ಕೃಷ್ಣ ಜನ್ಮಾಷ್ಠಮಿಯಂದು ಹರ್ಷಿಕಾ-ಭುವನ್ ದಂಪತಿಗೆ ಗಂಡು ಮಗು ಜನನ; ಹೆರಿಗೆಗೂ ಮುನ್ನವೇ ಕೃಷ್ಣನ ಆಗಮನ ಗೊತ್ತಿತ್ತಾ?

Published : Sep 04, 2026, 02:58 PM IST

ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ದಂಪತಿ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ದಿನದಂದು ಹರ್ಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಮನೆಗೆ ಮುದ್ದು ಕೃಷ್ಣನೇ ಬಂದಿದ್ದಾನೆ ಎಂದು ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

PREV
16

ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ಜೋಡಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ ಪೊನ್ನಣ್ಣ (Bhuvan Ponnanna) ಅವರ ಬಾಳಿಗೆ ಹೊಸ ಬೆಳಕು ಮೂಡಿದೆ. ಈ ದಂಪತಿ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದು, ವಿಶೇಷವೆಂದರೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪುಣ್ಯ ದಿನದಂದೇ ಹರ್ಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ನಮ್ಮ ಮನೆಗೆ ಸ್ವತಃ ಮುದ್ದು ಕೃಷ್ಣನೇ ಕಾಲಿಟ್ಟಿದ್ದಾನೆ ಎಂದು ಇಡೀ ಕುಟುಂಬಸ್ಥರು ಮತ್ತು ದಂಪತಿ ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.

26

ತನ್ನ ಹುಟ್ಟುಹಬ್ಬದಂದೇ ಪ್ರಾರ್ಥನೆಗೆ ಫಲ ನೀಡಿದ ಶ್ರೀಕೃಷ್ಣ

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟ ಭುವನ್ ಪೊನ್ನಣ್ಣ: ತಮಗೆ ಗಂಡು ಮಗು ಜನಿಸಿರುವ ಸಿಹಿ ಸುದ್ದಿಯನ್ನು ನಟಿ ಹರ್ಷಿಕಾ ಪೂಣಚ್ಚಗೆ ಟ್ಯಾಗ್ ಮಾಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಶ್ರೀಕೃಷ್ಣನ ನವಿಲುಗರಿಯ ಜತೆಗೆ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

36

'ಶ್ರೀ ಕೃಷ್ಣನು ತನ್ನ ಜನ್ಮದಿನದಂದೇ ನಮ್ಮ ಎಲ್ಲಾ ಪ್ರಾರ್ಥನೆಗಳಿಗೆ ಉತ್ತರ ನೀಡಿದ್ದಾನೆ. ಈ ಪವಿತ್ರವಾದ ಜನ್ಮಾಷ್ಟಮಿಯ ದಿನದಂದು ನಮ್ಮ ಪುಟ್ಟ ಮುದ್ದು ಕಂದಮ್ಮನನ್ನು ಪ್ರೀತಿಯಿಂದ ಜಗತ್ತಿಗೆ ಸ್ವಾಗತಿಸುತ್ತಿದ್ದೇವೆ. ನಮ್ಮ ಹೃದಯ ಸಂತೋಷದಿಂದ ತುಂಬಿ ತುಳುಕುತ್ತಿವೆ. ನಮಗಾಗಿ ಪ್ರಾರ್ಥಿಸಿದ, ಹರಸಿದ ಪ್ರತಿಯೊಬ್ಬರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನಮಗೆ ಶ್ರೀರಕ್ಷೆ. ಇದು ಸಂಭ್ರಮಾಚರಣೆಯ ಸಮಯ...' ಎಂದು ಬರೆದು ತಮ್ಮ ಹಾಗೂ ಭುವನ್ ಹೆಸರನ್ನು (Harshi & Bhu) ಉಲ್ಲೇಖಿಸಿದ್ದಾರೆ.

46

ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ:

ಹರ್ಷಿಕಾ ಮತ್ತು ಭುವನ್ ಪೋಷಕರಾದ ವಿಷಯ ತಿಳಿಯುತ್ತಿದ್ದಂತೆಯೇ ಚಂದನವನದ ತಾರೆಯರು, ಆಪ್ತರು ಹಾಗೂ ಅಪಾರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆಗರೆಯುತ್ತಿದ್ದಾರೆ. 'ನಿಜವಾದ ಕೃಷ್ಣ ಜನ್ಮಾಷ್ಟಮಿಯ ಉಡುಗೊರೆ ಇದು', 'ಮನೆಗೆ ಸಾಕ್ಷಾತ್ ಕೃಷ್ಣನೇ ಬಂದಿದ್ದಾನೆ, ತಾಯಿ-ಮಗು ಇಬ್ಬರೂ ಆರೋಗ್ಯವಾಗಿರಲಿ' ಎಂದು ನೆಟ್ಟಿಗರು ಶುಭ ಹಾರೈಸಿದ್ದಾರೆ.

56

ಕೃಷ್ಣನ ಆಗಮನ ಮೊದಲೇ ಗೊತ್ತಿತ್ತಾ? 

ಇನ್ನು ಈ ತಾರಾ ದಂಪತಿ ಕೃಷ್ಣನ ಬ್ಯಾಕ್‌ಗ್ರೌಂಡ್ ಫೋಟೋ ಇರುವಂತಹ ಒಂದು ಸೆಟ್‌ನಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿತ್ತು. ಆದರೆ, ಇದೀಗ ಶ್ರೀ ಕೃಷ್ಣ ಜನ್ಮಾಷ್ಠಮಿ ದಿನದಂದೇ ಅವರಿಗೆ ಗಂಡು ಮಗು ಹುಟ್ಟಿದೆ. ಹೀಗಾಗಿ, ನಿಮ್ಮ ಮನೆಗೆ ಮೊದಲೇ ಶ್ರೀ ಕೃಷ್ಣ (ಗಂಡು ಮಗು) ಬರುವುದು ತಿಳಿದಿತ್ತೇ ಎಂದು ಕೆಲವರು ಕೇಳಿದ್ದಾರೆ. ಏಕೆಂದರೆ, ತಾಯಿ ಗರ್ಭಿಣಿ ಆದಾಗ ಅವರ ಹೊಟ್ಟೆ ಹಾಗೂ ಮುಖವನ್ನು ನೋಡು ಯಾವ ಮಗು ಜನಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗೆ ತಂದೆ ತಾಯಿ ಇಬ್ಬರೂ ಲೆಕ್ಕ ಹಾಕಿ ಈ ಫೋಟೋ ಶೂಟ್ ಮಾಡಿಸಿರಬಹುದು ಎಂದು ಹೇಳಲಾಗುತ್ತಿದೆ.

66

ಕೊಡಗಿನ ಸಂಪ್ರದಾಯದಂತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಮುದ್ದಾದ ಜೋಡಿ, ನಟನೆ ಜೊತೆಗೆ ಸಮಾಜಮುಖಿ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದೆ. ಇತ್ತೀಚೆಗಷ್ಟೇ ಹರ್ಷಿಕಾ ಅವರ ಸೀಮಂತ ಶಾಸ್ತ್ರದ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಕೃಷ್ಣ ಜನ್ಮಾಷ್ಟಮಿಯಂದೇ ಗಂಡು ಮಗುವಿನ ಆಗಮನವಾಗಿರುವುದು ದಂಪತಿಯ ಸಂತಸವನ್ನು ಇಮ್ಮಡಿಗೊಳಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories