'ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಂಡವನಿಗೆ' ಹುಟ್ಟುಹಬ್ಬದ ಶುಭ ಕೋರಿದ ಕಾವ್ಯ ಶೈವ

Published : Apr 03, 2026, 09:51 AM IST

Kavya Shaiva: ಕನ್ನಡ ಕಿರುತೆರೆ, ಹಿರಿತೆರೆ ನಟಿ, ಹಾಗೂ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಕಾವ್ಯಾ ಶೈವ್ಯ ತಮ್ಮ ಸಹೋದರ ಕಾರ್ತಿಕ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ತಮ್ಮನ ಜೊತೆಗಿನ ಒಂದಷ್ಟು ಸುಂದರ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.

PREV
16
ಕಾವ್ಯಾ ಶೈವ

ಕನ್ನಡ ಕಿರುತೆರೆಯಲ್ಲಿ ‘ಕೆಂಡ ಸಂಪಿಗೆ’ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟು, ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಗೆದ್ದು, ಕೊತ್ತಲವಾಡಿ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಂಚಿದ ಬೆಡಗಿ ಕಾವ್ಯಾ ಶೈವ. ಇತ್ತೀಚೆಗೆ ನಟಿಯ ಸಹೋದರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಕಾವ್ಯ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

26
ಕಾವ್ಯಾ ಶೈವ ಸ್ಪೆಷಲ್ ವಿಶ್

ಕಾವ್ಯಾ ಶೈವ ತಮ್ಮ ಸಹೋದರ ಕಾರ್ತಿಕ್ ಅವರ ಹುಟ್ಟುಹಬ್ಬಕ್ಕೆ ಮುದ್ದಾದ ಫೋಟೊಗಳ ಜೊತೆಗೆ “ಒಡಹುಟ್ಟಿದವನಿಗೆ, ಎಂದಿಗೂ ನನ್ನ ಹಿಂದೆ ನಿಂತವನಿಗೆ , ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಂಡವನಿಗೆ Happy ಹುಟ್ಟಿದಹಬ್ಬ” ಎಂದು ಶುಭಾಶಯಗಳನ್ನು ಕೋರಿದ್ದಾರೆ.

36
ಕಾವ್ಯಾಗೆ ಬೆನ್ನೆಲುಬಾಗಿದ್ದ ಕಾರ್ತಿಕ್

ಕಾವ್ಯಾ ಶೈವ ಬಿಗ್ ಬಾಸ್ ಮನೆಯಲ್ಲಿದ್ದಾಗ, ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದವರು ಸಹೋದರ ಕಾರ್ತಿಕ್. ಅವರ ಪೋಸ್ಟ್ ಗಳು ಎಷ್ಟು ಕ್ರಿಯೇಟಿವ್ ಆಗಿದ್ದವು ಎಂದರೆ, ಕಾವ್ಯಾ ಫಾಲೋವರ್ಸ್ ಗಳ ಸಂಖ್ಯೆಯೆ ಹೆಚ್ಚಿತ್ತು.

46
ಅಕ್ಕನ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದ ಕಾರ್ತಿಕ್

ಬಿಗ್ ಬಾಸ್ ಮನೆಯಿಂದ ಕಾವ್ಯಾ ಶೈವ ಟಾಪ್ 5 ಹಂತಕ್ಕೆ ಬಂದು ಸೋತಿದ್ದರು. ಆದರೂ ಸಹ ಅಕ್ಕ ಮತ್ತೆ ಮನೆಗೆ ಬಂದಾಗ ತಮ್ಮ ಅದ್ಧೂರಿಯಾಗಿ ಸ್ವಾಗತ ಕೋರಿದ್ದರು. ಹಾಗಾಗಿ ಅಕ್ಕ ತಮ್ಮನ ಬಾಂಧವ್ಯ ಎಂತದ್ದು ಅನ್ನೋದು ನೋಡಿದರೇನೆ ಗೊತ್ತಾಗುತ್ತದೆ.

56
ಮುದ್ದಾದ ಫೋಟೋಗಳು

ಸದಾ ಕಾವ್ಯಾ ಜೊತೆ ಇರುವ ಕಾರ್ತಿಕ್ ಫೋಟೊಗಳನ್ನು ನಟಿ ಶೇರ್ ಮಾಡಿದ್ದು, ಇದರಲ್ಲಿ ಕಾವ್ಯಾ ವೇದಿಕೆ ಮೇಲಿದ್ದರೆ, ತಮ್ಮ ಕಾರ್ತಿಕ್, ಸೈಡಲ್ಲಿ ನಿಂತು ಅಕ್ಕನ ಸಂಭ್ರಮವನ್ನು ಸೆರೆ ಹಿಡಿಯೋದನ್ನು ಕಾಣಬಹುದು, ಜೊತೆಗೆ ಡ್ಯಾನ್ಸ್ ರಿಯಾಲಿಟಿ ಶೋ ಗೆದ್ದಾಗ, ಅಕ್ಕ ಗೆದ್ದ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸುತ್ತಿರುವುದನ್ನು ಸಹ ಕಾಣಬಹುದು.

66
ಕಾವ್ಯಾ ಶೈವ ಮುಂದಿನ ಪ್ರಾಜೆಕ್ಟ್ ಏನು?

ಬಿಗ್ ಬಾಸ್ ಬಳಿಕ ಕಾವ್ಯಾ ಶೈವ ಯಾವುದೇ ಸಿನಿಮಾ, ಸೀರಿಯಲ್ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಆದರೆ ಶೀಘ್ರದಲ್ಲಿ ಧಾರಾವಾಹಿಯೊಂದರ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ಅದು ಯಾವ ಧಾರಾವಾಹಿ, ಯಾವಾಗ ತೆರೆ ಮೇಲೆ ಕಾವ್ಯರನ್ನು ನೋಡಬಹುದು ಮಾಹಿತಿ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories