ಬೋಸ್ಟನ್‌ನಲ್ಲಿ 50ನೇ NCSL ಶೃಂಗಸಭೆ: ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಕರ್ನಾಟಕದ 11 ವಿಧಾನ ಪರಿಷತ್ ಸದಸ್ಯರು ಭಾಗಿ

Published : Aug 07, 2025, 11:17 PM IST

ಅಮೆರಿಕ ಬೋಸ್ಟನ್ ನಗರದಲ್ಲಿ ಆಯೋಜಿಸಿರುವ 50ನೇ ನ್ಯಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ರಾಜ್ಯದ 11 ಮಂದಿ ವಿಧಾನ ಪರಿಷತ್ ಸದಸ್ಯ ತಂಡವು ಭಾಗವಹಿಸಿದರು, ಕಾರ್ಯಕ್ರಮದ ಫೋಟೋಗಳು ಇಲ್ಲಿವೆ

PREV
15
50ನೇ ನ್ಯಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆ

ಅಮೆರಿಕ ಬೋಸ್ಟನ್ ನಗರದಲ್ಲಿ ಆಯೋಜಿಸಿರುವ 50ನೇ ನ್ಯಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ರಾಜ್ಯದ 11 ಮಂದಿ ವಿಧಾನ ಪರಿಷತ್ ಸದಸ್ಯ ತಂಡವು ಭಾಗವಹಿಸಿದರು. ಅಮೆರಿಕದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳ ಹೋಲಿಕೆ ಮತ್ತು ನಮ್ಮ ದೇಶದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆೆಯನ್ನು ನಿರ್ದಿಷ್ಟವಾಗಿ ಸಂಪರ್ಕಿಸುವಲ್ಲಿ ಶಾಸಕಾಂಗದ ಪಾತ್ರ‘ ಕುರಿತು ಚರ್ಚಿಸಿತು.

25
ಸಭಾಪತಿ ಬಸವರಾಜ ಹೊರಟ್ಟಿ ಮಾತು

ಈ ಸಂದರ್ಭದಲ್ಲಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಅಮೆರಿಕದಲ್ಲಿರುವ ಶೈಕ್ಷಣಿಕ ವ್ಯವಸ್ಥೆೆ ಅನುಗುಣವಾಗಿ ಸಮಗ್ರವಾಗಿ ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣಕ್ಕೆ ಉತ್ಕೃಷ್ಟ ಶಿಕ್ಷಣ ವ್ಯವಸ್ಥೆಯನ್ನು ಸಂಯೋಜಿಸುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ಜಗತ್ತಿನ ಉನ್ನತ ಶಿಕ್ಷಣವನ್ನು ನೀಡಲು ಅನುಕೂಲವಾಗುತ್ತದೆ ಎಂದರು.

35
ಆರೋಗ್ಯ ಶಿಕ್ಷಣದ ಕ್ರಮಗಳ ಕುರಿತು ವಿವರಣೆ

ಅಲ್ಲಿನ ಆರೋಗ್ಯ, ಶಿಕ್ಷಣ ಮತ್ತು ಉನ್ನತ ವೈದ್ಯಕೀಯ ಸೇವೆಗಳನ್ನು ನಮ್ಮ ರಾಜ್ಯದಲ್ಲಿ ಅಳವಡಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಬಗ್ಗೆೆ ವಿವರಿಸಿದರು. ಜತೆಗೆ ಈ ವಿಚಾರಗಳಿಗೆ ಸಂಬಂಧಿಸಿದಂತೆ ದುಂಡು ಮೇಜಿನ ಸಭೆಯಲ್ಲಿ ಗಾನಾ ಮತ್ತು ಅಮೆರಿಕದ ಸೆನೆಟರ್‌ಗಳೊಂದಿಗೆ (ಪ್ರತಿನಿಧಿಗಳು) ಕೂಲಂಕಷವಾಗಿ ಚರ್ಚಿಸಿದರು.

45
50ನೇ ನ್ಯಾಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆ

ಅಲ್ಲಿನ ಮೂಲಭೂತ ಸೇವೆಗಳ ಬಗ್ಗೆೆ ಅರಿವು ಪಡೆದುಕೊಂಡಿದ್ದು ನಮ್ಮ ಸರ್ಕಾರದ ಗಮನಕ್ಕೆೆ ತರಲಾಗುವುದು. ರಾಜ್ಯದ ಜನರಿಗೆ ಮೂಲಸೌಕರ್ಯಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬಗ್ಗೆೆ ಬೆಳಕು ಚೆಲ್ಲಲು ವಿಶೇಷವಾಗಿ ಸದನದಲ್ಲಿ ಶಾಸಕರಿಗೆ ತಿಳಿವಳಿಕೆ ನೀಡಲು ಕಟಿಬದ್ಧ ಎಂದರು.

55
50ನೇ ನ್ಯಾಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆ

50ನೇ ನ್ಯಾಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆ ನೇಪಥ್ಯದಲ್ಲಿದ್ದು, ವಿಶ್ವದ ಶ್ರೇಷ್ಟ ಶಿಕ್ಷಣ ಸಂಸ್ಥೆೆಗಳಾದ ಮೆಸಾಚುಸೆಟ್‌ಸ್‌ ಆಫ್ ಟೆಕ್ನಾಾಲಜಿ (ಎಂಐಟಿ), ಹಾರ್ವರ್ಡ್ ಶಿಕ್ಷಣ ಸಂಸ್ಥೆೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಅಲ್ಲಿರುವ ಸೌಲಭ್ಯಗಳನ್ನು ರಾಜ್ಯದಲ್ಲಿ ಹಂತಹಂತವಾಗಿ ಅಳವಡಿಸಲು ಸರ್ಕಾರದ ಗಮನ ಸೆಳೆಯಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

Read more Photos on
click me!

Recommended Stories