ಕನ್ನಡ ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷಾ ಹಾಗೂ ಡ್ಯಾನ್ಸ್ ಮಾಸ್ಟರ್ ಮುರುಗಾನಂದ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಆಕ್ಟಿವ್ ಆಗಿದ್ದರೂ ಒಟ್ಟಿಗೆ ಇರುವ ಫೋಟೋ ಮತ್ತು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಿದ್ದು ತುಂಬಾನೇ ಕಡಿಮೆ.
'ಹ್ಯಾಪಿ ಎಂಗೇಜ್‌ಮೆಂಟ್ ದಿನ ನಮ್ಮ ಪ್ರೀತಿಯ ಪತ್ನಿ' ಎಂದು ಮುರುಗಾನಂದ (Dancer Murugananda) ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸೂಪರ್ ಕಪಲ್ಸ್, ಕ್ಯೂಟ್ ಕಪಲ್ಸ್ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಅಲ್ಲ ಇಬ್ರು ಬೀದಿ ಬೀದಿ ಸುತ್ತಿರುತ್ತೀರಾ ಆದರೆ ಒಟ್ಟಿಗೆ ಯಾಕೆ ಇರುವುದಿಲ್ಲ ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.
ಮದುವೆ ನಂತರ ಕಿರುತೆರೆಗೆ ಗುಡ್ ಬೈ ಹೇಳಿದ ಇಶಿತಾ ವರ್ಷ ಯೂಟ್ಯೂಬ್ ವ್ಲಾಗ್ ಮತ್ತು ಟ್ರಾವಲ್ ಫೋಟೋಗ್ರಾಫಿ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು.
ಒಂಟಿಯಾಗಿ ಟ್ರಾವಲ್ ಮಾಡುವ ಇಶಿತಾಳನ್ನು ನೋಡಿ ಅದೆಷ್ಟು ದಿನ ಒಂಟಿಯಾಗಿ ಬೀದಿ ಸುತ್ತುತ್ತೀರಾ? ಮುರುಗಾ ಯಾಕೆ ಜೊತೆಯಲಿಲ್ಲ ಎಂದು ಹಲವರು ಪ್ರಶ್ನಿಸಿದ್ದರು.