ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು

Published : Dec 09, 2025, 04:35 PM IST

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಕೆಜಿಫ್ ಬಳಿಕ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ನಡುವೆ ಸಿನಿಮಾದ ಅತೀ ರೋಚಕ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

PREV
15
ಟಾಕ್ಸಿಕ್ ಸಿನಿಮಾ ಪೋಸ್ಟರ್

ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಕಾಂತಾರ ಸಿರೀಸ್ ಬಿಡುಗಡೆಯಾಗಿದೆ. ಮತ್ತೆ ದೇಶದಲ್ಲಿ ಅಬ್ಬರಿಸಲು ದೇಶಾದ್ಯಂತ ಅಭಿಮಾನಿಗಳು ಯಶ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈ ಕುತೂಹಲ ನಡುವೆ ಯಶ್ ಇದೀಗ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

25
ಮಸಲ್ ಮ್ಯಾನ್ ಯಶ್

ಟಾಕ್ಸಿಕ್ ಸಿನಿಮಾ ಕುರಿತು ಇದುವರೆಗೆ ಬಿಡುಗಡೆ ಮಾಡಿದ ಪೋಸ್ಟರ್, ಪ್ರೋಮೋಗಳು ಸಿನಿಮಾ ಕುತೂಹಲ ಹೆಚ್ಚಿಸಿತ್ತು. ಆ್ಯಂಗ್ರಿ ಯಂಗ್ ಮ್ಯಾನ್ ಸೇರಿದಂತೆ ಹಲವು ಶೇಡ್‌ಗಳ ರೀತಿಯಲ್ಲಿ ಈ ಪೋಸ್ಟರ್ ಗಮನಸೆಳೆದಿತ್ತು. ಆದರೆ ಇದೀಗ ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ಯಶ್ ಮಸಲ್ ಮ್ಯಾನ್ ಆಗಿ ಕುಳಿತಿರುವ ದೃಶ್ಯವಿದೆ. ಬಾತ್‌ಟಬ್‌ನಲ್ಲಿ ಕುಳಿತಿರುವ ಫೋಸ್ ಸಿನಿಮಾದ ಮೇಲಿನಿ ನಿರೀಕ್ಷೆ ಹೆಚ್ಚಿಸಿದೆ.

35
ಟಾಕ್ಸಿಕ್ ಸಿನಿಮಾ ಬಿಡುಗಡೆ 100 ದಿನ

ಟಾಕ್ಸಿಕ್ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಯಶ್, ಇನ್ನು 100 ದಿನ ಮಾತ್ರ ಎಂದು ಕೌಂಡ್‌ಡೌನ್ ಶುರು ಮಾಡಿದ್ದಾರೆ. 2026ರ ಮಾರ್ಚ್‌ನ 19ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಮೂಲಕ ಯಶ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಖಚಿತಪಡಿಸಿದ್ದಾರೆ.

45
ಯುಗಾದಿಗೆ ಟಾಕ್ಸಿಕ್ ರಿಲೀಸ್

ಈ ಬಾರಿಯ ಯುಗಾದಿ ಹಬ್ಬಕ್ಕೆ ಯಶ್ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಅಭಿಮಾನಿಗಳ ಥ್ರಿಲ್ ಡಬಲ್ ಮಾಡಿದೆ. ಮಾರ್ಚ್‌ನಿಂದ ಯಶ್ ಅಬ್ಬರ ಶುರುವಾಗಲಿದೆ. ಇಡಿ ದೇಶವೇ ಈ ಸಿನಿಮಾಗಾಗಿ ಕಾಯುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಯುಗಾದಿಗೆ ಟಾಕ್ಸಿಕ್ ರಿಲೀಸ್

55
ಟಾಕ್ಸಿಕ್ ಸಿನಿಮಾ ಹೆಸರು ನೀಡಿದ್ದು ಯಶ್

ಟಾಕ್ಸಿಕ್ ಸಿನಿಮಾಗೆ ಹೆಸರು ನೀಡಿದ್ದು ಯಶ್, ಯಶ್ ಸಲಹೆಯಿಂದ ಟಾಕ್ಸಿಕ್ ಹೆಸರು ಅಂತಿಮಗೊಂಡಿದೆ. ಕತೆಯಲ್ಲೂ ಮಹತ್ತರ ಬದಲಾವಣೆ ಮಾಡಿಕೊಂಡು ಸಿನಿಮಾ ಶೂಟಿಂಗ್ ಮಾಡಲಾಗಿದೆ. ಇದೀಗ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಟಾಕ್ಸಿಕ್ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಸಿನಿಮಾವನ್ನು ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಸಲಿದೆ ಎಂದು ಹೇಳಲಾಗುತ್ತಿದೆ.

ಟಾಕ್ಸಿಕ್ ಸಿನಿಮಾ ಹೆಸರು ನೀಡಿದ್ದು ಯಶ್

Read more Photos on
click me!

Recommended Stories