ನಾನು ಟಿಟಾಗಢ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ್ದು, ಅಕ್ಟೋಬರ್‌ನಿಂದ ಪ್ರತಿ ತಿಂಗಳು ಎರಡು ಹೊಸ ರೈಲು ಸೆಟ್‌ಗಳನ್ನು ತಲುಪಿಸಲಾಗುವುದು ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಒಂದು ಹೆಚ್ಚುವರಿ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ದೃಢಪಡಿಸಿರುತ್ತಾರೆ. ಆರ್.ವಿ. ರಸ್ತೆ ನಿಲ್ದಾಣದಲ್ಲಿ ಜನಸಂದಣಿಯನ್ನು ಗಮನಿಸಿ, ಉತ್ತಮ ಪ್ರಯಾಣಿಕರ ಸಂಚಾರಕ್ಕಾಗಿ ತಕ್ಷಣವೇ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ.
ಜನರಲ್ಲಿ ಇಂತಹ ಉತ್ಸಾಹ, ನಿರಾಳತೆ ಮತ್ತು ಸಂತೋಷವನ್ನು ನೋಡುವುದು ವೈಯಕ್ತಿಕವಾಗಿಯೂ ನನಗೆ ಸಂತಸ ತಂದಿದೆ. ಜನರಲ್ಲಿನ ಸಂತೃಪ್ತಿ ನಿಜಕ್ಕೂ ಪ್ರೇರಣಾದಾಯಿಯಾಗಿದ್ದು, ಜನರ ಸ್ಪಂದನೆ ಗಮನಿಸಿದರೆ, ಈ ರೀತಿಯ ಕಾರ್ಯಗಳು ನಮ್ಮಲ್ಲಿಯೂ ಇನ್ನಷ್ಟು ಹುಮ್ಮಸ್ಸು ತರಲಿವೆ' ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.