ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಹೊಲ, ದನದ ಕೊಟ್ಟಿಗೆ ಮತ್ತು ಮರಗಳಿಗೆ ಹಾನಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದಿಗೆ ಹಳಿಯಾಳದ ಜನ ಬೆಚ್ಚಿ ಬಿದ್ದಿದ್ದಾರೆ. ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಹೊಲಗಳು ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ
26
ಕಲ್ಲಿನ ಕ್ವಾರಿಯಲ್ಲಿ ಸ್ಫೋಟ
ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಸ್ಫೋಟ ನಡೆಸುವ ಮುನ್ನ ಕೆಂಪು ಫ್ಲಾಗ್‌ಗಳನ್ನು ಬಳಸದೇ ಭಾರೀ ಪ್ರಮಾಣದ ಸ್ಫೋಟ ನಡೆಸಿದ ಆರೋಪ ಕೇಳಿ ಬಂದಿದೆ. ಖಾಸಗಿ ವ್ಯಕ್ತಿಗಳಿಂದ ಭೂಮಿ ಲೀಸ್ ಪಡೆದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸ್ಫೋಟಕ ಬಳಸಿ ಕಲ್ಲು ಒಡೆಯುವ ಕೆಲಸ ನಡೆಸಲಾಗಿದೆ.
36
ದನದ ಕೊಟ್ಟಿಗೆ ಮಾವಿನ ತೋಟ, ಹೊಲಕ್ಕೆ ಹಾನಿ
ಭಾರಿ ಪ್ರಮಾಣದ ಸ್ಫೋಟಕ ಬಳಕೆಯಿಂದ ಕಲ್ಲಿನ ಕ್ವಾರಿ ಇರುವ ಸ್ಥಳದ ಅಕ್ಕಪಕ್ಕದಲ್ಲಿರುವ ಹೊಲ, ದನದ ಕೊಟ್ಟಿಗೆಗಳು ಮತ್ತು ಮರಗಳ ಮೇಲೆ ಕಲ್ಲುಗಳು ಬಿದ್ದು ಹಾನಿಯಾಗಿದೆ.
ರಾಜು ಲೊಂಡಿ ಎಂಬುವವರ ಹೊಲದಲ್ಲಿದ್ದ ದನದ ಕೊಟ್ಟಿಗೆ ಹಾಗೂ ಮಾವಿನ ಮರಗಳ ಮೇಲೆ ಕಲ್ಲುಗಳು ಹಾರಿ ಬಂದು ಬಿದ್ದಿದ್ದು, ಅವರಿಗೆ ಇದರಿಂದ ಅಪಾರ ಪ್ರಮಾಣದ ಆರ್ಥಿಕ ಹಾನಿಯಾಗಿದೆ. ಅಕ್ಕ ಪಕ್ಕದ ಮನೆ ಹಾಗೂ ಹೊಲಗಳಲ್ಲೂ ಕಲ್ಲುಗಳು ಬಿದ್ದು ಹಾನಿಯಾಗಿವೆ.
56
ಗಣಿ ಇಲಾಖೆ ಅಧಿಕಾರಿಗಳು ಭೇಟಿ
ವಿಚಾರ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದು, ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಕ್ಕೆ ಸೂಚನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