ಎರಡು ದಿನಗಳ ಕಾಲ ಕೇರಳ, ತಮಿಳುನಾಡು, ಲಕ್ಷದ್ವೀಪ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮ ಲಕ್ಷದ್ವೀಪ ಭೇಟಿಯಲ್ಲಿ ಕೆಲವು ಮರೆಯಲಾಗದ ಕ್ಷಣಗಳನ್ನು ಕಳೆದಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಮೋದಿಯವರ ಈ ಭೇಟಿ ಮಹತ್ವ ಪಡೆದಿತ್ತು. ಲಕ್ಷದ್ವೀಪಕ್ಕೆ ಸುಮಾರು 1150 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಮೋದಿ ಘೋಷಿಸಿದ್ದಾರೆ.
ನಂತರ ಅಲ್ಲಿನ ಬೀಚ್ ಸೌಂದರ್ಯವನ್ನು ಸವಿಯುತ್ತಾ, ಸಮುದ್ರದ ದಡದಲ್ಲಿ ಅಡ್ಡಾಡಿದ್ದಾರೆ.
ಬಳಿಕ ಸ್ನೋರ್ಕೆಲಿಂಗ್ ಅನುಭವಕ್ಕೆ ತಮ್ಮನ್ನು ಮೋದಿ ಒಡ್ಡಿಕೊಂಡಿದ್ದು, ಮುಳುಗದ ಜಾಕೆಟ್ ಧರಿಸಿ ಸಮುದ್ರದ ತಳಕ್ಕೆ ಹೋಗಿ ಅಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ಸ್ನೋರ್ಕೆಲ್ ಎಂಬ ಟ್ಯೂಬ್ ಮೂಲಕ ಉಸಿರಾಡುತ್ತಾ ಸಮುದ್ರದ ತಳಕ್ಕೆ ಹೋಗಿ ನೀರೊಳಗೆ ಈಜುತ್ತಾ ಅಲ್ಲಿನ ಜೀವಿಗಳನ್ನು, ಸಸ್ಯಗಳನ್ನು ಸವಿಯಲು ಈ ಸ್ನೋರ್ಕೆಲಿಂಗ್ ಬಳಸಲಾಗುತ್ತದೆ.
ಮೋದಿಯ ಈ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಇದಕ್ಕಿಂತ ಚೆನ್ನಾಗಿ ಲಕ್ಷದ್ವೀಪ ಟೂರಿಸಂಗೆ ಶಕ್ತಿ ತುಂಬಲು ಸಾಧ್ಯವಿಲ್ಲ, ಎಂಥ ಫಿಟ್ ನಮ್ಮ ಪ್ರಧಾನಿ ಎನ್ನುತ್ತಿದ್ದಾರೆ.
ಈ ವಯಸ್ಸಿನಲ್ಲೂ ಮೋದಿಯ ಫಿಟ್ನೆಸ್, ಉತ್ಸಾಹ ನಮಗೆಲ್ಲ ಮಾದರಿ, ಇವರು ಐರನ್ ಮ್ಯಾನ್ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.