ಲಿ ಹೀಗೆಯೇ ಮಾಡಿ ಅನ್ನುವುದಿಲ್ಲ, ಬದಲಿಗೆ ಆ ರೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ. ನೀವು ಗೆಲ್ಲಲೇಬೇಕಾದರೆ, ಗಲಾಟೆ, ಗದ್ದಲ, ಕಿರುಚಾಟ ಎಲ್ಲವೂ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತದೆ ಎಂದಿದ್ದಾರೆ.
ಇವೆಲ್ಲವುಗಳ ಮಧ್ಯೆಯೇ ಸುವರ್ಣ ಟಿವಿಯ ಬೆಂಗಳೂರು ಬಜ್ಗೆ ಎಕ್ಸ್ಕ್ಯೂಸಿವ್ ಆಗಿ ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆ ಅವರ ಪುತ್ರಿ, ಭಾವನಾ ಬೆಳಗೆರೆ ಅವರು ಹೇಳಿಕೊಂಡಿದ್ದಾರೆ. ಅಂದಹಾಗೆ ಇವರು ಬಿಗ್ಬಾಸ್ನ 3ನೇ ಸೀಸನ್ನಲ್ಲಿ ಸ್ಪರ್ಧಿಸಿದ್ದರು. 72 ದಿನಗಳು ಮನೆಯಲ್ಲಿ ಇದ್ದ ಅವರ ಕೊನೆಗೆ ಮನೆಯಿಂದ ಹೊರಕ್ಕೆ ಬಂದಿದ್ದರು.
59
ಬಿಗ್ಬಾಸ್ಗೆ ಹೋಗಿದ್ದ ರವಿ ಬೆಳಗೆರೆ
ರವಿ ಬೆಳಗೆರೆ ಅವರು ಬಿಗ್ಬಾಸ್ನ 7ನೇ ಸೀಸನ್ನಲ್ಲಿ ಸ್ಪರ್ಧಿಸಿದ್ದರು. ಬಿಗ್ಬಾಸ್ ಅಂದರೇನೇ ಗೊತ್ತಿಲ್ಲದ ತಮ್ಮ ತಂದೆ ರವಿ ಅವರನ್ನು ಹೇಗೆ ಪ್ರಿಪೇರ್ ಮಾಡಿ ಮನೆಯೊಳಕ್ಕೆ ಕಳಿಸಲಾಗಿತ್ತು ಎನ್ನುವ ಬಗ್ಗೆ ಇದೇ ಸಂದರ್ಶನದಲ್ಲಿ ಭಾವನಾ ಮಾತನಾಡಿದ್ದಾರೆ.
69
ಬಿಗ್ಬಾಸ್ ಸ್ಕ್ರಿಪ್ಟೆಡ್ಡಾ?
ಇದರ ಜೊತೆಗೆ ಬಿಗ್ಬಾಸ್ ಅನ್ನೋದು ಸ್ಕ್ರಿಪ್ಟೆಡ್ಡಾ ಎನ್ನುವ ಪ್ರಶ್ನೆಗೆ ಭಾವನಾ, ಒಂದರ್ಥದಲ್ಲಿ ನೋಡುವುದಾದರೆ ಹೌದು, ಆದರೆ ನಿಜವಾಗಿಯೂ ಹಾಗಲ್ಲ ಎಂದಿದ್ದಾರೆ. ಈ ಬಗ್ಗೆ ವಿವರಣೆಯನ್ನು ನೀಡಿರುವ ಅವರು, ನೀವು ಹೀಗೆಯೇ ಮಾಡಿ, ಹಾಗೆಯೇ ಮಾಡಿ ಎಂದು ಮೊದಲು ಸ್ಕ್ರಿಪ್ಟ್ ಎಲ್ಲಾ ಕೊಟ್ಟು ಕಳಿಸಿರುವುದಿಲ್ಲ. ಇವೆಲ್ಲಾ ಸುಳ್ಳು ಸುದ್ದಿಗಳು ಅಷ್ಟೇ ಎಂದಿದ್ದಾರೆ.
