ಡೆಲ್ಲಿಯಲ್ಲಿ KGF 2 ಪ್ರಚಾರ: ಯಶ್, ಸಂಜತ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿದ್ದು ಹೀಗೆ!

Published : Apr 01, 2022, 04:16 PM IST

ಸಿನಿಮಾ ಬಿಡುಗಡೆಗೂ 14 ದಿನ ಮುನ್ನವೇ ಪ್ರಚಾರ ಆರಂಭಿಸಿದ ಕೆಜಿಎಫ್ ಟೀಂ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.

PREV
16
ಡೆಲ್ಲಿಯಲ್ಲಿ KGF 2 ಪ್ರಚಾರ: ಯಶ್, ಸಂಜತ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿದ್ದು ಹೀಗೆ!

ಹೊಂಬಾಳೆ ಫಿಲ್ಮಂ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14ರಂದು ತೆರೆ ಕಾಣುತ್ತಿದೆ. ರಾಕಿಂಗ್ ಸ್ಟಾರ್‌ ಯಶ್ ರಾಕಿ ಭಾಯ್ ಆದ ಸಿನಿಮಾ ಇದು. 

26

ಚಿತ್ರದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ, ವಿಲನ್ ಆಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರವೀನಾ ಟೆಂಡನ್ ಪಾತ್ರ ಪಾಸಿಟಿವ್ ಆರ್ ನೆಗೆಟಿವ್ ಎಂದು ಸಿನಿಮಾ ನೋಡಿದ ಮೇಲೆ ವೀಕ್ಷಕರು ಹೇಳಬೇಕಿದೆ. 

36

ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದೇಶಾದ್ಯಂತ ಪತ್ರಕರ್ತರಿಗೆ ಆಹ್ವಾನ ನೀಡಲಾಗಿತ್ತು. ಸ್ಟಾರ್ ನಟರ ಸಮ್ಮುದಲ್ಲಿ ಅದ್ಧೂರಿ ಬಿಡುಗಡೆ ಕಂಡಿತ್ತು. 

46

ನಿನ್ನೆ ಸಿನಿಮಾ ಪ್ರಚಾರ ಶುರು ಎಂದು ಫೋಟೋ ಹಾಕಿದ ಯಶ್ ಇಂದು ಇಡೀ ತಂಡದ ಜೊತೆ ಡೆಲ್ಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಲುಕ್‌ನಲ್ಲಿ ಯಶ್, ಪೆಪ್ಪಿ ಲುಕ್‌ನಲ್ಲಿ ಸಂಜಯ್ ಮಿಂಚಿದ್ದಾರೆ.

56

ಕೆಜಿಎಫ್‌ 2 ಸಿನಿಮಾದ ಅವಧಿ 2 ಗಂಟೆ 48 ನಿಮಿಷ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ಸಿಕ್ಕಿದ್ದು, 12 ವರ್ಷ ಕೆಳಗಿನ ಮಕ್ಕಳು ಮಾತ್ರ ಪೋಷಕರ ಜೊತೆಗೆ ಈ ಸಿನಿಮಾ ನೋಡಬಹುದಾಗಿದೆ. ಏ.14ರಂದು ಐದು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

66

ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರವನ್ನು ಏ. 8ರಿಂದ ಏ.13ರವರೆಗೆ ದೇಶಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಚಿತ್ರವನ್ನು ವಿನಾಯಿತಿ ದರದಲ್ಲಿ ಈ ಪ್ರದರ್ಶನ ಮಾಡಲಾಗುವುದು ಎಂದು ಚಿತ್ರತಂಡ ಪ್ರಕಟಿಸಿದೆ.

Read more Photos on
click me!

Recommended Stories