ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳು ಪ್ರವೇಶಿಸಿದ್ದು, ಡೈಮಂಡ್ ಹುಡುಕುವ ಟಾಸ್ಕ್ ಶುರುವಾಗಿದೆ. ಡೈಮಂಡ್ ಹೊಂದಿರುವ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗಲಿದ್ದು, ಎಲ್ಲರ ಅನುಮಾನ ಆಸಿಯಾ ಮೇಲಿದೆ. ಇತ್ತ ವಿಮಾನದಲ್ಲಿರುವ ಸ್ಪರ್ಧಿಗಳ ನಡುವೆ ಸ್ನಾನಕ್ಕಾಗಿ ಜಗಳ ನಡೆದಿದೆ.
ಬಿಗ್‌ಬಾಸ್ ಮನೆಯಲ್ಲಿ ಆಟ-ಹುಡುಕಾಟ ಶುರುವಾಗಿದೆ. ಮನೆಯೊಳಗೆ ಆಸಿಯಾ ಫಿರ್ಧೋಸ್, ಗಗನ್ ಚಿನ್ನಪ್ಪ, ಜಗದೀಶ್, ಸಂಗೀತಾ ಭಟ್, ಕಾವ್ಯಾ ಗೌಡ, ಯಶಸ್ ಕೃಷ್ಣ ಮತ್ತು ಓಂಪ್ರಕಾಶ್ ರಾವ್ ಪ್ರವೇಶಿದ್ದು ಟಾಸ್ಕ್ ಜೊತೆ ನಾಮಿನೇಷನ್ ಶುರುವಾಗಿದೆ. ಇನ್ನುಳಿದವರು ವಿಮಾನದಲ್ಲಿಯೇ ಉಳಿದುಕೊಂಡಿದ್ದು, ಗಾಸಿಪ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.
25
ಚಿಕ್ಕ ಬ್ರೀಫ್‌ಕೇಸ್
ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಬಿಗ್‌ಬಾಸ್ ಕಡೆಯಿಂದ ಚಿಕ್ಕ ಬ್ರೀಫ್‌ಕೇಸ್ ಸಿಕ್ಕಿದೆ. ಗಗನ್ ಚಿನ್ನಪ್ಪ ನೀಡಲಾದ ಬ್ರೀಫ್‌ಕೇಸ್‌ನಲ್ಲಿ ಮಾತ್ರ ಡೈಮಂಡ್ ಮಾದರಿಯ ವಸ್ತು ಇರಿಸಲಾಗಿದೆ. ಸ್ಪರ್ಧಿಗಳು ಯಾರ ಬ್ರೀಫ್‌ಕೇಸ್‌ನಲ್ಲಿ ಡೈಮಂಡ್ ಇದೆ ಎಂಬುದನ್ನು ಪತ್ತೆ ಮಾಡಬೇಕು. ಸ್ಪರ್ಧಿಗಳು ಪತ್ತೆ ಮಾಡಿದ್ರೆ ಡೈಮಂಡ್ ರಿಂಗ್ ಹೊಂದಿರುವ ಸ್ಪರ್ಧಿ ನೇರವಾಗಿ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗುತ್ತಾರೆ.
35
ಆಸಿಯಾ ಮೇಲೆ ಅನುಮಾನ
ಕನ್ಫೆಷನ್ ರೂಮ್‌ನಿಂದ ಹೊರ ಬರುತ್ತಲೇ ಎಲ್ಲಾ ಸ್ಪರ್ಧಿಗಳಿಗೆ ಒಬ್ಬರ ಮೇಲೊಬ್ಬರ ಮೇಲೆ ಅನುಮಾನ. ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ, ಗಗನ್ ಚಿನ್ನಪ್ಪ ತಮ್ಮ ಬಳಿಯಲ್ಲಿ ಡೈಮಂಡ್ ಇಲ್ಲ. ಆಸಿಯಾ ಬಳಿಯಲ್ಲಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಆಸಿಯಾ ನನ್ನ ಬಳಿ ಡೈಮಂಡ್ ಇಲ್ಲ ಎಂದು ವಾದಿಸಿದ್ದಾರೆ.
ಮತ್ತೋರ್ವ ಸ್ಪರ್ಧಿಯಾಗಿರುವ ಕಾವ್ಯಾ ಗೌಡಗೂ ಆಸಿಯಾ ಹತ್ತಿರವೇ ಡೈಮಂಡ್ ರಿಂಗ್ ಇರಬಹುದು ಎಂಬ ಅನುಮಾನವಿದೆ. ಈ ಸಂಬಂಧ ಎಲ್ಲರೂ ತಮ್ಮ ತಮ್ಮೊಳಗೆಯೇ ಚರ್ಚೆ ನಡೆಸುತ್ತಿದ್ದಾರೆ. ಎಲ್ಲರೂ ಸೇರಿ ಡೈಮಂಡ್ ಹೊಂದಿರುವ ಸ್ಪರ್ಧಿಯನ್ನು ಪತ್ತೆ ಮಾಡ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
55
ಜಳಕ್ಕಾಗಿ ಜಗಳ
ವಿಮಾನದಲ್ಲಿಯೇ ದಿನ ಕಳೆಯುತ್ತಿರುವ ವೈಷ್ಣವಿ ಕೌಂಡಿನ್ಯ, ಕಿರಣ್ ಶಾಸ್ತ್ರಿ, ಧನುಷ್, ಪ್ರಥಮಾ ಪ್ರಸಾದ್, ಸೌಂದರ್ಯ ಶೆಟ್ಟಿ, ಅವಿನಾಶ್, ಮಾಡರ್ನ್ ಮಹಾಕವಿ ಮಂಜ, ಲಿಖಿತ್ ಗೋಂಧಿ ನಡುವೆ ಸ್ನಾನಕ್ಕಾಗಿ ಜಗಳ ನಡೆದಿದೆ. ಸ್ನಾನಕ್ಕಾಗಿ ಕೇವಲ ಒಂದೂವರೆ ಗಂಟೆ ಸಮಯ ನೀಡಲಾಗಿತ್ತು. ಬಹುತೇಕ ಸಮಯವನ್ನು ಕಿರಣ್ ತೆಗೆದುಕೊಂಡಿದ್ದಕ್ಕೆ ಪ್ರಥಮಾ ಪ್ರಸಾದ್ ಗರಂ ಆಗಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