ಬೆಂಗಳೂರಿನಿಂದ ಬೆಳಗಾವಿಗೆ ಪ್ರತಿದಿನ ಸಂಚರಿಸುವ ರೈಲುಗಳಲ್ಲಿ ಕನ್ಫರ್ಮ್ ಟಿಕೆಟ್ ಸಿಗುವುದು ಕಷ್ಟಕರ. ಆದರೆ, ಪ್ರಯಾಣದ ದಿನಾಂಕದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ, ವಾರದ ಬೇರೆ ದಿನಗಳಲ್ಲಿ ಸಂಚರಿಸುವ ಹಲವು ವಿಶೇಷ ರೈಲುಗಳಲ್ಲಿ ಸುಲಭವಾಗಿ ಕನ್ಫರ್ಮ್ ಟಿಕೆಟ್ ಪಡೆಯಬಹುದು.
ಬೆಂಗಳೂರಿನಿಂದ ಬೆಳಗಾವಿಗೆ ರೈಲು ಮೂಲಕ ಪ್ರಯಾಣಿಸಬೇಕಾದ್ರೆ ಕನಿಷ್ಠ ಅಂದ್ರು 30 ದಿನಗಳ ಮುಂಚೆಯೇ ಟಿಕೆಟ್ ಕಾಯ್ಡಿರಿಸಬೇಕಾಗುತ್ತದೆ. ಪ್ರತಿದಿನ ಬೆಂಗಳೂರು ಮತ್ತು ಬೆಳಗಾವಿ ನಡುವೆ ಹಲವು ರೈಲುಗಳು ಸಂಚರಿಸಿದ್ರೂ ಕನ್ಫರ್ಮ್ ಟಿಕೆಟ್ ಸಿಗೋದು ವಿರಳವಾಗಿದೆ. ಪ್ರಯಾಣ ಸಮಯವನ್ನು ಕೊಂಚ ಬದಲಾವಣೆ ಮಾಡಿಕೊಂಡ್ರೆ ನಿಮಗೆ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಗಳಿವೆ.
26
ವಿಶ್ವಮಾನವ ಎಕ್ಸ್‌ಪ್ರೆಸ್ (202676), ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (20653) ಮತ್ತು ರಾಣಿ ಚೆನ್ನಮ್ಮಾ ಎಕ್ಸ್‌ಪ್ರೆಸ್
ಬೆಂಗಳೂರಿನಿಂದ ಬೆಳಗಾವಿಗೆ ಪ್ರತಿದಿನ ವಿಶ್ವಮಾನವ ಎಕ್ಸ್‌ಪ್ರೆಸ್ (202676), ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (20653) ಮತ್ತು ರಾಣಿ ಚೆನ್ನಮ್ಮಾ ಎಕ್ಸ್‌ಪ್ರೆಸ್ ರೈಲುಗಳು ಚಲಿಸುತ್ತವೆ. ಈ ಮೂರು ಜನಪ್ರಿಯ ರೈಲುಗಳ ಹೊರತಾಗಿಯೂ ಹಲವು ಟ್ರೈನ್ ಸಂಚರಿಸುತ್ತವೆ. ಆದ್ರೆ ಈ ರೈಲುಗಳು ಸೀಮಿತ ದಿನಗಳಲ್ಲಿ ಚಲಿಸುತ್ತವೆ. ಹಾಗಾಗಿ ಪ್ರಯಾಣದ ಸಮಯ ಬದಲಾಯಿಸಿಕೊಂಡ್ರೆ ನಿಮಗೆ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
36
ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ರೈಲುಗಳು
ರೈಲು ಸಂಖ್ಯೆ 19668: ಪ್ಯಾಲೇಸ್ ಕ್ವೀನ್ ಹಮ್‌ಸಫರ್: ಈ ರೈಲು ಪ್ರತಿ ಗುರುವಾರ ಮಧ್ಯಾಹ್ನ 12.10ಕ್ಕೆ ತನ್ನ ಪ್ರಯಾಣ ಆರಂಭಿಸಿ ರಾತ್ರಿ 11.05ಕ್ಕೆ ಬೆಳಗಾವಿ ನಗರಕ್ಕೆ ತಲುಪುತ್ತದೆ.
