ಗುಂಡಿಗೆ ಗಟ್ಟಿ ಇದೆಯಾ? ಹಾಗಿದ್ರೆ ಈ ಹಾಂಟೆಡ್‌ ತಾಣಕ್ಕೊಮ್ಮೆ ಹೋಗ್ ಬನ್ನಿ

Published : Jun 09, 2022, 06:34 PM IST

ಎಲ್ಲೋ ಯಾರೋ ಜೋರಾಗಿ ಕೂಗಿದಂತೆ ಕೇಳುವುದು, ಮತ್ತೆಲ್ಲೋ ಯಾರದೋ ಇರುವಿಕೆಯನ್ನು ಸೂಚಿಸುವುದು, ಮತ್ತೊಂದೆಡೆ ತಲೆ ಇಲ್ಲದೆ ತಿರುಗಾಡುವ ದೇಹ…. ಅಬ್ಬಾ… ಕೇಳುವಾಗಲೆ ಭಯವಾಗುತ್ತೆ ಅಲ್ವಾ? ಇವೆಲ್ಲಾ ಕೆಲವು ಹಾಂಟೆಡ್ ತಾಣ(haunted places). ಇವೆಲ್ಲವೂ ಭಾರತದಲ್ಲೇ ಇವೆ. ನಿಮಗೆ ಎಂಟೆದೆ ಗುಂಡಿಗೆ ಇದ್ರೆ ಈ ಭಯಾನಕ ತಾಣಗಳಿಗೆ ಭೇಟಿ ನೀಡಿ.  

PREV
111
 ಗುಂಡಿಗೆ ಗಟ್ಟಿ ಇದೆಯಾ? ಹಾಗಿದ್ರೆ ಈ ಹಾಂಟೆಡ್‌ ತಾಣಕ್ಕೊಮ್ಮೆ ಹೋಗ್ ಬನ್ನಿ

ಈ ಯುಗದಲ್ಲಿ, ಭೂತಗಳು ಮತ್ತು ಆತ್ಮಗಳಂತಹ ವಿಷಯಗಳನ್ನು ಹೆಚ್ಚಿನ ಜನ ನಂಬದಿದ್ದರೂ, ಜಗತ್ತಿನಲ್ಲಿ ಅನೇಕ ನಮ್ಮ ಊಹೆಗೂ ನಿಲುಕದ ಘಟನೆಗಳು ನಡೆಯುತ್ತಿರುತ್ತವೆ. ಅನೇಕ ಬಾರಿ ನಿಮ್ಮ ಸುತ್ತಲೂ ಅಂತಹ ಅನೇಕ ಭಯಾನಕ ಘಟನೆಗಳು (haunted situation) ನಡೆಯುವ ಸ್ಥಳಗಳಿವೆ. ದೇಶದಲ್ಲಿರುವ ಅಂತಹ ಭಯಾನಕ ಸ್ಥಳಗಳ ಬಗ್ಗೆ ನಾವು ಇಲ್ಲಿ ಹೇಳುತ್ತಿದ್ದೇವೆ, ಅವು ಕಾಡುವ ಮತ್ತು ಅತ್ಯಂತ ಭಯಾನಕ ತಾಣವಾಗಿವೆ.

211

ಭಂಗರ್ ಕೋಟೆ, ರಾಜಸ್ಥಾನ:
ರಾಜಸ್ಥಾನದಲ್ಲಿರುವ ಭಂಗರ್ ಕೋಟೆಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತ್ಯಂತ ಭಯಾನಕ ಸ್ಥಳ ಎಂದು ಹೆಸರು ಪಡೆದಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಈ ಕೋಟೆಯನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಅನೇಕ ರೀತಿಯ ಭೂತದ ಚಟುವಟಿಕೆಗಳ (unusual activity) ನಡೆಯುತ್ತವೆ ಎನ್ನಲಾಗಿದೆ. ಸೂರ್ಯ ಮುಳುಗಿದ ನಂತರ ಸರ್ಕಾರವು ಕೋಟೆಗೆ ಜನರ ಪ್ರವೇಶವನ್ನು ನಿಷೇಧಿಸಿದೆ. ಈ ಕೋಟೆಗೆ ಬರುವ ಜನರು ಇಲ್ಲಿ ಕೆಲವು ವಿಚಿತ್ರ ಘಟನೆಗಳು ನಡೆದಿವೆ ಎಂದು ಅನೇಕ ಬಾರಿ ಹೇಳಿದ್ದಾರೆ.

