ಹಲಸೂರು ಠಾಣೆಯಲ್ಲಿ ಆರೋಪಿ ಕೃಪಲಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಲಂಗ್ಲಿಂಗ್ ಆರೋಪಿಯಾಗಿದ್ದ ಕೃಪಲಾನಿ ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದೆ ಆರೋಪ ಕೇಳಿಬಂದಿದೆ
ಸ್ಲಂಗ್ಲಿಂಗ್ ಪ್ರಕರಣದಲ್ಲಿ ತಗ್ಲಾಕೊಂಡಿದ್ದ ಆರೋಪಿ ಕೃಪಲಾನಿ ವಿರುದ್ದ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಬಾರಿ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದೆ. ಇಷ್ಟು ದಿನ ಕಳ್ಳಸಾಗಾಣೆ ಆರೋಪ ಹೊತ್ತಿದ್ದ ಆರೋಪಿ ಕೃಪಲಾನಿ ಇದೀಗ ಗಂಭೀರ ಪ್ರಕರಣದಲ್ಲಿ ಸಿಲುಕಿ ರಾದ್ದಾಂತ ಮಾಡಿದ್ದಾನೆ.
25
ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲು
ಆರೋಪಿ ಕೃಪಾಲಾನಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಸ್ಟಮ್ಸ್ ಅಧಿಕಾರಿ ಆಂತೋನಿ ಎಂಬುವವರಿಂದ ದೂರು ದಾಖಲಿಸಿದ್ದಾರೆ. ಕೃಪಲಾನಿ ರಂಪಾಟ ಮಾಡಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
35
8.5 ಲಕ್ಷ ದಂಡದ ಸೇಡು
ಮಂಗಳೂರಿನಲ್ಲಿ ಕಸ್ಟಮ್ಸ್ ಸೂಪರಿಡೆಂಟ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಿ.ಆಂತೋನಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಸ್ಮಗ್ಲಿಂಗ್ ಕೇಸ್ ಒಂದರಲ್ಲಿ ಕೃಪಲಾನಿ ಸಿಲುಕಿಕೊಂಡಿದ್ದ. ಕಸ್ಟಮ್ಸ್ ಚಾರ್ಜ್ ತಪ್ಪಿಸಲು ಸ್ಮಗ್ಲಿಂಗ್ ಹಾದಿ ಹಿಡಿದಿದ್ದ. ಈ ಸಂಬಂಧ ಕೃಪಲಾನಿಗೆ ಅಧಿಕಾರಿ ಅಂತೋನಿ ಸುಮಾರು 8.50 ಲಕ್ಷದಷ್ಟು ದಂಡ ವಿಧಿಸಿದ್ದರು.
ದಂಡ ವಿಧಿಸಿದ್ದ ಅಂತೋನಿ ವಿರುದ್ದ ಸೇಡು ತೀರಿಸಿಕೊಳ್ಳಲು ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಹಾಗೂ ವಂಚಿಸಿದ್ದಾನೆ ಅನ್ನೋ ಆರೋಪಗಳು ಕೇಳಿಬಂದಿದೆ. ಆಂತೋನಿ ಅವರ ಸಹೋದ್ಯೋಗಿ ಗೆ ಕರೆ ಮಾಡಿ ಧಮಕಿ ಹಾಕಿದ್ದ ಅನ್ನೋ ಆೋಪವೂ ಕೇಳಿಬಂದಿದೆ.
55
ಹೆಂಡತಿ ಮಕ್ಕಳನ್ನು ಬಿಡುವುದಿಲ್ಲ
ಅಂತೋನಿ ದಂಡ ವಿಧಿಸಿದ ಕಾರಣ ಕೆರಳಿದ ಕೃಪಲಾನಿ, ನಿನ್ನನ್ನು ನಿನ್ನ ಹೆಂಡತಿ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬಿದರಿಕೆ ಹಾಕಿದ್ದ. ಇದೀಗ ಅಂತೋನಿ ದೂರು ದಾಖಲಿಸಿ ಕೃಪಲಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. BNS ಸೆಕ್ಷನ್ 308/4, 351/3, 351/1 ನ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