2007ರಲ್ಲಿ ಸಜನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ, ಮೊದಲ ಸಿನಿಮಾಗೆ ಹಲೋ ಗಾಂಧಿನಗರ್ ಅವಾರ್ಡ್ ಪಡೆದುಕೊಂಡ ನಟಿ ಶರ್ಮಿಳಾ ಮಾಂಡ್ರೆ.
'ಅನೇಕರಿಗೆ ಗೊತ್ತಿಲ್ಲ ಯೋಗರಾಜ್ ಭಟ್ ಸರ್‌ಗೆ ನನಗೆ ಗಾಳಿಪಟ ಚಿತ್ರಕ್ಕೆ ಆಫರ್ ಮಾಡಿದ್ದರು. ಆಗ ನನ್ನ ಶೆಡ್ಯೂಲ್ ಬ್ಯುಸಿ ಇದ್ದ ಕಾರಣ ಸಿನಿಮಾ ಮಾಡಲು ಆಗಲಿಲ್ಲ' ಎಂದು ಶರ್ಮಿಳಾ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
'ಯಾರಿಗೆ ತಾನೆ ಯೋಗರಾಜ್ ಭಟ್ ಸರ್ ಮತ್ತು ಗಣೇಶ್ ಸರ್ ಜೊತೆ ಅಭಿನಯಿಸುವುದಕ್ಕೆ ಕಷ್ಟವಿಲ್ಲ ಹೇಳಿ. ಒಂದು ಡಿಕೆಡ್ ನಂತರ ನನಗೆ ಆಫರ್ ಸಿಕ್ಕಿರುವುದಕ್ಕೆ ಖುಷಿ ಇದೆ'
'ಗಾಳಿಪಟ ತಂಡದ ಜೊತೆ ಕೆಲಸ ಮಾಡುವುದಕ್ಕೆ ತುಂಬಾನೇ ಖುಷಿ ಇದೆ. ಕೊರೋನಾ ಸಮಯದಲ್ಲಿ ನಮಗೆ ಎದುರಾದ ಚಾಲೆಂಜ್ ನಡುವೆಯೂ ಇದೆಲ್ಲಾ ಸಾಧ್ಯವಾಗಿತ್ತು'
ಗಾಳಿಪಟ 2 ಸಿನಿಮಾ ಸದ್ಯ ಫೋಸ್ಟ್ ಪ್ರೋಡಕ್ಷನ್ ಸ್ಟೇಜ್‌ನಲ್ಲಿದೆ. ಚಿತ್ರತಂಡ ಶೀಘ್ರದಲ್ಲಿ ಪ್ರಚಾರ ಶುರು ಮಾಡಿ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಿದ್ದಾರೆ.
ಗಾಳಿಪಟ 2 ಚಿತ್ರದಲ್ಲಿ ಗಣೇಶ್, ದಿಗಂತ್, ಯೋಗರಾಜ್ ಭಟ್, ಅನಂತ್ ನಾಗ್ ಮತ್ತು ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.