311

 ಜಮಾಲಿ-ಕಮ್ಲಿ ಮಸೀದಿ, ದೆಹಲಿ:
ದೆಹಲಿಯ ಕುತುಬ್ ಮಿನಾರ್ (Kutub minar) ಬಳಿ ಇರುವ ಜಮಾಲಿ-ಕಮ್ಲಿ ಮಸೀದಿಯು ತನ್ನ ಕಾಡುವ ಕಥೆಗಳಿಂದಾಗಿ ಸಾಕಷ್ಟು ಸಮಯದಿಂದ ಸುದ್ದಿಯಲ್ಲಿದೆ. ಜಮಾಲಿ-ಕಾಮ್ಲಿಯಲ್ಲಿ ಜಿನ್ ಗಳು ವಾಸಿಸುತ್ತವೆ ಎಂದು ಜನರು ಹೇಳುತ್ತಾರೆ. ಇಲ್ಲಿನ ಘಟನೆಗಳಿಂದಾಗಿ, ಜನರು ಈ ಸ್ಥಳಕ್ಕೆ ಹೋಗಲು ತುಂಬಾ ಹೆದರುತ್ತಾರೆ.

411

ಮುಖೇಶ್ ಮಿಲ್ಸ್, ಮುಂಬೈ:
ಮುಂಬೈನ ಕೊಲಾಬಾದಲ್ಲಿ ಸಮುದ್ರದ ಬಳಿ ಇರುವ ಮುಖೇಶ್ ಮಿಲ್ಸ್ (Mukesh mills) ಬಹಳ ಪ್ರಸಿದ್ಧ ಸ್ಥಳವಾಗಿದೆ. ಮುಕೇಶ್ ಮಿಲ್ಸ್ ಚಲನಚಿತ್ರ ಚಿತ್ರೀಕರಣದಿಂದ ಹಿಡಿದು ದೆವ್ವದ ಕಥೆಗಳವರೆಗೆ ಪ್ರತಿಯೊಂದಕ್ಕೂ ಸುದ್ದಿಯಲ್ಲಿದೆ. 11 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪ್ರದೇಶ ದೇಶದ 10 ಹಾಂಟೆಡ್ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಲ್ಲಿನ ಕಥೆಯು ಶಾರುಖ್ ಖಾನ್ ಅವರ 'ಓಂ ಶಾಂತಿ ಓಂ' ಅನ್ನು ಹೋಲುತ್ತದೆ.

511

ಶನಿವರವಾಡಾ ಕೋಟೆ, ಪುಣೆ:
ಪುಣೆಯ ಶನಿವರವಾಡಾ ಕೋಟೆಯು ಒಂದು ಭಯಾನಕ ಸ್ಥಳವಾಗಿದೆ. ಇದು ಐತಿಹಾಸಿಕ ಮಹತ್ವವನ್ನು (historical place) ಹೊಂದಿದೆ ಮತ್ತು ಪ್ರಸಿದ್ಧ ಬಾಜಿರಾವ್ ಪೇಶ್ವೆಯೊಂದಿಗೆ ಸಂಬಂಧ ಹೊಂದಿದೆ. ಇದು ಸಾಕಷ್ಟು ಜನಪ್ರಿಯ ಸ್ಥಳವಾಗಿದೆ ಮತ್ತು ಜನರು ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದಾಗ್ಯೂ, ಕೆಲವು ಜನರು ಇದನ್ನು ಹಾಂಟೆಡ್ ಎನ್ನುತ್ತಾರೆ ಮತ್ತು ಸೂರ್ಯ ಮುಳುಗಿದ ನಂತರ ಇಲ್ಲಿಗೆ ಹೋಗದಂತೆ ಸೂಚಿಸಲಾಗಿದೆ.

