ಬಿಗ್ ಬಾಸ್ ಮನೆಯಲ್ಲಿ 100 ದಿನ ಸರ್ವೈವ್ ಆಗೋದು ಹೇಗೆ? 3 ಬೆಸ್ಟ್ ಟಿಪ್ಸ್ ಕೊಟ್ಟ ಚಂದನ್ ಶೆಟ್ಟಿ!

Published : Sep 04, 2026, 11:52 AM IST

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭವಾಗುತ್ತಿದ್ದು, ಮಾಜಿ ವಿನ್ನರ್ ಚಂದನ್ ಶೆಟ್ಟಿ ಅವರು ಸ್ಪರ್ಧಿಗಳಿಗೆ ಮನೆಯಲ್ಲಿ 100 ದಿನ ಉಳಿದುಕೊಳ್ಳಲು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಈ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಸ್ಪರ್ಧಿಸಲಿದ್ದು, 'ಅಗ್ನಿ ಪರೀಕ್ಷೆ' ಮೂಲಕ ಮೂವರು ಆಯ್ಕೆಯಾಗಲಿದ್ದಾರೆ.

PREV
16

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಬಿಗ್ಗೆಸ್ಟ್ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ನೂತನ ಸೀಸನ್ ಅಧಿಕೃತವಾಗಿ ಪ್ರಸಾರ ಕಾಣಲಿದ್ದು, ಈ ಬಾರಿ ಯಾರೆಲ್ಲಾ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ತಾರಕಕ್ಕೇರಿದೆ.

26

ಬಿಗ್ ಬಾಸ್ ಮನೆ ಎಂದರೆ ಬರೀ ಮಜಾ ಅಷ್ಟೇ ಅಲ್ಲ, ಅದು ಅಕ್ಷರಶಃ ಭಾವನೆಗಳ ಯುದ್ಧಭೂಮಿ. ಹೀಗಿರುವಾಗ ದೊಡ್ಮನೆಯೊಳಗೆ ಕಾಲಿಡುವ ಸ್ಪರ್ಧಿಗಳು ಮೊದಲ ವಾರದಲ್ಲೇ ಎಲಿಮಿನೇಟ್ ಆಗದೆ 100 ದಿನಗಳ ಕಾಲ ಅಲ್ಲಿ ಹೇಗೆ ಉಳಿದುಕೊಳ್ಳಬೇಕು? ಈ ಬಗ್ಗೆ ಬಿಗ್ ಬಾಸ್ ಸೀಸನ್ ವಿನ್ನರ್, ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಸ್ಪರ್ಧಿಗಳಿಗೆ ಕೆಲವು ಬೆಲೆಬಾಳುವ 'ಸರ್ವೈವಲ್ ಟಿಪ್ಸ್' ನೀಡಿದ್ದಾರೆ.

36

ಬಿಗ್ ಬಾಸ್ ಮನೆಗೆ ಕಾಲಿಟ್ಟ ಆರಂಭದಲ್ಲೇ ಬಹುತೇಕ ಸ್ಪರ್ಧಿಗಳು ಎಡವುವುದು ಎಲ್ಲಿ ಎಂಬುದನ್ನು ಚಂದನ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ:

ಮನೆಯವರೊಂದಿಗೆ ಉತ್ತಮ ಬಾಂಧವ್ಯ: ಬಿಗ್ ಬಾಸ್ ಮನೆಗೆ ಹೋದ ತಕ್ಷಣ ಎಲ್ಲರ ಜೊತೆ ಮೊದಲು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಯಾಕೆಂದರೆ, ನೀವು ಆರಂಭದ ಮೊದಲ ವಾರಗಳಲ್ಲೇ ನಾಮಿನೇಟ್ ಆಗಿಬಿಟ್ಟರೆ ಉಳಿದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ.

ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲು ಸಮಯ ಬೇಕು: 'ಮೊದಲೇ ನಾಮಿನೇಟ್ ಆದರೆ ವೀಕ್ಷಕರ ಮುಂದೆ ನಿಮ್ಮ ನೈಜ ವ್ಯಕ್ತಿತ್ವ ಪ್ರದರ್ಶಿಸಲು (Open-up ಆಗಲು) ಮತ್ತು ಕ್ಯಾಮೆರಾ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳಲು ನಿಮಗೆ ಸಮಯವೇ ಸಿಗುವುದಿಲ್ಲ. ಪ್ರೇಕ್ಷಕರು ನಿಮ್ಮನ್ನು ಅರ್ಥಮಾಡಿಕೊಳ್ಳುವ ಮೊದಲೇ ನೀವು ಮನೆಯಿಂದ ಆಚೆ ಬರಬೇಕಾಗಬಹುದು.

