ಬೀದಿ ನಾಯಿಗಳ ನಿಯಂತ್ರಣಕ್ಕೆ ಟರ್ಕಿ, ಜಪಾನ್, ಸ್ವಿಡ್ಜರ್‌ಲೆಂಡ್‌, ನೆದರ್ಲೆಂಡ್ಸ್‌ನಲ್ಲಿ ಏನ್ ಮಾಡ್ತಾರೆ?

Published : Aug 13, 2025, 12:13 PM IST

ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚುತ್ತಿದ್ದು, ದಿಲ್ಲಿ ಮಾದರಿಯಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕೂಗು ಕೇಳಿಬಂದಿದೆ. ಈ ಲೇಖನದಲ್ಲಿ ಪ್ರಮುಖ ನಗರಗಳಲ್ಲಿನ ಬೀದಿ ನಾಯಿಗಳ ಸಂಖ್ಯೆ ಮತ್ತು ಅವುಗಳ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ಚರ್ಚಿಸಲಾಗಿದೆ.

PREV
112
ಬೀದಿ ನಾಯಿಗಳ ದಾಳಿ

ರಾಜಧಾನಿ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಬೀದಿ ನಾಯಿಗಳ ದಾಳಿ ಅಧಿಕವಾಗುತ್ತಿದೆ. ದಿಲ್ಲಿ-ಎನ್‌ಸಿಆರ್ ವಲಯದಲ್ಲಿ ಎಲ್ಲಾ ಬೀದಿನಾಯಿಗಳನ್ನು ಹೊರವಲಯದ ಶೆಡ್‌ಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಇದೇ ರೀತಿಯಲ್ಲಿಯೇ ಬೆಂಗಳೂರಿನಲ್ಲಿರುವ ಬೀದಿನಾಯಿಗಳನ್ನು ಶೆಡ್‌ಗೆ ಕಳುಹಿಸಬೇಕು ಎಂಬ ಕೂಗು ಕೇಳಿ ಬಂದಿದೆ.

212
ಪ್ರಮುಖ ನಗರಗಳಲ್ಲಿ ಬೀದಿನಾಯಿಗಳ ಸಂಖ್ಯೆ ಎಷ್ಟಿದೆ

ಸಾಮಾನ್ಯವಾಗಿ ಮಹಾನಗರಗಳಲ್ಲಿ ಬೀದಿನಾಯಿಗಳ ಹಾವಳಿಯಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಎಷ್ಟೋ ಜನರು ಗಾಯಗೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಬೀದಿನಾಯಿಗಳ ಸಂಖ್ಯೆ ಎಷ್ಟಿದೆ ಮತ್ತು ಅವುಗಳ ನಿಯಂತ್ರಣಕ್ಕೆ ಯಾವೆಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

312
1.ಮುಂಬೈ

2025ರ ಅಂಕಿಅಂಶಗಳ ಪ್ರಕಾರ, ವಾಣಿಜ್ಯ ನಗರಿ ಮುಂಬೈನಲ್ಲಿ 90,700 ಬೀದಿನಾಯಿಗಳಿವೆ. ಮುಂಬೈನಲ್ಲಿ ನಾಯಿಗಳ ಸ್ಥಳಾಂತರಕ್ಕೆ ಪರ್ಯಾಯ ಸ್ಥಳವೇ ಇಲ್ಲ. ಹಾಗಾಗಿ NGOಗಳ ನೆರವಿನಿಂದ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ನಿಯಮಿತವಾಗಿ ರೋಗನಿರೋಧಕ ಲಸಿಕೆಗಳನ್ನು ನೀಡಲಾಗುತ್ತದೆ.

412
2.ಚಂಡೀಗಢ

ಸದ್ಯ ಮಾಹಿತಿ ಪ್ರಕಾರ ಚಂಡೀಗಢ ನಗರದಲ್ಲಿ ಸುಮಾರು 9,000 ಬೀದಿನಾಯಿಗಳಿದ್ದು, ಉಗ್ರತೆ ಅಥವಾ ಅಕ್ರಮಣಕಾರಿ ತೋರುವ 6 ತಳಿಯ ಶ್ವಾನಗಳ ಸಾಕಾಣಿಕೆ ಮೇಲೆ ನಿಷೇಧ ವಿಧಸಲಾಗಿದೆ. 2023ರ ಅಂಕಿಅಂಶಗಳ ಪ್ರಕಾರ, 2023ರಲ್ಲಿ 10,621 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ನಾಯಿ ಕಡಿತಕ್ಕೊಳಗಾದ್ರೆ 10-20 ಸಾವಿರ ರೂಪಾಯಿ ಪರಿಹಾರ ವಿತರಿಸಲಾಗುತ್ತದೆ.

512
3.ಕೋಲ್ಕತ್ತಾ

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಉಗ್ರತೆ ನಾಯಿಗಳನ್ನು ಸೆರೆ ಹಿಡಿಯಲಾಗುತ್ತದೆ. ನಿರ್ದಿಷ್ಟ ವಲಯಗಳ ಬೀದಿನಾಯಿಗಳಲ್ಲಿ ದಿನಕ್ಕೆ ಎರಡು ಬಾರಿ ಅಂದ್ರೆ ಬೆಳಗ್ಗೆ 7 ಗಂಟೆ ಮೊದಲು ಮತ್ತು ಸಂಜೆ 7 ಗಂಟೆ ನಂತರ ಆಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.

