ಡಾ.ಬ್ರೋಗೆ ಏನಾಗಿದೆ? ಎಲ್ಲಾ ಪ್ರಶ್ನೆಗಳಿಗೆ ಸಿಕ್ತು ಉತ್ತರ, ಗ್ಲೋಬಲ್‌ ಕನ್ನಡಿಗ ಯೂಟ್ಯೂಬರ್‌ ಬಿಚ್ಚಿಟ್ರು ಸತ್ಯ!

First Published | Dec 13, 2023, 2:02 PM IST

ನಮಸ್ಕಾರ ದೇವ್ರೋ ಎಂದು ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ನೀಡುತ್ತಿದ್ದ ಡಾ.ಬ್ರೋ ಏನಾಗಿದೆ? ಎಲ್ಲಿದ್ದಾರೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಕೊನೆಗೂ ಸಿಕ್ತು ಉತ್ತರ.
 

ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ಶೇರ್‌ ಮಾಡಿಕೊಳ್ಳುವ ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಡಾ.ಬ್ರೋ ಖ್ಯಾತಿಯ ಗಗನ್  ಶ್ರೀನಿವಾಸ್ ಕಳೆದ ಒಂದು ತಿಂಗಳಿಂದ ಯಾವುದೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿಲ್ಲ. ನಮಸ್ಕಾರ ದೇವ್ರೋ ಎಂದು ತಮ್ಮ ವ್ಲಾಗ್‌ ಆರಂಭಿಸುವ ಡಾ.ಬ್ರೋ ಕಳೆದ ನವೆಂಬರ್‌ 29 ರಂದು ವಿಡಿಯೋ ಹಂಚಿಕೊಂಡಿದ್ದೇ ಕೊನೆ ಅಲ್ಲಿಂದ ಇಲ್ಲಿವರೆಗೆ ಒಂದೇ ಒಂದು ಅಪ್ಡೇಟ್‌ ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ನಿಂದ ಹೊರಬಂದಿಲ್ಲ.

ಇದು ಅವರ ಫಾಲೋವರ್ಸ್‌ಗೆ ಚಿಂತೆಗೆ ಕಾರಣವಾಗಿತ್ತು.  ಚೀನಾವನ್ನು ಹೊಗಳಿದ್ದರಿಂದ ಅವರಿಗೆ  ಕೆಲವರು ದೇಶದ್ರೋಹಿ ಪಟ್ಟ ಕಟ್ಟಿದ್ದರು. ಹೀಗಾಗಿ ಡಿಪ್ರೆಷನ್‌ಗೆ ಹೋಗಿದ್ದಾರೆ ಅಂತೆಲ್ಲ ಸುದ್ದಿಯಾಗುತ್ತಿದೆ. ಗಗನ್ ಎಲ್ಲಿ ಹೋದರು? ಚೀನಾದಲ್ಲಿ ಬಂಧಿಯಾಗಿದ್ದಾರೆ? ಅವರನ್ನು ಕರೆತನ್ನಿ, ಅವರಿಗೆ ಅನಾರೋಗ್ಯ ಸಮಸ್ಯೆಯಾಗಿದೆಯೇ? ಎಂದೆಲ್ಲ ತರಹೇವಾರಿ ಊಹಾಪೋಹಗಳು ಹರಿದಾಡುತ್ತಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಮತ್ತೊಬ್ಬ ಪ್ರಸಿದ್ಧ ಯೂಟ್ಯೂಬರ್‌ ಗ್ಲೋಬಲ್‌ ಕನ್ನಡಿಗ (ನಟ ಮಹಾಬಲ ರಾಮ್) ನಿಮಗೆ ಉತ್ತರ ನೀಡಿದ್ದಾರೆ.

Tap to resize

ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಗ್ಲೋಬಲ್‌ ಕನ್ನಡಿಗ ಯೂಟ್ಯೂಬರ್‌ ನಟ ಮಹಾಬಲ ರಾಮ್ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಮಗದೊಂದು ಪ್ರಸಿದ್ಧ ಯೂಟ್ಯೂಬ್‌ ಚಾನೆಲ್‌ ಫ್ಲೈಯಿಂಗ್‌ ಪಾಸ್‌ಪೋರ್ಟ್ (ಆಶಾ-ಕಿರಣ್‌) ಮತ್ತು ಡಾ.ಬ್ರೋ  ಜೊತೆಗೆ ಒಂದು ದಿನದ ಟ್ರಿಪ್‌ ಹೋದ ಬಗ್ಗೆ ಹಾಕಿಕೊಂಡಿದ್ದಾರೆ.

ಮೊದಲ ಬಾರಿ ಎಲ್ಲರೂ ಸೇರಿದಾಗ ಇವರೆಲ್ಲ ಗೆಳೆಯರಾಗಿದ್ದು ವರುಷದಲ್ಲಿ ಒಂದು ಬಾರಿ ಜೊತೆ ಸೇರಿ ಟ್ರಿಪ್‌ ಹೋಗುವ ಬಗ್ಗೆ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಈ ವರ್ಷ ಕೂಡ ಎಲ್ಲರೂ ಜೊತೆಯಾಗಿ ಶೃಂಗೇರಿ ಕಡೆ ಹೋಗಿದ್ದು, ಈ ಬಗ್ಗೆ ಗ್ಲೂಬಲ್‌ ಕನ್ನಡಿಗ ಸ್ಪಷ್ಟನೆ ನೀಡಿದ್ದಾರೆ.  