611

 ಜಿಪಿ ಬ್ಲಾಕ್, ಮೀರತ್:
ಜಿಪಿ ಬ್ಲಾಕ್ ಉತ್ತರ ಪ್ರದೇಶದ ಮೀರತ್ ನಲ್ಲಿರುವ ಅತ್ಯಂತ ಭಯಾನಕ ಸ್ಥಳವಾಗಿದೆ (haunted place). ಮೇಣದ ಬತ್ತಿಯ ಬೆಳಕಿನಲ್ಲಿ ನಾಲ್ಕು ಜನರು ಕುಳಿತಿರುವುದನ್ನು ತಾವು ನೋಡಿದ್ದೇವೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಅದೇ ಸಮಯದಲ್ಲಿ, ಕೆಂಪು ಬಟ್ಟೆ ಧರಿಸಿದ ಹುಡುಗಿಯೊಬ್ಬಳು ಮನೆಯಿಂದ ಹೊರಗೆ ಬರುತ್ತಿರುವುದನ್ನು ಜನರು ಇಲ್ಲಿ ಆಗಾಗ ನೋಡುತ್ತಾರೆ ಎಂದು ಹೇಳುತ್ತಾರೆ. ಈ ಘಟನೆಗಳಿಂದಾಗಿ, ಜನರು ಇಲ್ಲಿಗೆ ಬರಲು ಹೆದರುತ್ತಾರೆ.

711

ವೃಂದಾವನ ಸೊಸೈಟಿ, ಥಾಣೆ:
ಇದು ಥಾಣೆಯ ಅತ್ಯಂತ ಪ್ರಸಿದ್ಧ ರೆಸಿಡೆನ್ಸಿಯಲ್ ಸೊಸೈಟಿಗಳಲ್ಲಿ (residential society) ಒಂದಾಗಿರುವ ಹಾಂಟೆಡ್ ತಾಣ ಇದಾಗಿದೆ. ಅನೇಕ ಜನರು ಈ ಸೊಸೈಟಿಯನ್ನು ಹಾಂಟೆಡ್ ಎಂದು ಕರೆಯುತ್ತಾರೆ ಮತ್ತು ರಾತ್ರಿಯಲ್ಲಿ ಇಲ್ಲಿಗೆ ಬರುವ ಜನರು ಕೆಲವು ವಿಚಿತ್ರ ಘಟನೆಗಳನ್ನು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

811

ಡೌ ಹಿಲ್ ಕುರ್ಸಿಯೋಂಗ್, ಡಾರ್ಜಿಲಿಂಗ್:
ಡೌ ಹಿಲ್ (dow hill) ಕುರ್ಸಿಯೋಂಗ್ ಡಾರ್ಜಿಲಿಂಗ್ ನಅತ್ಯಂತ ಸುಂದರವಾದ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅದರ ನ್ಯಾಚುರಲ್ ಬ್ಯೂಟಿ ಹೊರತಾಗಿ, ಈ ಪ್ರದೇಶವು ತನ್ನ ಭಯಾನಕ ಕಥೆಗಳಿಗೆ ಹೆಸರುವಾಸಿಯಾಗಿದೆ. ಮರ ಕಡಿಯುವ ಜನರು ಕಾಡಿನಲ್ಲಿ ತಲೆಯಿಲ್ಲದ ಹುಡುಗ ಅಲೆದಾಡುವುದನ್ನು ನೋಡಿದ್ದಾರೆ ಎಂದು ಹೇಳುತ್ತಾರೆ.