612
4.ಜೈಪುರ

ಜೈಪುರದಲ್ಲಿ ಸೆರೆ ಹಿಡಿದು ಬೀದಿನಾಯಿಗಳನ್ನು ಸೆರೆ ಹಿಡಿದು 72 ಗಂಟೆ ಅವುಗಳ ವರ್ತನೆ ಅವಲೋಕಿಸಲಾಗುತ್ತದೆ. ಅವಲೋಕನದ ನಂತರ ನಾಯಿಗಳಿಗೆ ಸಂಬಂಧಿಸಿದ ಲಸಿಕೆಯನ್ನು ನೀಡಲಾಗುತ್ತದೆ. ಜೈಪುರದಲ್ಲಿ ತಿಂಗಳಿಗೆ 10-15 ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತವೆ.

712
5.ಲಖನೌ

ಕಳೆದ 4 ವರ್ಷಗಳಲ್ಲಿ ಇಲ್ಲಿ 90,000 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಇಲ್ಲಿ 4 ನಿಮಿಷಕ್ಕೊಂದು ನಾಯಿ ಕಡಿತದ ವರದಿಯಾಗುತ್ತದೆ.

812
6.ಕೊಚ್ಚಿ

ಸದ್ಯದ ಮಾಹಿತಿ ಪ್ರಕಾರ ಕೊಚ್ಚಿಯಲ್ಲಿ 35,000 ಬೀದಿನಾಯಿಗಳಿವೆ. 10 ವರ್ಷಗಳಲ್ಲಿ 8,510 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ತರಬೇತಿ ಪಡೆದ ಹ್ಯಾಂಡ್ಲರ್‌ಗಳಿಗೆ ಒಂದು ನಾಯಿ ಹಿಡಿಯಲು 300 ರೂಪಾಯಿ ಪಾವತಿಸಲಾಗುತ್ತದೆ.

912
ಜಪಾನ್

ಇಲ್ಲಿ ಬೀದಿನಾಯಿಗಳನ್ನು ಹಿಡಿದು ಕ್ವಾರಂಟೈನ್ ಮಾಡಲಾಗುತ್ತದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕ್ರಮ ಸಹ ಜಪಾನ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಬೀದಿನಾಯಿಗಳ ದತ್ತು ಸ್ವೀಕಾರ ಅಭಿಯಾನವೂ ಇಲ್ಲಿ ನಡೆಯುತ್ತದೆ. ಆಕ್ರಮಣಕಾರಿ ನಾಯಿಗಳನ್ನು ವಿವಾದಿತ ಗ್ಯಾಸ್ ಚೇಂಬರ್‌ಗೆ ತಳ್ಳಿ ಸಾಯಿಸಲಾಗುತ್ತದೆ. ಈ ಕ್ರಮ ಇಲ್ಲಿ ಕಾನೂನುಬದ್ಧವಾಗಿದೆ.

1012
ನೆದರ್ಲೆಂಡ್ಸ್

ಇಲ್ಲಿಯ ಶೇ.70ರಷ್ಟು ಬೀದಿನಾಯಿಗಳಿಗೆ ಯಶಸ್ವಿಯಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿರುವ ಪರಿಣಾಮ ಅಪಾಯದ ಕಡಿಮೆಯಾಗಿದೆ. ಇಲ್ಲಿ ಸಾಕು ಪ್ರಾಣಿಗಳನ್ನು ಬೀದಿಗೆ ಬಿಟ್ಟರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಾಕುನಾಯಿಗಳಿಗೆ ಮೈಕ್ರೊಚಿಪ್ ಅಳವಡಿಕೆ ಮತ್ತು ನೋಂದಣಿ ಕಡ್ಡಾಯವಾಗಿ

1112
ಟರ್ಕಿ

ಈ ದೇಶದಲ್ಲಿ ಸುಮಾರು 40 ಲಕ್ಷ ಬೀದಿನಾಯಿಗಳಿದ್ದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ಲಸಿಕೆ, ದತ್ತು ಸ್ವೀಕಾರ, ಲಸಿಕೆ ನೀಡುವ ಕ್ರಮಗಳು ಜಾರಿಯಲ್ಲಿವೆ. ಆಕ್ರಮಣಕಾರಿ, ರೋಗಗ್ರಸ್ಥ ನಾಯಿಗಳಿಗೆ ದಯಾಮರಣವನ್ನು ಕಲ್ಪಿಸಲಾಗುತ್ತದೆ.

1212
ಸ್ವಿಡ್ಜರ್‌ಲೆಂಡ್

ಇಲ್ಲಿ ಸಾಕು ಪ್ರಾಣಿಗಳು ಬೀದಿಗೆ ಬಿಟ್ಟರೆ 3 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ನಾಯಿ ಮಾಲೀಕರು ಕಡ್ಡಾಯವಾಗಿ ಸೂಚಿಸಿದ ಸ್ಥಳೀಯ ಸಂಸ್ಥೆಯಲ್ಲಿ ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ನಾಯಿ ಸಾಕುವ ಮುನ್ನ ಮಾಲೀಕರು ಆರೈಕೆಯ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೈಕೆಯ ಪ್ರಮಾಣಪತ್ರ ಪಡೆದುಕೊಳ್ಳಲು ಸಂಬಂಧಿಸಿದ ಕೋರ್ಸ್ ಪೂರೈಸಬೇಕಾಗುತ್ತದೆ.

Read more Photos on
click me!

Recommended Stories