ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್

Published : Dec 09, 2025, 04:08 PM IST

Rukmini Vasanth : ಸಪ್ತಸಾಗರದಾಚೆ, ಕಾಂತಾರ ಚಾಪ್ಟರ್ 1ರ ಮೂಲಕ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡಿದ್ದ ನಟಿ ರುಕ್ಮಿಣಿ ವಸಂತ್ ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನಕವತಿಯ ಈ ಬೆಂಕಿ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

PREV
16
ರುಕ್ಮಿಣಿ ವಸಂತ್

ಕನ್ನಡಿಗರ ಪ್ರೀತಿಯ ಪುಟ್ಟಿಯಾಗಿ, ನಟನೆಯಿಂದಲೇ ದೇಶದ ಜನರ ಮನಸ್ಸನ್ನು ಗೆದ್ದ ಕನಕವತಿಯಾಗಿ ಗುರುತಿಸಿಕೊಂಡ ನಟಿ ರುಕ್ಮಿಣಿ ವಸಂತ್ ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದ ರುಕ್ಮಿಣಿ ವಸಂತ್ ಅವರ ಈ ಹೊಸ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

26
ಹೊಸ ಲುಕ್ ನಲ್ಲಿ ರುಕ್ಮಿಣಿ

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರುಕ್ಮಿಣಿ ವಸಂತ್, ಆಒಹ್ ಶೋಲ್ಡರ್ ಬ್ಲ್ಯಾಕ್ ಗೌನ್ ಧರಿಸಿ, ತಲೆಗೊಂದು ಕಪ್ಪು ಟೋಪಿ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಕ್ಯಾಮೆರಾಗಳ ಮುಂದೆ ಪೋಸ್ ಕೊಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಫೋಟೊದಲ್ಲಿ ರುಕ್ಮಿಣಿ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ.

36
ರಸಿಯಾ ಬೇಗಂ ಆದ ರುಕ್ಕು

ರುಕ್ಮಿಣಿ ವಸಂತ್ ಹೊಸ ಲುಕ್ ನೋಡಿ ಜನ ಏನೇನೋ ಕಾಮೆಂಟ್ ಮಾಡುತ್ತಿದ್ದಾರೆ. ರಸೊಯಾ ಬೇಗಂ ಆದ ರುಕ್ಕು, ನೋಡ್ರೋ ನಮ್ಮ ಕನಕವತಿ ಬೆಂಕಿಯಂತೆ ಮಿಂಚುತ್ತಿದ್ದಾಳೆ. ರುಕ್ಮಿಣಿ ವಸಂತ್ ಹಾಲಿವುಡ್ ನಲ್ಲೂ ಚಾನ್ಸ್ ಪಡೆದುಕೊಳ್ಳಬಹುದು ಅಂತಾನೂ ಹೇಳಿದ್ದಾರೆ. ಇನ್ನೂ ಕೆಲವರು ಈ ಲುಕ್ ರುಕ್ಮಿಣಿಗೆ ಒಪ್ಪುತ್ತಿಲ್ಲ ಅನ್ನೋದನ್ನೂ ಹೇಳಿದ್ದಾರೆ.

46
ರುಕ್ಮಿಣಿ ವಸಂತ್

ಬೀರ್ ಬಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್. ನಂತರ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ, ಬಾನ ದಾರಿಯಲ್ಲಿ, ಬಘೀರ, ಭೈರತಿ ರಣಗಲ್ ಮತ್ತು ಕಾಂತಾರ ಚಾಪ್ಟರ್ 1 ಸಿನಿಮಾಗಳಲ್ಲಿ ನಟಿಸಿದ್ದರು.

56
ತಮಿಳು ತೆಲುಗಿನಲ್ಲೂ ರುಕ್ಮಿಣಿ ಹವಾ

ಅಪ್’ಸ್ಟಾರ್ಟ್ಸ್ ಎನ್ನುವ ಹಿಂದಿ ಸಿನಿಮಾದಲ್ಲಿ, ಅಪುಡೋ ಇಪುಡೋ ಎಪುಡೋ ಎನ್ನುವ ತಮಿಳು ಸಿನಿಮಾದಲ್ಲಿ ಹಾಗೂ ಏಸ್ ಮತ್ತು ಮದರಾಸಿ ಎನ್ನುವ ಎರಡು ತೆಲುಗು ಸಿನಿಮಾಗಳಲ್ಲೂ ರುಕ್ಮಿಣಿ ವಸಂತ್ ನಟಿಸುವ ಮೂಲಕ, ಇತರ ಭಾಷೆಗಳಲ್ಲೂ ರುಕ್ಮಿಣಿ ಹಲ್ ಚಲ್ ಎಬ್ಬಿಸಿದ್ದಾರೆ.

66
ಮುಂಬರುವ ಸಿನಿಮಾಗಳು

ಇದಿಷ್ಟೇ ಅಲ್ಲದೇ ರುಕ್ಮಿಣಿ ವಸಂತ್ ