ಬೆಂಗಳೂರು-ವಿಜಯಪುರ ನಡುವೆ ಬೈಪಾಸ್ ರೈಲು ಸಂಚಾರ ಆರಂಭ: 5 ಗಂಟೆ ಸಮಯ ಉಳಿತಾಯಕ್ಕೆ ಸಚಿವ ಎಂ.ಬಿ. ಪಾಟೀಲ ಸಂತಸ!

Published : May 15, 2026, 07:41 PM IST

ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ಪ್ರಯಾಣದ ಸಮಯವನ್ನು ಸುಮಾರು 5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಸಚಿವ ಎಂ.ಬಿ. ಪಾಟೀಲರ ಮನವಿಯ ಮೇರೆಗೆ ಆರಂಭವಾದ ಈ ಸೇವೆಯನ್ನು ಕಾಯಂಗೊಳಿಸಲು ಮತ್ತು ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಲಾಗಿದೆ.

PREV
16
ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ವಿಜಯಪುರ ರೈಲು

ವಿಜಯಪುರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು-ವಿಜಯಪುರ ನಡುವಿನ ತ್ವರಿತ ರೈಲು ಸೇವೆಗೆ ಈಗ ಚಾಲನೆ ಸಿಕ್ಕಿದೆ. ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ವಿಶೇಷ ರೈಲು ಓಡಿಸುವ ಸಚಿವ ಎಂ.ಬಿ. ಪಾಟೀಲರ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬೆಳವಣಿಗೆಯ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

26
ಕೇಂದ್ರ ಸಚಿವರಿಗೆ ಧನ್ಯವಾದ:

ತಮ್ಮ ಮನವಿಗೆ ಸ್ಪಂದಿಸಿ ವಿಶೇಷ ರೈಲು ಆರಂಭಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಎಂ.ಬಿ. ಪಾಟೀಲರು ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಅವರು ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು, ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸುವುದರಿಂದ ಸಮಯ ಉಳಿತಾಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

36
ಪ್ರಯಾಣದ ಅವಧಿ 5 ಗಂಟೆ ಕಡಿತ:

ಸದ್ಯ ವಿಜಯಪುರ ಮತ್ತು ಬೆಂಗಳೂರು ನಡುವೆ ರೈಲು ಪ್ರಯಾಣಕ್ಕೆ ಸುಮಾರು 15 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ರೈಲುಗಳು ಹುಬ್ಬಳ್ಳಿ ನಗರದೊಳಗೆ ಹೋಗುವ ಬದಲು ಹುಬ್ಬಳ್ಳಿ ಬೈಪಾಸ್ ಮೂಲಕ ಸಂಚರಿಸಿದರೆ ಈ ಸಮಯವನ್ನು ಕೇವಲ 10 ಗಂಟೆಗಳಿಗೆ ಇಳಿಸಬಹುದು. 

ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ರಾಜಧಾನಿಗೆ ಬರಲು ಮತ್ತು ಹೋಗಲು ಲಭ್ಯವಿರುವ ಅತ್ಯಂತ ವೇಗದ ಸಾರಿಗೆ ಇದಾಗಲಿದೆ ಎಂದು ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

46
ವಿಶೇಷ ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆ:

ನೈರುತ್ಯ ರೈಲ್ವೆಯು ಈ ವಿಶೇಷ ರೈಲನ್ನು ಜೂನ್ 28ರವರೆಗೆ ಓಡಿಸಲು ನಿರ್ಧರಿಸಿದೆ.

ಯಶವಂತಪುರದಿಂದ: ಪ್ರತೀ ಶನಿವಾರ ಬೆಂಗಳೂರಿನಿಂದ ಹೊರಡಲಿದೆ.

ವಿಜಯಪುರದಿಂದ: ಪ್ರತೀ ಭಾನುವಾರ ಹಿಂತಿರುಗಲಿದೆ.

ಬೋಗಿಗಳು: ಒಟ್ಟು 19 ಬೋಗಿಗಳನ್ನು ಈ ರೈಲು ಹೊಂದಿರಲಿದೆ.

ನಿಲುಗಡೆಗಳು: ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ.

56
ಕಾಯಂ ರೈಲಿಗೆ ಆಗ್ರಹ

ಈ ವಿಶೇಷ ರೈಲನ್ನು ಕೇವಲ ಒಂದು ತಿಂಗಳಿಗೆ ಸೀಮಿತಗೊಳಿಸದೆ, ತ್ವರಿತವಾಗಿ ಕಾಯಂ ರೈಲನ್ನಾಗಿ ಪರಿವರ್ತಿಸಬೇಕು ಎಂದು ಸಚಿವರು ಮತ್ತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. 

66
ಸಮಯ ಬದಲಾವಣೆಗೆ ಮನವಿ

ಸೂಕ್ತ ಸಮಯ: ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟು ಬೆಳಿಗ್ಗೆ 6ಕ್ಕೆ ವಿಜಯಪುರ ತಲುಪುವಂತಿರಬೇಕು. ಅದೇ ರೀತಿ ವಿಜಯಪುರದಿಂದ ರಾತ್ರಿ 8ಕ್ಕೆ ಹೊರಟು ಬೆಳಿಗ್ಗೆ 6ಕ್ಕೆ ಬೆಂಗಳೂರಿಗೆ ತಲುಪುವಂತಿರಬೇಕು.

ಯಶವಂತಪುರ ತಲುಪುವ ಸಮಯ: ಈಗಿನ ವಿಶೇಷ ರೈಲು ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪಲಿದೆ. ಇದು ಪ್ರಯಾಣಿಕರಿಗೆ ಮನೆಗಳಿಗೆ ಹೋಗಲು ಕಷ್ಟಕರವಾಗುವುದರಿಂದ, ಮುಂಜಾನೆ 5:30 ರಿಂದ 6 ಗಂಟೆಯ ಸುಮಾರಿಗೆ ತಲುಪುವಂತೆ ಮಾಡಬೇಕು ಎಂದು ಅವರು ಕೋರಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories