ಡಾ.ರಾಜ್ ಕುಮಾರ್-ಲೀಲಾವತಿ ಸಂಬಂಧ: ತಿಂಗಳಲ್ಲಿ 10 ಮುದ್ರಣ ಕಂಡ 'ಲೀಲಮ್ಮ ನಿನ್ನ ಗಂಡ ಯಾರಮ್ಮ?' ಕೃತಿ!

Published : Sep 09, 2026, 07:50 AM IST

ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್ ರಚಿಸಿದ ‘ಲೀಲಮ್ಮ ನಿನ್ನ ಗಂಡ ಯಾರಮ್ಮ?’ ಕೃತಿಯು ಕೇವಲ 28 ದಿನಗಳಲ್ಲಿ 10ನೇ ಮುದ್ರಣ ದಾಖಲೆ ಸೃಷ್ಟಿಸಿದೆ. ಡಾ.ರಾಜ್ ಕುಮಾರ್ ಚಾರಿತ್ರ್ಯವಧೆ ಮಾಡುವ ವಿವಾದಗಳಿಗೆ, ಲೀಲಾವತಿ ಮತ್ತು ವಿನೋದ್ ರಾಜ್ ಸ್ವತ್ತುಗಳಿಗೆ ಸರ್ಕಾರಿ ದಾಖಲೆಗಳ ಸಹಿತ ಪುಸ್ತಕ ತೆರೆ ಎಳೆಯುತ್ತದೆ.

PREV
14

ಬಿಜೆಪಿ ಮುಖಂಡ ಹಾಗೂ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್‌.ಆರ್‌.ರಮೇಶ್ ಅವರು ರಚಿಸಿದ ‘ಲೀಲಮ್ಮ ನಿನ್ನ ಗಂಡ ಯಾರಮ್ಮ?’ ಕೃತಿ ದಾಖಲೆ ಸೃಷ್ಟಿಸಿದ್ದು, ಪ್ರಥಮ ಮುದ್ರಣ ಬಿಡುಗಡೆಯಾದ ಕೇವಲ 28 ದಿನಗಳ ಅಲ್ಪಾವಧಿಯಲ್ಲಿಯೇ 10ನೇ ಮುದ್ರಣವನ್ನು ಕಂಡಿದೆ.

24

ನಗರದಲ್ಲಿ ನಡೆದ ಸಮಾರಂಭದಲ್ಲಿ ಕೃತಿಯ 10ನೇ ಮುದ್ರಣದ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕತೃ ಎನ್‌.ಆರ್.ರಮೇಶ್‌, ಬದುಕಿನುದ್ದಕ್ಕೂ ಕನ್ನಡ ನಾಡು-ನುಡಿ-ನೆಲ-ಜಲ-ಭಾಷೆಯ ಸೇವೆಗೆಂದೇ ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದ ನಟಸಾರ್ವಭೌಮ, ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್ ಕುಮಾರ್ ಅವರ ಏಳಿಗೆಯನ್ನು ಮತ್ತು ಜನಪ್ರಿಯತೆಯನ್ನು ಸಹಿಸದೆ ಕೇವಲ ಅವರ ಚಾರಿತ್ರ್ಯವಧೆ ಮಾಡಬೇಕೆಂಬ ಏಕೈಕ ದುರುದ್ದೇಶದಿಂದ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ವಿವಾದ ಹಾಗೂ ಗೊಂದಲ ಸೃಷ್ಟಿಸಿದ್ದರು ಎಂದು ತಿಳಿಸಿದರು.

34

ಇದಕ್ಕೆಲ್ಲ ಸರ್ಕಾರಿ ದಾಖಲೆಗಳ ಸಹಿತ ತೆರೆ ಎಳೆಯಬೇಕೆಂಬ ಸದುದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದ್ದು, ಕೃತಿಯ ಕೊನೆಯ 20 ಪುಟಗಳಲ್ಲಿ ದಿವಂಗತ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರ ಸ್ವತ್ತುಗಳಿಗೆ ಸಂಬಂಧಿಸಿದ ಅಧಿಕೃತ ಸರ್ಕಾರಿ ದಾಖಲೆಗಳ ಸಹಿತ ಕೃತಿಯನ್ನು ರಚಿಸಲಾಗಿದೆ. ಕೃತಿಯು 11 ಮತ್ತು 12ನೇ ಮುದ್ರಣವನ್ನು ಕಾಣುವ ದಿಕ್ಕಿನಲ್ಲಿ ಮುನ್ನಡೆದಿದೆ ಎಂದು ಹೇಳಿದರು.

44

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಗಡಿ ರಸ್ತೆಯ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರು ಮತ್ತು ಕೃಷ್ಣರಾಜಪುರದ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರು ಸ್ಥಳದಲ್ಲಿಯೇ 10ನೇ ಮುದ್ರಣದ ಎಲ್ಲ ಪ್ರತಿಗಳನ್ನು ಕ್ರಯಕ್ಕೆ ಪಡೆದರು. ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸೋಮಣ್ಣ, ಹೊನ್ನೇಗೌಡ, ಉಮೇಶ್, ಡಾ.ರಾಜ್ ಕುಮಾರ್ ಸೇನೆಯ ತ್ಯಾಗರಾಜ್ ಹಾಜರಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories