ಹುಟ್ಟುಹಬ್ಬದಂದೇ ಅದ್ಧೂರಿಯಾಗಿ ಬೇಬಿ ಶವರ್ ಸೆಲೆಬ್ರೇಟ್ ಮಾಡಿದ ನೇಹಾ ಗೌಡ

Published : Aug 26, 2024, 02:31 PM IST

`ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಆಚರಿಸಿಕೊಂಡಿದ್ದ ನಟಿ ನೇಹಾ ಗೌಡ, ತಮ್ಮ ಹುಟ್ಟು ಹಬ್ಬದ ದಿನ ವೆಸ್ಟರ್ನ್ ಸ್ಟೈಲ್ ನಲ್ಲಿ ಅದ್ಧೂರಿಯಾಗಿ ಬೇಬಿ ಶವರ್ ಸೆಲೆಬ್ರೇಟ್ ಮಾಡಿದ್ದು, ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.   

PREV
19
ಹುಟ್ಟುಹಬ್ಬದಂದೇ ಅದ್ಧೂರಿಯಾಗಿ ಬೇಬಿ ಶವರ್ ಸೆಲೆಬ್ರೇಟ್ ಮಾಡಿದ ನೇಹಾ ಗೌಡ

ಕಿರುತೆರೆಯ ಜನಪ್ರಿಯ ಜೋಡಿಗಳಾದ ನೇಹಾ ಗೌಡ (Neha Gowda) ಮತ್ತು ಚಂದನ್ ಗೌಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನೇಹಾ ತಾಯಿಯಾಗುವ ಸಂಭ್ರಮವನ್ನು ಎಂಜಾಯ್ ಮಾಡ್ತಿದ್ದಾರೆ. 
 

29

ಇತ್ತೀಚೆಗಷ್ಟೇ ಲಕ್ಷ್ಮೀ ಬಾರಮ್ಮ (Lakshmi Baramma) ಖ್ಯಾತಿಯ ನೇಹಾ ಗೌಡ ಸೀಮಂತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ನಟ ನಟಿಯರು ಆಗಮಿಸಿ, ನೇಹಾ -ಚಂದನ್ ಗೆ ಶುಭ ಹಾರೈಸಿದ್ದರು. 
 

39

ನೇಹಾ ಸೀಮಂತದಲ್ಲಿ ನಟಿ ತಾರಾ, ಕಾರ್ತಿಕ್ ಮಹೇಶ್, ಕವಿತಾ ಗೌಡ, ಚಂದನ್ ಕುಮಾರ್, ಅನುಪಮಾ ಗೌಡ, ನಮ್ರತಾ ಗೌಡ, ಸುಜಾತಾ ಅಕ್ಷಯ್, ಶಿಲ್ಪಾ ಅಯ್ಯರ್, ಹರಿಣಿ ಶ್ರೀಕಾಂತ್, ಶರ್ಮಿಳಾ ಚಂದ್ರಶೇಖರ್, ತನ್ವಿ ಬಾಲರಾಜ್ ನಾಯ್ಕ್, ಜ್ಯೋತಿ ಕಿರಣ್ ಮೊದಲಾದವರು ಭಾಗಿಯಾಗಿದ್ದರು. 
 

49

ಸಾಂಪ್ರದಾಯಿಕವಾಗಿ ಅದ್ಧೂರಿ ಸೀಮಂತದ ಬಳಿಕ ಇದೀಗ ನೇಹಾ ಗೌಡ ತಮ್ಮ ಸ್ನೇಹಿತರ ಹಾಗೂ ಆತ್ಮೀಯರ ಜೊತೆಗೆ ಬೇಬಿ ಶವರ್ (baby shower) ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಕನ್ನಡ ಕಿರುತೆರೆಯಲ್ಲದೇ, ತೆಲುಗು, ತಮಿಳು ಕಿರುತೆರೆ ನಟಿಯರು ಸಹ ಆಗಮಿಸಿದ್ದರು. 
 

59

ನೇಹಾ ಗೌಡ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಮತ್ತು ತಮಿಳು ಸೀರಿಯಲ್ ಗಳಲ್ಲೂ ನಟಿಸಿದ್ದರು. ಹೀಗಾಗಿ ಎಲ್ಲಾ ಇಂಡಷ್ಟ್ರಿಯಲ್ಲಿ ನೇಹಾ ಗೌಡಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರೂ ಬೇಬಿ ಶವರ್ ಸೆಲೆಬ್ರೇಟ್ ಮಾಡಿ ಎಂಜಾಯ್ ಮಾಡಿದ್ದಾರೆ. 
 

69

ಬೆಂಗಳೂರಿನ ಲಕ್ಸುರಿಯಸ್ ಟಾಪಿಕ್ ಕ್ರಾಫ್ಟ್ ಬಾರ್ ಮತ್ತು ಕಿಚನ್ ನಲ್ಲಿ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮ ನಡೆಸಲಾಗಿತ್ತು. ಚಂದನ್ ಮತ್ತು ನೇಹಾ ಗೌಡ ಇಬ್ಬರು ಕ್ರೀಂ ಬಣ್ಣದ ಡ್ರೆಸ್ ಮ್ಯಾಚ್ ಮಾಡಿ ಧರಿಸಿದ್ದರು. 
 

79

ಬೇಬಿ ಶವರ್ ಜೊತೆ ನೇಹಾ ಗೌಡ ಹುಟ್ಟುಹಬ್ಬವನ್ನೂ ಸೆಲೆಬ್ರೇಟ್ (birthday celebration)ಮಾಡಿದ್ದು, ಚಂದ್ರನ ಮೇಲೆ ಮಗು ನಿದ್ರಿಸುವಂತಹ ಮುದ್ದಾದ ಕೇಕ್ ಕೂಡ ಕತ್ತರಿಸಿ ಸಂಭ್ರಮಿಸಿದ್ದಾರೆ. 
 

89

ಬೇಬಿ ಶವರ್ ಕಾರ್ಯಕ್ರಮದಲ್ಲಿ ನೇಹಾ ಗೌಡ ಸಹೋದರಿ ಸೋನು ಗೌಡ ಕೂಡ ಭಾಗಿಯಾಗಿದ್ದರು, ಅಲ್ಲದೇ ನೇಹಾ ಬೆಸ್ಟ್ ಫ್ರೆಂಡ್ ಆಗಿರುವ ಅನುಪಮಾ ಗೌಡ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗೆಳತಿಯ ಸ್ಪೆಷಲ್ ಡೇಯನ್ನು ಮತ್ತಷ್ಟು ಸ್ಪೆಷಲ್ ಆಗಿಸಿದ್ದಾರೆ. 
 

99

ಚಂದನ್ ಮತ್ತು ನೇಹಾ ಗೌಡರದ್ದು ಸ್ಕೂಲ್ ಲವ್, 2018ರಲ್ಲಿ ಈ ಜೋಡಿ ತಮ್ಮ 20ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತುವ ಮೂಲಕ ಹಸೆಮಣೆ ಏರಿದ್ದರು. ಇದೇ ಜೂನ್ ನಲ್ಲಿ ನಟಿ ತಾವು ತಾಯಿಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಸದ್ಯಕ್ಕೆ ಇಬ್ಬರು ಪೋಷಕರಾಗುವ ಸಂಭ್ರಮವನ್ನು ಎಂಜಾಯ್ ಮಾಡ್ತಿದ್ದಾರೆ. 
 

Read more Photos on
click me!

Recommended Stories