Why trains are faster at night: ಹಗಲಿಗಿಂತ ರಾತ್ರಿ ಹೊತ್ತು ರೈಲು ಹೆಚ್ಚು ವೇಗವಾಗಿ ಚಲಿಸಿದಂತೆ ಭಾಸವಾಗಲು ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದು ದೃಷ್ಟಿ ಭ್ರಮೆ, ಎರಡನೆಯದು ಸ್ಪಷ್ಟ ಸಿಗ್ನಲ್‌ಗಳು ಮತ್ತು ಮೂರನೆಯದು ಖಾಲಿ ಟ್ರ್ಯಾಕ್‌ಗಳು. ಈ ಕುತೂಹಲಕಾರಿ ಕಾರಣಗಳು ಏನು?
ರೈಲಿನಲ್ಲಿ ಪ್ರಯಾಣಿಸುವಾಗ, ಹಗಲಿಗಿಂತ ರಾತ್ರಿ ಹೊತ್ತು ಟ್ರೇನ್ ಹೆಚ್ಚು ವೇಗವಾಗಿ ಓಡುತ್ತಿದೆ ಎನಿಸುತ್ತದೆ. ಕಿಟಕಿ ಗಾಜುಗಳು ವೇಗಕ್ಕೆ ಬಡಿದಾಡುವುದು, ಹಳಿಗಳ ಶಬ್ದ ಬದಲಾಗುವುದು ನಮಗೆ ಒಂದು ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ನಿಜವಾಗಿಯೂ ರಾತ್ರಿ ರೈಲಿನ ವೇಗ ಹೆಚ್ಚಾಗುತ್ತದೆಯೇ? ಅಥವಾ ಬೇರೆ ಕಾರಣವಿದೆಯೇ? ಈ ವೇಗದ ಹಿಂದಿನ ಮೂರು ತಾಂತ್ರಿಕ ಕಾರಣಗಳು ಏನು?.
25
ವೈಜ್ಞಾನಿಕ ಕಾರಣ ಏನು?
ರೈಲು ವೇಗವಾಗಿ ಚಲಿಸುತ್ತಿದೆ ಎಂದು ನಮಗೆ ಅನಿಸಲು ಮುಖ್ಯ ಕಾರಣ ನಮ್ಮ ಕಣ್ಣುಗಳು ನಮ್ಮನ್ನು ಮೋಸಗೊಳಿಸುವುದೇ. ಇದನ್ನು ವಿಜ್ಞಾನದಲ್ಲಿ 'ವಿಷುವಲ್ ಇಲ್ಯೂಷನ್' ಎನ್ನುತ್ತಾರೆ. ಹಗಲಿನಲ್ಲಿ ನಮ್ಮ ಕಣ್ಣುಗಳು ದೂರದ ಬೆಟ್ಟ, ಮರಗಳ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ರಾತ್ರಿ, ದೂರದ ವಸ್ತುಗಳು ಕಾಣುವುದಿಲ್ಲ. ರೈಲಿಗೆ ಹತ್ತಿರವಿರುವ ಕಂಬ, ಲೈಟ್‌ಗಳು ಮಾತ್ರ ಕಾಣಿಸುತ್ತವೆ. ಹತ್ತಿರದ ವಸ್ತುಗಳು ವೇಗವಾಗಿ ಹಿಂದೆ ಸರಿಯುವುದರಿಂದ, ರೈಲು ರಾಕೆಟ್ ವೇಗದಲ್ಲಿ ಹೋಗುತ್ತಿದೆ ಎಂಬ ಸಂಕೇತ ನಮ್ಮ ಮೆದುಳಿಗೆ ಸಿಗುತ್ತದೆ.