ಅಸಲಿಗೆ  ಡಾ.ಬ್ರೋ ಸ್ಟಾರ್ ಅವರು ವಿಶ್ವಕಪ್‌ ಸಮಯದಲ್ಲಿ 2 ತಿಂಗಳ ಕಾಲ ಸ್ಪೋರ್ಟ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಸ್ಪೋರ್ಟ್ ಕನ್ನಡದ ಕೆಲಸ ಮುಗಿಸಿಕೊಂಡು ಆರಾಮವಾಗಿ ರೆಸ್ಟ್ ಮಾಡುತ್ತಿದ್ದಾರೆ. 

ಈ ನಡುವೆ ಮೂವರು ಯೂಟ್ಯೂಬರ್ಸ್ ತಮ್ಮ ಟ್ರಾವೆಲ್‌ ಮುಗಿಸಿಕೊಂಡು ಒಂಡೆದೆ ಸೇರಿ ಶೃಂಗೇರಿ, ಆಗುಂಬೆ ಕಡೆ ಟ್ರಿಪ್‌ ಹೋಗಿದ್ದಾರೆ.  ಎರಡು ದಿನಗಳ ಕಾಲ ದೇವಾಲಯಗಳು, ವೈವಿದ್ಯಮಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.  ಅಲ್ಲಿ ಹೋದಾಗ 4 ಜನರಿಗೂ ಸಿನೆಮಾ ಸ್ಟಾರ್‌ ತರ ಸ್ವಾಗತ ದೊರೆಯಿತೆಂದು ಎಂದು ಗ್ಲೂಬಲ್‌ ಕನ್ನಡಿಗ ವಿವರಿಸಿದ್ದಾರೆ. ಡಾ. ಬ್ರೋ ಫ್ಯಾನ್ಸ್ ಗಾಡಿ ನಿಲ್ಲಿಸಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಡಾ.ಬ್ರೋ  ಚೀನಾ ಜೈಲಲಿದ್ದಾರೆ. ಡಿಪ್ರೆಷ್‌ನ್‌ ಗೆ ಹೋಗಿದ್ದಾರೆ ಎಂಬುದೆಲ್ಲ   ಊಹಾಪೋಹಗಳು ಎಲ್ಲರೂ ಆರಾಮವಾಗಿದ್ದಾರೆ. ಅವರು ತಮ್ಮ ಚಾನೆಲ್‌ನಲ್ಲಿ ವಿಡಿಯೋ ಹಾಕದ್ದಕ್ಕೆ  ಕಾರಣಗಳಿವೆ.   ವಲ್ಡ್‌ ಕ್ಲಾಸ್‌ ಚಾನೆಲ್‌ ಸ್ಟಾರ್‌ಸ್ಟೋರ್ಟ್ ಕನ್ನಡದಲ್ಲಿ ವಿಶ್ವಕಪ್‌ ಗೆ ಸಂಬಂಧಿಸಿದ ವಿಡಿಯೋ ಮಾಡುತ್ತಿದ್ದರು. ಮುಂದಿನ ಸೀರಿಸ್‌ ಬಗ್ಗೆ ಪ್ಲಾನ್‌ ಮಾಡುತ್ತಿದ್ದಾರೆ. ಅವರು ಆರಾಮವಾಗಿ ಖುಷಿಯಾಗಿದ್ದಾರೆ ಎಂದು  ಗ್ಲೂಬಲ್‌ ಕನ್ನಡಿಗ ರಾಮ್‌  ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

Dr Bro global kannadiga

ಇನ್ನು ಈ ನಡುವೆ ನಟ ಶೈನ್‌ ಶೆಟ್ಟಿ ಡಾ,ಬ್ರೋ ಅವರನ್ನು ಭೇಟಿ ಮಾಡಿದ್ದರು. ದೇವ್ರು ಇಲ್ಲಿ ಯಾರಿದ್ದಾರೆ ನೋಡಿ! ನಮ್ಮ ಕನ್ನಡಿಗರ ಹೆಮ್ಮೆ , ಅದ್ಭುತ ಪ್ರತಿಭೆ , ಮುಗ್ಧ ಮನಸ್ಸಿನ ಮುದ್ದು ಹುಡುಗ ಗಗನ್ ಅವರನ್ನು ನಮ್ಮ ಜಸ್ಟ್ ಮ್ಯಾರೀಡ್‌ ಶೂಟಿಂಗ್ ವೇಳೆ ಬೇಟಿ ಆದ ಕ್ಷಣ. ದೇವರು ನಿಮ್ಮನ್ನು ಆಶೀರ್ವದಿಸಲಿ ಸಹೋದರ ನೀವು  ಎಲ್ಲ ಪ್ರೀತಿಗೆ ಅರ್ಹರು ಎಂದು ಶೈನ್‌ ಶೆಟ್ಟಿ ಬರೆದುಕೊಂಡಿದ್ದಾರೆ.
 

Latest Videos

click me!