911

ಕುಲಧಾರಾ ಗ್ರಾಮ, ರಾಜಸ್ಥಾನ:
ರಾಜಸ್ಥಾನದ ಜೈಸಲ್ಮೇರ್ನಿಂದ 18 ಕಿ.ಮೀ ದೂರದಲ್ಲಿರುವ ಕುಲಧಾರಾ ಗ್ರಾಮದಲ್ಲಿ ಒಂದು ಕಾಲದಲ್ಲಿ 600 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದವು, ಆದರೆ ಕಳೆದ ಇನ್ನೂರು ವರ್ಷಗಳ ಹಿಂದೆ ಅದನ್ನು ಬೇರುಸಹಿತ ಕಿತ್ತುಹಾಕಲಾಗಿದೆ. 1825 ರಿಂದ ಈ ಗ್ರಾಮದಲ್ಲಿ ಯಾರೂ ವಾಸಿಸುತ್ತಿಲ್ಲ. ಇಲ್ಲಿನ ನಿವಾಸಿಗಳು ರಾತ್ರೋರಾತ್ರಿ ಈ ಗ್ರಾಮವನ್ನು ತೊರೆದು ಎಲ್ಲೋ ಹೋದರು, ಎನ್ನಲಾಗಿದೆ, ಬಳಿಕೆ ಈ ಗ್ರಾಮ ಇಂದಿಗೂ ಹಾಂಟೆಡ್ ಆಗಿ ಉಳಿದಿದೆ. 

1011

ಗೋಲ್ಕೊಂಡಾ ಕೋಟೆ, ಹೈದರಾಬಾದ್:
ಈ ಕೋಟೆಯನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ಕೋಟೆಯಲ್ಲಿ ರಾಣಿ ತಾರಾಮತಿಯ ಆತ್ಮ (ghost) ಇನ್ನೂ ಅಲೆದಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ, ಅವರು ನಿಧನರಾದ ನಂತರ ತನ್ನ ಪತಿಯೊಂದಿಗೆ ಕೋಟೆಯಲ್ಲಿ ಸಮಾಧಿ ಮಾಡಲಾಯಿತು. ಇಲ್ಲಿ ರಾಣಿಯ ನಡಿಗೆಯ ಶಬ್ದ ಮತ್ತು ರಾತ್ರಿಯಲ್ಲಿ ನೃತ್ಯದ ಶಬ್ದ ಕೇಳಿ ಬರುತ್ತದೆ ಎಂದು ಜನ ಹೇಳುತ್ತಾರೆ.

1111

ದಿ ಮ್ಯಾನ್ಷನ್ ರೆಸಿಡೆನ್ಸಿ ರಸ್ತೆ ಪುಣೆ:
ಪುಣೆಯ ರೆಸಿಡೆನ್ಸಿ ಕ್ಲಬ್ ಬಳಿಯಿರುವ ಪ್ರಸಿದ್ಧ ದಿ ಮ್ಯಾನ್ಶನ್ (the masion) ಭಾರತದ ಅತ್ಯಂತ ಹಾಂಟೆಡ್ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ವಯಸ್ಸಾದ ಮಹಿಳೆಯ ಆತ್ಮವು ಕಾಡುತ್ತದೆ ಎಂದು ಹೇಳಲಾಗುತ್ತೆ. ಒಬ್ಬ ಮುದುಕಿ ಕಿಟಕಿಯಿಂದ ಹೊರಗೆ ನೋಡುತ್ತಾ, ಮತ್ತು ಸಹಾಯಕ್ಕಾಗಿ ಕಿರುಚುತ್ತಿರುವುದನ್ನು ಹಲವರು ಕಂಡದ್ದಾಗಿ ತಿಳಿದು ಬಂದಿದೆ. 
 

Read more Photos on
click me!

Recommended Stories