ವಿಮಾನ ಪ್ರಯಾಣ ಮಾಡುವ ಸುವರ್ಣವಕಾಶ; ಮಿಸ್ ಮಾಡ್ಕೊಂಡು ನಿರಾಶರಾಗಬೇಡಿ

First Published | Nov 29, 2024, 6:05 PM IST

Black Friday Sale ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ವಿಮಾನ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿವೆ.

ಬ್ಲ್ಯಾಕ್ ಫ್ರೈಡೇ ಸೇಲ್

ಏರ್ ಇಂಡಿಯಾ ತನ್ನ ದೇಶೀಯ ವಿಮಾನ ಟಿಕೆಟ್‌ಗಳ ಮೇಲೆ ಸುಮಾರು 20% ರಿಯಾಯಿತಿ ನೀಡ್ತಿದೆ. ಇಂಡಿಗೋ ಒನ್-ವೇ ಟಿಕೆಟ್‌ಗಳನ್ನು ಕೇವಲ ₹1,199 ರಿಂದ ಶುರು ಮಾಡಿದೆ. ಈ ಆಫರ್ 2025ರ ಮಾರ್ಚ್‌ವರೆಗೆ ವ್ಯಾಲಿಡ್ ಇದೆ.

ಬ್ಲ್ಯಾಕ್ ಫ್ರೈಡೇ ಸೇಲ್ ಎಲ್ಲಾ ಕಡೆ ಶುರುವಾಗಿದ್ದು, ಹಲವು ಕಂಪನಿಗಳು ಆಕರ್ಷಕ ಆಫರ್‌ಗಳನ್ನು ನೀಡುತ್ತಿವೆ. ಏರ್ ಇಂಡಿಯಾ ಮತ್ತು ಇಂಡಿಗೋ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ಭಾರಿ ರಿಯಾಯಿತಿ ನೀಡುತ್ತಿವೆ.

ಟಿಕೆಟ್ ಆಫರ್

ಈ ಸೇಲ್ ನವೆಂಬರ್ 29, 2024 ರಿಂದ ಡಿಸೆಂಬರ್ 2, 2024 ರವರೆಗೆ ಇದೆ. ಏರ್ ಇಂಡಿಯಾ ದೇಶೀಯ ವಿಮಾನಗಳಲ್ಲಿ 20% ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ 12% ರಿಯಾಯಿತಿ ನೀಡ್ತಿದೆ. ಈ ಆಫರ್‌ನಲ್ಲಿ ಬುಕ್ ಮಾಡಿದ ಟಿಕೆಟ್‌ಗಳು 2025ರ ಜೂನ್ 30ರವರೆಗೆ ವ್ಯಾಲಿಡ್ ಇದೆ. ಇಂಡಿಯಾ ಮತ್ತು ಆಸ್ಟ್ರೇಲಿಯಾ ಅಥವಾ ಉತ್ತರ ಅಮೆರಿಕಾ ನಡುವಿನ ವಿಮಾನಗಳಿಗೆ ಈ ಆಫರ್ ಅಕ್ಟೋಬರ್ 30, 2025ರವರೆಗೆ ಇದೆ.

Tap to resize

ಏರ್ ಇಂಡಿಯಾ

UPI ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರು ದೇಶೀಯ ಮತ್ತು ಅಂತರಾಷ್ಟ್ರೀಯ ಬುಕಿಂಗ್‌ಗಳಲ್ಲಿ ಕ್ರಮವಾಗಿ ₹400 ಮತ್ತು ₹1,200 ರಿಯಾಯಿತಿ ಪಡೆಯಬಹುದು. ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳಲ್ಲಿ ₹3,000 ವರೆಗೆ ರಿಯಾಯಿತಿ ಪಡೆಯಬಹುದು.

ಇಂಡಿಗೋ

ಇಂಡಿಗೋ ತನ್ನ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ದೇಶೀಯ ವಿಮಾನಗಳಿಗೆ ₹1,199 ರಿಂದ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ₹5,199 ರಿಂದ ಒನ್-ವೇ ಟಿಕೆಟ್‌ಗಳನ್ನು ನೀಡ್ತಿದೆ. ಈ ಸೇಲ್ ಜನವರಿ 1 ರಿಂದ ಮಾರ್ಚ್ 31, 2025 ರವರೆಗಿನ ಪ್ರಯಾಣಕ್ಕೆ ಅನ್ವಯಿಸುತ್ತದೆ. ಇಂಡಿಗೋ ಫಾಸ್ಟ್ ಫಾರ್ವರ್ಡ್ ಸೇವೆಯಲ್ಲಿ 15% ಮತ್ತು ಪ್ರಿ-ಪೇಯ್ಡ್ ಬ್ಯಾಗೇಜ್‌ನಲ್ಲಿ 50% ರಿಯಾಯಿತಿ ನೀಡ್ತಿದೆ.

Latest Videos

click me!