35
ಗರಿಷ್ಠ ವೇಗದಲ್ಲಿ ಚಲನೆ
ಹಗಲಿನಲ್ಲಿ ಬಿಸಿಲಿನಿಂದಾಗಿ ಅಥವಾ ಮರಗಳ ಮರೆಯಲ್ಲಿ ಸಿಗ್ನಲ್‌ಗಳು ಲೋಕೋ ಪೈಲಟ್‌ಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸಿಗ್ನಲ್ ಕೆಂಪು ಇದೆಯೋ ಹಳದಿ ಇದೆಯೋ ಎಂದು ಖಚಿತಪಡಿಸಿಕೊಳ್ಳುವವರೆಗೂ ಅವರು ವೇಗ ಕಡಿಮೆ ಮಾಡುತ್ತಾರೆ. ಆದರೆ ರಾತ್ರಿ, ರೈಲ್ವೆ ಸಿಗ್ನಲ್ ಲೈಟ್‌ಗಳು ಸುಮಾರು 2 ಕಿ.ಮೀ ದೂರದಿಂದಲೇ ಸ್ಪಷ್ಟವಾಗಿ ಕಾಣಿಸುತ್ತವೆ. ಹಸಿರು ಸಿಗ್ನಲ್ ದೂರದಿಂದಲೇ ಕಾಣಿಸುವುದರಿಂದ ಲೋಕೋ ಪೈಲಟ್‌ಗೆ ಪೂರ್ಣ ಆತ್ಮವಿಶ್ವಾಸ ಬರುತ್ತದೆ. ಆಗ ಅವರು ಬ್ರೇಕ್ ಮೇಲೆ ಕೈ ಇಡದೆ ಗರಿಷ್ಠ ವೇಗದಲ್ಲಿ ರೈಲನ್ನು ಓಡಿಸುತ್ತಾರೆ.
ಹಗಲಿನಲ್ಲಿ ಹಳಿಗಳ ದುರಸ್ತಿ, ವೆಲ್ಡಿಂಗ್ ಕೆಲಸಗಳು ನಡೆಯುತ್ತಿರುತ್ತವೆ. ಆಗ ರೈಲನ್ನು ನಿಧಾನವಾಗಿ ಚಲಾಯಿಸಲು 'ಕಾಷನ್ ಆರ್ಡರ್' ಇರುತ್ತದೆ. ಅಲ್ಲದೆ, ಜನರು ಮತ್ತು ಪ್ರಾಣಿಗಳು ಹಗಲಿನಲ್ಲಿ ಟ್ರ್ಯಾಕ್ ದಾಟುವುದರಿಂದ ಲೋಕೋ ಪೈಲಟ್ ವೇಗವನ್ನು ನಿಯಂತ್ರಿಸಬೇಕಾಗುತ್ತದೆ. ಆದರೆ ರಾತ್ರಿ 10 ಗಂಟೆಯ ನಂತರ, ನಿರ್ವಹಣೆ ಕೆಲಸಗಳು ನಿಲ್ಲುತ್ತವೆ, ಟ್ರ್ಯಾಕ್ ಖಾಲಿಯಾಗಿರುತ್ತದೆ. ಯಾವುದೇ ಅಡೆತಡೆ ಇಲ್ಲದಿರುವುದರಿಂದ ರೈಲು ತನ್ನ ಗರಿಷ್ಠ ವೇಗವಾದ 110 ರಿಂದ 130 ಕಿ.ಮೀ. ವೇಗದಲ್ಲಿ ನಿರಂತರವಾಗಿ ಸಾಗುತ್ತದೆ.
55
ಹೆದರಬೇಡಿ
ನಮ್ಮ ಮೆದುಳು ಸೃಷ್ಟಿಸುವ ದೃಷ್ಟಿ ಭ್ರಮೆ, ಸ್ಪಷ್ಟವಾದ ಸಿಗ್ನಲಿಂಗ್ ಮತ್ತು ಅಡೆತಡೆಗಳಿಲ್ಲದ ಖಾಲಿ ಟ್ರ್ಯಾಕ್ - ಈ ಮೂರು ಕಾರಣಗಳಿಂದಾಗಿ ರಾತ್ರಿ ರೈಲು ಪ್ರಯಾಣ ನಮಗೆ ಹೆಚ್ಚು ವೇಗ ಮತ್ತು ಥ್ರಿಲ್ಲಿಂಗ್ ಎನಿಸುತ್ತದೆ. ಹಾಗಾಗಿ, ಮುಂದಿನ ಬಾರಿ ನೀವು ರಾತ್ರಿ ರೈಲಿನಲ್ಲಿ ಹೋಗುವಾಗ, ಆ ವೇಗವನ್ನು ನೋಡಿ ಭಯಪಡದೆ ಈ ವಿಜ್ಞಾನವನ್ನು ನೆನಪಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.