ಮಗಳ ಜೊತೆ ಫಸ್ಟ್‌ ಫೋಟೋಶೂಟ್‌ ಹಂಚಿಕೊಂಡ ದಿಶಾ ಮದನ್!

First Published | Mar 31, 2022, 2:22 PM IST

ಪಿಂಕ್‌ ಥೀಮ್‌ನಲ್ಲಿ ವಿಭಿನ್ನ ಫೋಟೋಶೂಟ್‌ ಮಾಡಿಸಿದ ನಟಿ ದಿಶಾ ಮದನ್. ಮಗಳ ಹೆಸರು ಡಿಫರೆಂಟ್ ಆಗಿದೆ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು.

ಫ್ರೆಂಚ್ ಬಿರಿಯಾನಿ, ಹಂಬಲ್ ಪೊಲೀಟಿಷಿಯನ್ ನೋಗರಾಜ್  ಚಿತ್ರದಲ್ಲಿ ನಟಿಸಿರುವ ದಿಶಾ ಮದನ್ ತಮ್ಮ ಪುತ್ರಿ ಜೊತೆಗೆ ಮಾಡಿಸಿರುವ ಫೋಟೋಶೂಟ್‌ ಹಂಚಿಕೊಂಡಿದ್ದಾರೆ. 

ಕುಲವಧು ಧಾರಾವಾಹಿಯಲ್ಲಿ ವಚನಾ ಆಗಿ ಮತ್ತು ಡ್ಯಾನ್ಸಿಂಗ್ ಸ್ಟಾರ್‌ನ ವಿಜೇತಳಾಗಿರುವ ದಿಶಾ ಮದನ್ ಸೋಷಿಯಲ್ ಮೀಡಿಯಾದ influencer. ಫಾಲೋವರ್ಸ್‌ಗಾಗಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

Tap to resize

ಮಾರ್ಚ್‌ 1, 2022ರಂದು ದಿಶಾ ಮದನ್ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಅವಿರಾ ಎಂದು ಕೂಡ ಹೆಸರು ರಿವೀಲ್ ಮಾಡಿದ್ದಾರೆ. 

ಮಗಳಿಗೆ 28 ದಿನ ತುಂಬುತ್ತಿದ್ದಂತೆ ಖ್ಯಾತ ಫೋಟೋಗ್ರಾಫರ್ ಮಮ್ಮಿ ಶಾಟ್ ಬೈ ಅಮೃತಾ ಶೂಟ್ ಮಾಡಿದ್ದಾರೆ. ಇಡೀ ಕುಟುಂಬ ಪಿಂಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

2016ರಲ್ಲಿ ಉದ್ಯಮಿ ಶಶಾಂಕ್‌ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದಿಶಾ ಮದನ್ 2019ರಲ್ಲಿ ಮೊದಲ ಮಗು ವಿವಾನ್‌ಗೆ ಜನ್ಮ ನೀಡಿದ್ದರು. 

ಮೊದಲನೇ ಪ್ರೆಗ್ನೆನ್ಸಿ ಸಮಯದಲ್ಲಿ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದರು, ಎರಡನೇ ಪ್ರೆಗ್ನೆನ್ಸಿಯಲ್ಲಿ ಬೋಲ್ಡ್‌ ಶೂಟ್ ಮಾಡಿಸಿ ಪ್ರತಿ ಪೇಪರ್‌ನಲ್ಲೂ ಹೆಡ್‌ಲೈನಲ್ಲಿದ್ದರು. 

Latest Videos

click me!