ರೈಲು ಸಂಖ್ಯೆ 16534: ಜೋಧಪುರ ಎಕ್ಸ್‌ಪ್ರೆಸ್: ಈ ರೈಲು ಪ್ರತಿ ಭಾನುವಾರ ಇರಲಿದೆ. ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 10.5ಕ್ಕೆ ಬೆಳಗಾವಿ ತಲುಪುತ್ತದೆ. (ಈ ರೈಲು ಗುಂತಕಲ್, ಬಳ್ಳಾರಿ, ಗದಗ, ಹುಬ್ಬಳ್ಳಿ ಮಾರ್ಗವಾಗಿ ಚಲಿಸೋದರಿಂದ ಪ್ರಯಾಣದ ಅವಧಿ 17 ಗಂಟೆಗೂ ಹೆಚ್ಚಾಗುತ್ತದೆ). ಇದೇ ಮಾರ್ಗವಾಗಿಯೇ ಅಜ್ಮೀರ್ ಗರೀಬ್ ನವಾಜ್ ಎಕ್ಸ್‌ಪ್ರೆಸ್ (16532) ಶುಕ್ರವಾರ ಬೆಂಗಳೂರಿನಿಂದ ಚಲಿಸುತ್ತದೆ.
ರೈಲು ಸಂಖ್ಯೆ 20686: ಗಾಂಧಿಧಾಮ ಸೂಪರ್‌ಫಾಸ್ಟ್: ಪ್ರತಿ ಶನಿವಾರ ಕೆಎಸ್‌ಆರ್ ಬೆಂಗಳೂರಿನಿಂದ ರಾತ್ರಿ 11.50ಕ್ಕೆ ಹೊರಟು ಮರುದಿನ ಬೆಳಗ್ಗೆ 10.05ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 16210: ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್: ಈ ರೈಲು ಮಂಗಳವಾರ ಮತ್ತು ಗುರುವಾರ ಕೆಎಸ್‌ಆರ್ ಬೆಂಗಳೂರಿನಿಂದ ರಾತ್ರಿ 11.50ಕ್ಕೆ ಹೊರಟು ಮರುದಿನ ಬೆಳಗ್ಗೆ 10.05ಕ್ಕೆ ಬೆಳಗಾವಿ ತಲುಪಲಿದೆ.
56
ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ರೈಲುಗಳು
ರೈಲು ಸಂಖ್ಯೆ 06543: ಬಿಕಾನೇರ್ ಸ್ಪೆಷಲ್ ಎಕ್ಸ್‌ಪ್ರೆಸ್: ಪ್ರತಿ ಬುಧವಾರ ಯಶವಂತಪುರ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಪ್ರಯಾಣ ಆರಂಭಿಸಿ, ಸಂಜೆ 5.35ಕ್ಕೆ ಬೆಳಗಾವಿ ತಲುಪುತ್ತದೆ .
ರೈಲು ಸಂಖ್ಯೆ 22685: ಚಂಡೀಗಢ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್: ಬುಧವಾರ ಮತ್ತು ಶನಿವಾರ ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 12.15ಕ್ಕೆ ಬೆಳಗಾವಿ ತಲುಪುತ್ತದೆ.
ರೈಲು ಸಂಖ್ಯೆ 12629: ಕರ್ನಾಟಕ ಸಂಪರ್ಕ ಕ್ರಾಂತಿ: ಮಂಗಳವಾರ ಮತ್ತು ಗುರುವಾರದಂದು ಯಶವಂತರಪುರ ನಿಲ್ದಾಣದಿಂದ ಮಧ್ಯಾಹ್ನ 3ಕ್ಕೆ ಪ್ರಯಾಣ ಆರಂಭಿಸಿ ರಾತ್ರಿ 12.15ಕ್ಕೆ ಬೆಳಗಾವಿ ನಿಲ್ದಾಣ ತಲುಪುತ್ತದೆ.
66
ಹೆಚ್ಚಿನ ರೈಲುಗಳು
ಈ ಮೇಲಿನ ಎಲ್ಲ ರೈಲುಗಳ ಜೊತೆ ಬೆಂಗಳೂರಿನಿಂದ ಬೆಳಗಾವಿಗೆ ಪಂಡರಪುರ ಎಕ್ಸ್‌ಪ್ರೆಸ್ (16541), ಶ್ರೀ ಗಂಗಾನಗರ ಹಮ್‌ಸಫರ್ (22498), ದಾದರ್ ಸೆಂಟ್ರಲ್ ಚಾಲುಕ್ಯ (11022) (11006), ಮುಂಬೈ ಎಲ್‌ಟಿಟಿ ಸ್ಪೆಷಲ್ ಎಕ್ಸ್‌ಪ್ರೆಸ್ (01014), ಮುಂಬೈ ಎಲ್‌ಟಿಟಿ ಎಕ್ಸ್‌ಪ್ರೆಸ್ (16553) ರೈಲುಗಳಿವೆ. ಹೆಚ್ಚಿನ ಮಾಹಿತಿಗಾಗಿ https://www.irctc.co.in/nget/train-search ಪೇಜ್‌ಗೆ ಭೇಟಿ ನೀಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.