ಮನೆಯವರನ್ನು ಬುಟ್ಟಿಗೆ ಹಾಕಿಕೊಳ್ಳಿ: ಹಾಗಾಗಿ, ಆರಂಭದ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿರಬೇಕೆಂದರೆ ಮೊದಲು ಮನೆಯ ಸದಸ್ಯರ ವಿಶ್ವಾಸ ಗೆಲ್ಲಬೇಕು (ಮನೆಯವರನ್ನ ಬುಟ್ಟಿಗೆ ಹಾಕೋಬೇಕು). ಸದಸ್ಯರ ಜೊತೆ ಸ್ನೇಹ ಬೆಳೆಸಿದರೆ ನೀವು ನಾಮಿನೇಟ್ ಆಗುವ ಅಪಾಯ ತಪ್ಪುತ್ತದೆ,' ಎಂಬ ಕಿವಿಮಾತನ್ನು ಚಂದನ್ ಶೆಟ್ಟಿ ಹೇಳಿದ್ದಾರೆ.

46

ರೋಚಕ ಘಟ್ಟ ತಲುಪಿದ 'ಬಿಗ್ ಬಾಸ್ ಅಗ್ನಿ ಪರೀಕ್ಷೆ':

ಈ ಬಾರಿಯ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಬಿಗ್ ಬಾಸ್ ಪ್ರವೇಶಿಸಲು ಸುವರ್ಣಾವಕಾಶ ಕಲ್ಪಿಸಲಾಗಿತ್ತು. ಹಲವು ಸುತ್ತಿನ ಕಠಿಣ ಆಡಿಷನ್‌ಗಳಲ್ಲಿ ಆಯ್ಕೆಯಾಗಿದ್ದ 60 ಜನರಿಗೆ ಶ್ರುತಿ, ಚಂದನ್ ಶೆಟ್ಟಿ, ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಅವರು ಜ್ಯೂರಿಗಳಾಗಿ 'ಅಗ್ನಿ ಪರೀಕ್ಷೆ' ನಡೆಸಿದ್ದರು.

ಈಗಾಗಲೇ ಕಠಿಣ ಟಾಸ್ಕ್‌ಗಳನ್ನು ಪಾಸು ಮಾಡಿ ಅಂತಿಮವಾಗಿ 10 ಸ್ಪರ್ಧಿಗಳು ಫಿನಾಲೆ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.

ಈ 10 ಜನರಲ್ಲಿ ನಡೆಯಲಿರುವ ಅಂತಿಮ ಟಾಸ್ಕ್ ಹಾಗೂ ಜನರ ವೋಟಿಂಗ್ ಆಧಾರದ ಮೇಲೆ ಟಾಪ್-3 ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ಮನೆಯೊಳಗೆ ಅಧಿಕೃತ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ.

56

ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಪೈಪೋಟಿ:

ಆಯ್ಕೆಯಾದ ಈ 3 ಜನ ಸಾಮಾನ್ಯ ಸ್ಪರ್ಧಿಗಳ ಜೊತೆಗೆ ಸಿನಿಮಾ, ಕಿರುತೆರೆ ಧಾರಾವಾಹಿ, ಸಂಗೀತ, ಕ್ರೀಡೆ, ಪತ್ರಿಕೋದ್ಯಮ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಮನೆಯೊಳಗೆ ಸ್ಪರ್ಧಿಸಲಿದ್ದಾರೆ. 100 ದಿನಗಳ ಕಾಲ ಜಿದ್ದಾಜಿದ್ದಿನಿಂದ ನಡೆಯುವ ಈ ಮಹಾಸಂಗ್ರಾಮದಲ್ಲಿ ಗೆದ್ದು ಬರುವವರು ಬರೋಬ್ಬರಿ 50 ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

66

ಪ್ರಸಾರದ ಸಮಯ ಮತ್ತು ದಿನಾಂಕ:

ಅಗ್ನಿ ಪರೀಕ್ಷೆ ಗ್ರಾಂಡ್ ಫಿನಾಲೆ: ಶನಿವಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ (ಇದರಲ್ಲಿ ಬಿಗ್ ಬಾಸ್ ಪ್ರವೇಶಿಸುವ 3 ಜನ ಸಾಮಾನ್ಯರ ಘೋಷಣೆಯಾಗಲಿದೆ).

ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್: ಭಾನುವಾರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಟೇಕಾಫ್ ಆಗಲಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories