ರೈಲಿನಲ್ಲಿ ಯಾವ ಆಹಾರ ಹೆಚ್ಚು ಆರ್ಡರ್ ಆಯ್ತು? ಸ್ವಿಗ್ಗಿ ವರದಿಯಲ್ಲಿ ಇಂಟ್ರೆಸ್ಟಿಂಗ್ ಮಾಹಿತಿ

Published : Jul 09, 2026, 04:43 PM IST

ಟ್ರೈನ್ ಪ್ರಯಾಣದ ವೇಳೆ ಊಟ-ತಿಂಡಿಗಾಗಿ ಇನ್ಮುಂದೆ ಸ್ಟೇಷನ್‌ಗಳನ್ನೇ ನೆಚ್ಚಿಕೊಳ್ಳಬೇಕಿಲ್ಲ. ಸ್ವಿಗ್ಗಿ ಆ್ಯಪ್‌ನಲ್ಲಿಯೇ ನಿಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಬಹುದು. ಸ್ವಿಗ್ಗಿಯ 'ಫುಡ್ ಆನ್ ಟ್ರೈನ್' ಫೀಚರ್ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ. 

PREV
16
ಫುಡ್ ಆರ್ಡರ್‌ಗಳ ಬಗ್ಗೆ ಸ್ವಿಗ್ಗಿಯಿಂದ ಮಹತ್ವದ ರಿಪೋರ್ಟ್ ಔಟ್

ಸ್ವಿಗ್ಗಿ ಇತ್ತೀಚೆಗೆ ರೈಲಿನಲ್ಲಿನ ಫುಡ್ ಆರ್ಡರ್‌ಗಳ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, 2026ರ ಏಪ್ರಿಲ್‌ನಿಂದ ಜೂನ್ ನಡುವೆ 'ಫುಡ್ ಆನ್ ಟ್ರೈನ್' ಸೇವೆಗೆ ಬೇಡಿಕೆ ಭಾರೀ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಫುಡ್ ಆರ್ಡರ್‌ಗಳು ಸುಮಾರು ಮೂರು ಪಟ್ಟು ಹೆಚ್ಚಾಗಿವೆ ಎಂದು ಕಂಪನಿ ಹೇಳಿದೆ.

26
ಬೇಸಿಗೆ ರಜೆಯಲ್ಲಿ ರೈಲು ಪ್ರಯಾಣಿಕರಿಂದ ಫುಡ್‌ ಆರ್ಡರ್‌ಗೆ ಹೆಚ್ಚಿದ ಬೇಡಿಕೆ

ಬೇಸಿಗೆ ರಜೆಯಲ್ಲಿ ಹೆಚ್ಚು ಜನ ರೈಲಿನಲ್ಲಿ ಪ್ರಯಾಣಿಸುವುದರಿಂದ ಈ ಸೇವೆ ಬಳಕೆ ಹೆಚ್ಚಾಗಿದೆ. ಒಂದೇ PNRನಲ್ಲಿ ಪ್ರಯಾಣಿಸುವ ಅನೇಕ ಪ್ರಯಾಣಿಕರು ಎರಡು ಅಥವಾ ಹೆಚ್ಚು ನಿಲ್ದಾಣಗಳಿಗೆ ಮುಂಚಿತವಾಗಿ ಆಹಾರ ಬುಕ್ ಮಾಡುವುದು ಕೂಡ ಗಣನೀಯವಾಗಿ ಹೆಚ್ಚಾಗಿದೆ. ಇಂತಹ ಆರ್ಡರ್‌ಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 300ಕ್ಕಿಂತ ಹೆಚ್ಚು ಏರಿಕೆ ಕಂಡಿವೆ ಎಂದು ಸ್ವಿಗ್ಗಿ ತಿಳಿಸಿದೆ.

36
ನಾನ್‌-ವೆಜ್ ವಿಭಾಗದಲ್ಲಿ ಬಿರ್ಯಾನಿಗೆ ಹೆಚ್ಚಿದ ಬೇಡಿಕೆ

ರೈಲು ಪ್ರಯಾಣದಲ್ಲಿ ಜನರು ಹೆಚ್ಚಾಗಿ ರೋಟಿ ಆರ್ಡರ್ ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಸ್ವಿಗ್ಗಿ ಮೂಲಕ 4 ಲಕ್ಷಕ್ಕೂ ಹೆಚ್ಚು ರೋಟಿಗಳನ್ನು ಆರ್ಡರ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದೇ ರೀತಿ, ಮಸಾಲ ದೋಸೆ, ಆಲೂ ಪರಾಠ, ಮೆಕ್ ಆಲೂ ಟಿಕ್ಕಿ ಬರ್ಗರ್ ಮತ್ತು ಚಿಕನ್ ಬಿರಿಯಾನಿ (ನಾನ್-ವೆಜ್ ವಿಭಾಗದಲ್ಲಿ ಅತಿ ಹೆಚ್ಚು) ಅತಿ ಹೆಚ್ಚು ಆರ್ಡರ್ ಆದ ಇತರ ಆಹಾರ ಪದಾರ್ಥಗಳಾಗಿವೆ. ಈ ಪಟ್ಟಿಯನ್ನು ನೋಡಿದರೆ, ಪ್ರಯಾಣಿಕರು ರೈಲಿನಲ್ಲಿ ಸುಲಭವಾಗಿ ತಿನ್ನಬಹುದಾದ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬುದು ಸ್ಪಷ್ಟ.