79
ಡಿಟೇಲ್ ಆಗಿ ವಿವರಣೆ ನೀಡಿದ ಭಾವನಾ
ಆದರೆ, ಯಾವ ರೀತಿ ಸ್ಕ್ರಿಪ್ಟೆಡ್ ಎನ್ನುವ ಬಗ್ಗೆಯೂ ಅವರು ವಿವರಣೆ ನೀಡಿದ್ದಾರೆ. ದಿನದ 24 ಗಂಟೆಯೂ ಮನೆಯಲ್ಲಿ ಸ್ಪರ್ಧಿಗಳಿಂದ ಏನೇನೋ ಆಗುತ್ತಲೇ ಇರುತ್ತದೆ. ಆದರೆ, ವೀಕ್ಷಕರು ನೋಡುವ ಒಂದು ಅಥವಾ ಒಂದೂವರೆ ಗಂಟೆ ಷೋನಲ್ಲಿ ಏನು ತೋರಿಸಬೇಕು, ಏನು ತೋರಿಸಬಾರದು ಎನ್ನುವ ಎಡಿಟಿಂಗ್ ಮಾಡುವುದು ಸ್ಕ್ರಿಪ್ಟೆಡ್ ಆಗಿರುತ್ತದೆ ವಿನಾ ಅಲ್ಲಿ ನಡೆಯುವ ಘಟನೆಗಳು ಅಲ್ಲ ಎಂದಿದ್ದಾರೆ.
89
ಸ್ಕ್ರಿಪ್ಟೆಡ್ ಎನ್ನೋದು ಹೇಗೆ?
ನಾನು ಹೋದಾಗ ನನ್ನನ್ನು ಸೌಮ್ಯ ಎಂದು ಬಿಂಬಿಸಲಾಯಿತು. ಹಾಗೆಂದು ನಾನು ಅಲ್ಲ ಕೂಗಾಟ, ಗಲಾಟೆ ಮಾಡಿರಲಿಲ್ಲ ಅಂತೇನಲ್ಲ. ಆ ದೃಶ್ಯಗಳನ್ನು ತೋರಿಸಿರಲಿಲ್ಲ. ಆದ್ದರಿಂದ ವೀಕ್ಷಕರಿಗೆ ನನ್ನ ಬಗ್ಗೆ ಒಳ್ಳೆಯ ಕಲ್ಪನೆ ಬರುತ್ತಿತ್ತು. ಇನ್ನು ಇನ್ನೋರ್ವ ಸ್ಪರ್ಧಿಯ ಕಿರುಚಾಟ, ಹಾರಾಟವನ್ನೇ ಆ ಒಂದು ಗಂಟೆಯ ಕಾರ್ಯಕ್ರಮದಲ್ಲಿ ತೋರಿಸಿದರು ಎಂದ ಮಾತ್ರಕ್ಕೆ ಆ ಸ್ಪರ್ಧಿ ಸೈಲೆಂಟ್ ಆಗಿ ಇರಲೇ ಇಲ್ಲ ಅಂತ ಅರ್ಥವೇನಲ್ಲ. ಈ ವಿಷಯದಲ್ಲಿ ಹೇಳುವುದಾದರೆ ಇದೊಂದು ರೀತಿ Bigg Boss scripted ಎನ್ನಬಹುದು ಎಂದಿದ್ದಾರೆ.
99
ಹೀಗೆ ನಡೆಯುತ್ತೆ!
ಇದಕ್ಕೆ ಉದಾಹರಣೆ ಕೊಟ್ಟ ಭಾವನಾ ಅವರು, ಸುಷ್ಮಾ ಅವರು ಬಂದಾಗ ಬೆಂಕಿ ಬಿರುಗಾಳಿ ರೀತಿಯ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಎಲ್ಲಾ ಕೊಟ್ಟು ತೋರಿಸಿದರು. ಹಾಗೆಂದು ಅವರು ಎಷ್ಟೋ ಸಲ ಸೈಲೆಂಟ್ ಆಗಿ ಇದ್ದವರು. ಆದರೆ ನೋಡುವ ಜನರಿಗೆ ಅವರ ಇನ್ನೊಂದು ಅವತಾರ ಮಾತ್ರ ಕಾಣಿಸುತ್ತದೆ. ಹೀಗೆ ಬಿಗ್ಬಾಸ್ನಲ್ಲಿ ನಡೆಯುತ್ತದೆ ಎಂದಿದ್ದಾರೆ.