ಗಂಗಾವತಿಯಲ್ಲಿ ಹಿರಿಯ ವಕೀಲರ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ: ಠಾಣೆಗೆ ಮುತ್ತಿಗೆ ಹಾಕಿದ ವಕೀಲರು

Published : Mar 10, 2026, 11:31 PM IST

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ನ್ಯಾಯವಾದಿ ಪ್ರಭಾಕರ್ ಮತ್ತು ಅವರ ಪತ್ನಿ ಮೇಲೆ ಜುಬೇರ್ ಎಂಬ ಯುವಕ ಹಲ್ಲೆ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ ವಕೀಲರು ಮತ್ತು ಸಾರ್ವಜನಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

PREV
16
ಹಿರಿಯ ವಕೀಲರ ಮೇಲರ ಹಲ್ಲೆ

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಿರಿಯ ನ್ಯಾಯವಾದಿ ಪ್ರಭಾಕರ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ಮಾಡಲಾಗಿದ್ದು, ಘಟನೆಯಿಂದ ಆಕ್ರೋಶಗೊಂಡ ವಕೀಲರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

26
ಕೊಪ್ಪಳದ ಗಂಗಾವತಿಯಲ್ಲಿ ಘಟನೆ

ಬಸವೇಶ್ವರ ನಗರದ ಬಂಬು ಬಜಾರದಲ್ಲಿ ಘಟನೆ ನಡೆದಿದ್ದು, ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ತಿಳಿ ಹೇಳಿದಕ್ಕೆ ಜುಬೇರ್ ಎಂಬ ಮುಸ್ಲಿಂ ಯುವಕ ಹಲ್ಲೆ ಮಾಡಿದ್ದಾನೆ.

36
ರಸ್ತೆ ಬದಿ ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ಹಲ್ಲೆ

ನ್ಯಾಯವಾದಿ ಪ್ರಭಾಕರ್ ಹಾಗೂ ಅವರ ಪತ್ನಿ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಜುಬೇರ್ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು ಇದಕ್ಕೆ ವಕೀಲರಾದ ಪ್ರಭಾಕರ್ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

46
ತಡೆಯಲು ಬಂದ ವಕೀಲರ ಪತ್ನಿ ಮೇಲೂ ಹಲ್ಲೆ

ಇದರಿಂದ ಸಿಟ್ಟಿಗೆದ್ದ ಜುಬೇರ್ ವಕೀಲರ ಮೇಲೆ ಮೊದಲು ಹಲ್ಲೆ ಮಾಡಿದ್ದು, ಹಲ್ಲೆಯನ್ನು ಬಿಡಿಸಲು ಬಂದ ಅವರ ಪತ್ನಿ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ.

56
ಗಂಗಾವತಿ ಠಾಣೆ ಮುಂದೆ ಜಮಾಯಿಸಿದ ಸಾರ್ವಜನಿಕರು

ಈ ವಿಚಾರ ತಿಳಿದ ವಕೀಲರು ಹಾಗೂ ಸಾರ್ವಜನಿಕರು ಗಂಗಾವತಿ ಠಾಣೆ ಮುಂದೆ ಜಮಾಯಿಸಿ  ಹಲ್ಲೆಯನ್ನು ಖಂಡಿಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ

66
ಅರೋಪಿ ಜುಬೇರ್ ಬಂಧನಕ್ಕೆ ಆಗ್ರಹ: ಬಿಗುವಿನ ವಾತಾವರಣ

ವಿಚಾರ ತಿಳಿದು ಮಾಜಿ ಸಂಸದ ಶಿವರಾಮಗೌಡ. ಮಾಜಿ ಶಾಸಕ ಮುನವಳ್ಳಿ ಠಾಣೆಗೆ ಆಗಮಿಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿ ಠಾಣೆಯಲ್ಲೇ ಕುಳಿತಿದ್ದಾರೆ ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಗೆಳತಿ ಹಾಗೂ ಸ್ನೇಹಿತರ ಮುಂದೆ ಅಪ್ರಾಪ್ತ ಬಾಲಕನ ಬಿಲ್ಡಪ್‌: ಪ್ರಶ್ನಿಸಿದ್ದಕ್ಕೆ ಹದಿಹರೆಯದ ಯುವಕನ ಕೊಲೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories