ಡಿಕೆ ಶಿವಕುಮಾರ್ ಕಾಲೇಜು ದಿನಗಳಲ್ಲಿ ಯೆಜ್ಡಿ ರೋಡ್ ಕಿಂಗ್ ಬೈಕ್ ಬಳಸುತ್ತಿದ್ದರು. ಈ ಬೈಕ್ ಇತ್ತೀಚೆಗೆ ರಿಸ್ಟೋರ್ ಮಾಡಲಾಗಿದೆ. ಇದೀಗ ಯೆಜ್ಡಿ ಡೀಲರ್ ಸಫೀನಾ ಮೋಟಾರ್ಸ್ ಡಿಕೆಶಿ ಹುಟ್ಟಹಬ್ಬಕ್ಕೆ ಹೊಸ ರೋಡ್ ಸ್ಟಾರ್ ಬೈಕ್ ಗಿಫ್ಟ್ ನೀಡಿದೆ.
ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಕಾಲೇಜು ದಿನಗಳಲ್ಲಿ ಯೆಜ್ಡಿ ಬೈಕ್ ಬಳಸುತ್ತಿದ್ದರು. ಅಂದಿನ ಕಾಲದಲ್ಲಿ ಯೆಜ್ಡಿ ಯುವಕರ ಅತ್ಯಂತ ನೆಚ್ಚಿನ ಬೈಕ್ ಆಗಿ ಮಾರ್ಪಟ್ಟಿತ್ತು. ಕೆಲ ದಶಕಗಳ ಬೈಕಿ ಈ ಬೈಕ್ ಸಂಪೂರ್ಣ ಹಾಳಾಗಿತ್ತು. ಡಿಕೆ ಶಿವಕುಮಾರ್ ಅಭಿಮಾನಿ ಬೈಕ್ ಸಂಪೂರ್ಣ ರಿಸ್ಟೋರ್ ಮಾಡಿ ಡಿಕೆ ಶಿವಕುಮಾರ್‌ಗೆ ಗಿಫ್ಟ್ ನೀಡಿದ್ದರು. ಇದೀಗ ಯೆಜ್ಡಿ ಡೀಲರ್ ಸಫೀನಾ ಮೋಟಾರ್ಸ್ , ಡಿಕೆ ಶಿವಕುಮಾರ್ ಹಟ್ಟು ಹಬ್ಬದ ಪ್ರಯುಕ್ತ ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕ್ ಉಡುಗೊರೆಯಾಗಿ ನೀಡಿದೆ.
25
350 CC / 2026 ಮಾಡೆಲ್ ಬೈಕ್
ಸಫೀನಾ ಮೋಟಾರ್ಸ್ ಡಿಕೆ ಶಿವಕುಮಾರ್‌ಗೆ ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕ್ ಉಡುಗೊರೆಯಾಗಿ ನೀಡಿದೆ. ಈಗಾಗಲೇ ಬೈಕ್ ಡೆಲವರಿ ಮಾಡಲಾಗಿದೆ. 350 CC / 2026 ಮಾಡೆಲ್ ನ ಬೈಕ್ ಗಿಪ್ಟ್ ಮಾಡಿದೆ. ಮೆರೂನ್ ಬಣ್ಣದ ಈ ಬೈಕ್ ಅತ್ಯಂತ ಆಕರ್ಷಕವಾಗಿದೆ.
35
ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಹೆಸರಿಗೆ ಬೈಕ್
ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕನ್ನು ಡಿಕೆ ಶಿವಕುಮಾರ್ ಮಾಲೀಕತ್ವದ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಹೆಸರಿಗೆ ನೀಡಲಾಗಿದೆ. ಡಿಕೆ ಶಿವಕುಮಾರ್‌ಗೆ ಬೈಕ್ ಮೇಲೆ ಹೆಚ್ಚಿನ ಪ್ರೀತಿ ಇದೆ. ಕಾಲೇಜು ದಿನಗಳಲ್ಲೂ ಡಿಕೆ ಶಿವಕುಮಾರ್ ಯೆಜ್ಡಿ ಬೈಕ್ ಮೇಲೆ ಸವಾರಿ ಮಾಡುತ್ತಿದ್ದರು.
ಹೊಸ ಬೈಕ್ ಗಿಫ್ಟ್ ಬೆನ್ನಲ್ಲೇ ಡಿಕೆ ಶಿವಕುಮಾರ್ ಕಾಲೇಜು ದಿನಕ್ಕೆ ಮರಳಿದ್ದಾರೆ. ಡಿಕೆ ಶಿವಕುಮಾರ್ ಬಳಿ ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಯೆಜ್ಡಿ ರೋಡ್ ಕಿಂಗ್ (1st generation) ಬೈಕ್ ಇದೆ. ಇದರ ಜೊತೆಗೆ ರೋಡ್ ಸ್ಟಾರ್ ಕೂಡ ಸೇರಿಕೊಂಡಿದೆ.
55
2024ರಲ್ಲಿ ವಿಂಟೇಜ್ ಬೈಕ್ ರಿಸ್ಟೋರ್
2024ರಲ್ಲಿ ಡಿಕೆ ಶಿವಕುಮಾರ್ ಅವರ ಹಳೇ ಯೆಜ್ಡಿ ಬೈಕ್ ರಿಸ್ಟೋರ್ ಮಾಡಲಾಗಿತ್ತು. ಕಾಲೇಜು ದಿನಗಳಲ್ಲಿ ಅತ್ಯಂತ ಪ್ರೀತಿಯಿಂದ ಬಳಸುತ್ತಿದ್ದ ಬೈಕ್ ಅದೇ ರೀತಿ ರಿಸ್ಟೋರ್ ಮಾಡಲಾಗಿತ್ತು. ಎರಡು ವರ್ಷ ಹಿಂದೆ ಈ ಬೈಕ್ ಪಡೆದು ಡಿಕೆ ಶಿವಕುಮಾರ್ ರೈಡ್ ಮಾಡಿದ್ದರು.
ಹೊಸ ಬೈಕ್ ಹೊಸ ಹುರುಪು
ಡಿಕೆ ಶಿವಕುಮಾರ್‌ಗೆ ಬರ್ತ್ ಡೇ ಗಿಫ್ಟ್ ಮೂಲಕ ಸಿಕ್ಕ ಯೆಜ್ಡಿ ಹಾಗೂ ತಾವು ಕಾಲೇಜು ದಿನಗಳಲ್ಲಿ ಖರೀದಿಸಿದ್ದ ಹಳೇ ಬೈಕ್ ಎರಡೂ ಡಿಕೆಶಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