46
ಬೇಸಿಗೆಯಲ್ಲಿ ಹೆಚ್ಚಿದ ತಂಪು ಪಾನಿಯಗಳ ಬೇಡಿಕೆ

ಬೇಸಿಗೆಯಲ್ಲಿ ತಂಪು ಪಾನೀಯಗಳ ಆರ್ಡರ್‌ಗಳು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿವೆ. ಸಾಫ್ಟ್ ಡ್ರಿಂಕ್ಸ್ ಆರ್ಡರ್‌ಗಳು ಶೇ. 354ರಷ್ಟು ಹೆಚ್ಚಿದ್ದರೆ, ಐಸ್‌ಕ್ರೀಂ ಆರ್ಡರ್‌ಗಳು ಶೇ. 140ರಷ್ಟು ಏರಿಕೆ ಕಂಡಿವೆ. ಲಸ್ಸಿ ಆರ್ಡರ್‌ಗಳು ಸುಮಾರು ಎರಡು ಪಟ್ಟು ಹೆಚ್ಚಾಗಿವೆ. ಬೇಸಿಗೆ ಪಾನೀಯಗಳಲ್ಲಿ ಮ್ಯಾಂಗೋ ಶೇಕ್ ಅತ್ಯಂತ ಜನಪ್ರಿಯವಾಗಿದ್ದು, ಚಳಿಗಾಲಕ್ಕೆ ಹೋಲಿಸಿದರೆ ಇದರ ಬೇಡಿಕೆ ಸುಮಾರು 10 ಪಟ್ಟು ಹೆಚ್ಚಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

56
ಫುಡ್ ಆನ್ ಟ್ರೈನ್' ಸೇವೆ ಬೆಂಗಳೂರಿನಲ್ಲೂ ಲಭ್ಯ

ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ, ಸ್ವಿಗ್ಗಿ ತನ್ನ 'ಫುಡ್ ಆನ್ ಟ್ರೈನ್' ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಇತ್ತೀಚೆಗೆ 17 ಹೊಸ ರೈಲ್ವೆ ನಿಲ್ದಾಣಗಳನ್ನು ಈ ಸೇವೆಗೆ ಸೇರಿಸಲಾಗಿದೆ. ಕೆಎಸ್‌ಆರ್ ಬೆಂಗಳೂರು, ಗುರುಗ್ರಾಮ್, ಉದಯಪುರ, ಬಿಕಾನೇರ್, ನಾಂದೇಡ್, ಮತ್ತು ನಿಜಾಮಾಬಾದ್‌ನಂತಹ ನಿಲ್ದಾಣಗಳು ಈ ಪಟ್ಟಿಯಲ್ಲಿವೆ. ಪ್ರಸ್ತುತ, ಈ ಸೇವೆಯು ದೇಶದಾದ್ಯಂತ 180ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ. ಕೆಲವು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ನಾಲ್ಕು ದಿನಗಳ ಮೊದಲೇ ಆಹಾರವನ್ನು ಬುಕ್ ಮಾಡುತ್ತಾರೆ ಎಂದು ಕಂಪನಿ ಹೇಳಿದೆ.

66
ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡೋದು ಹೇಗೆ?

ಸ್ವಿಗ್ಗಿ ಆ್ಯಪ್‌ನಲ್ಲಿ ರೈಲಿನಲ್ಲಿ ಆಹಾರ ಆರ್ಡರ್ ಮಾಡುವುದು ತುಂಬಾ ಸುಲಭ. ಆ್ಯಪ್‌ನಲ್ಲಿರುವ 'Scan Your Ticket' ಫೀಚರ್ ಬಳಸಿ ನಿಮ್ಮ ರೈಲ್ವೆ ಟಿಕೆಟ್ ಸ್ಕ್ಯಾನ್ ಮಾಡಿದರೆ, PNR ನಂಬರ್ ತಾನಾಗಿಯೇ ಸೇರಿಕೊಳ್ಳುತ್ತದೆ. ನಂತರ, ಲಭ್ಯವಿರುವ ನಿಲ್ದಾಣಗಳು ಮತ್ತು ರೆಸ್ಟೋರೆಂಟ್‌ಗಳಿಂದ ನಿಮಗೆ ಇಷ್ಟವಾದ ಆಹಾರವನ್ನು ಆಯ್ಕೆ ಮಾಡಿ ಆರ್ಡರ್ ಮಾಡಬಹುದು. ರೈಲು ನಿಗದಿತ ನಿಲ್ದಾಣವನ್ನು ತಲುಪುವ ಹೊತ್ತಿಗೆ, ನಿಮ್ಮ ಊಟ ನೇರವಾಗಿ ನಿಮ್ಮ ಸೀಟಿಗೆ ಬಂದು ತಲುಪುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories