ರಾಜ್ಯದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಕೈಗೆಟುಕುವ ಬೆಲೆಯಲ್ಲಿ ಬಿಯರ್, ಗರಿಷ್ಠ 75 ರೂ ಇಳಿಕೆ

Published : May 18, 2026, 08:17 AM IST

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಎಲ್ಲಾ ಬಿಯರ್ ದರದಲ್ಲಿ ಭಾರಿ ಇಳಿಕೆಯಾಗಿದೆ. 185 ರೂ ಆಗಿದ್ದ ಕಿಂಗ್‌ಫಿಶರ್ ಬಿಯರ್ ಇದೀಗ 110 ರೂಪಾಯಿಗೆ ಲಭ್ಯವಿದೆ. ಎಲ್ಲಾ ಬಿಯರ್ ಮೇಲೆ ಗರಿಷ್ಠ 75 ರೂಪಾಯಿ ಇಳಿಕೆಯಾಗಿದೆ. 

PREV
15
ಬಿಯರ್ ಬೆಲೆಯಲ್ಲಿ ಭಾರಿ ಇಳಿಕೆ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಕ್ಕಿ ತೊಗರಿಬೇಳೆ ಬೆಲೆ ಏರಿಕೆ, ಸಾರಿಗೆ ಬೆಲೆ ಏರಿಕೆ ಸೇರಿದಂತೆ ದುಬಾರಿ ದುನಿಯಾದಲ್ಲಿ ರಾಜ್ಯದ ಮದ್ಯಪ್ರಿಯರಿಗೆ ಗುಡ್ ನ್ಯೂಸ್. ರಾಜ್ಯದಲ್ಲಿ ಎಲ್ಲಾ ಬಿಯರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. 20 ರಿಂದ ಗರಿಷ್ಠ 75 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಇಳಿಕೆಯಾಗಿದೆ. ವಿಶೇಷ ಅಂದರೆ ಹಲವು ಬ್ರ್ಯಾಂಡ್ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

25
ಬಿಯರ್ ಪ್ರಿಯರಿಗೆ ಬಂಪರ್

ಬಿಯರ್ ಬೆಲೆ ಇಳಿಕೆಯಿಂದ ಇದೀಗ ಬಿಯರ್ ಪ್ರಿಯರಿಗೆ ಬಂಪರ್. ಬಿಸಿಲ ಬೇಗೆಯಲ್ಲಿ ಇದೀಗ ಚಿಲ್ಡ್ ಬಿಯರ್ ಇಷ್ಟಪಡುವ ಹಲವರು ಈ ಬೆಲೆ ಇಳಿಕೆಯಿಂದ ಸಂಭ್ರಮಿಸುತ್ತಿದ್ದಾರೆ.

  • ಕಿಂಗ್ ಫಿಶರ್ ಪ್ರಿಮಿಯಂ 185 ರೂ. ಯಿಂದ‌ 110 ರೂ ಇಳಿಕೆ.( ಒಟ್ಟು 75 ರೂ ಇಳಿಕೆ)
  • ಹೈನೆಕೆನ್ ಸಿಲ್ವರ್( 650 ml) ಮೊದಲು 270 ರೂ. ಈಗ 195 ರೂ. ( ಒಟ್ಟು 75 ರೂ.ಇಳಿಕೆ
  • ಅಲ್ಟ್ರಾ ಬಿಯರ್ ಮೊದಲು 225 ರೂ. ಈಗ 150 ರೂ. ( ಒಟ್ಟು 75 ರೂ.ಇಳಿಕೆ)
  • ಬಡ್ ವೈಸರ್ ಪ್ರಿಮಿಯಂ ಮೊದಲು 225 ರೂ. ಈಗ 205 ರೂ. ( ಒಟ್ಟು 20 ರೂಪಾಯಿ ಇಳಿಕೆ.
35
ಹೊಸ ಪದ್ಧತಿಯಿಂದ ಬಿಯರ್ ಬೆಲೆ ಇಳಿಕೆ

ಮದ್ಯಕ್ಕೆ ತೆರಿಗೆ ವಿಧಿಸುವ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಎಐಬಿಯಿಂದ ಇದೀಗ ಮಧ್ಯದ ಪ್ರಮಾಣ ಆಧರಿಸಿ ತೆರಿಗೆ ವಿಧಿಸುವ ಪದ್ಧತಿಯನ್ನು ಜಾರಿಗೊಳಿಸಿದೆ. ಇದರ ಪರಿಣಾಮ ಎಲ್ಲಾ ಬಿಯರ್ ಬೆಲೆ ಇಳಿಕೆಯಾಗಿದೆ. ಹೊಸ ತೆರಿಗೆ ಪದ್ಧತಿಯಿಂದ ಬಿಯರ್ ಕಂಪನಿಗಳು ತಮ್ಮ ಬ್ರ್ಯಾಂಡ್‌ಗಳ ಬೆಲೆ ಇಳಿಸಿದೆ.

45
ಬೆಲೆ ಏರಿಕೆ ನಡುವೆ ಬಿಯರ್ ಬೆಲೆ ಇಳಿಕೆ

ಮದ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದು ಜನರನ್ನು ಕಂಗಾಲು ಮಾಡಿದೆ. ಜನಸಾಮಾನ್ಯರ ಬದುಕು ದುಬಾರಿಯಾಗುತ್ತಿದೆ. ಇದರ ನಡುವೆ ಬಿಯರ್ ಪ್ರಿಯರು ನಿರಾಳರಾಗಿದ್ದಾರೆ.

55
ಬಿಯರ್ ಇಳಿಕೆ, ವಿಸ್ಕಿ ಸೇರಿದಂತೆ ಇತರ ಬ್ರ್ಯಾಂಡ್ ಬೆಲೆ ಏರಿಕೆ

ಬಿಯರ್ ಬೆಲೆ ಇಳಿಕೆಯಾಗಿದೆ. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ವಿಸ್ಕಿ ಸೇರಿದಂತೆ ಇತರ ಮದ್ಯಗಳ ಮೇಲಿನ ಬೆಲೆ ಏರಿಕೆ ಮಾಡಿದೆ. ಅದರಲ್ಲೂ ಕಡಿಮೆ ಬೆಲೆಯ ಮದ್ಯಗಳ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟಿತ್ತು. ಇದೀಗ ಬಿಯರ್ ಬೆಲೆ ಇಳಿಕೆಯಿಂದ ಮದ್ಯ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories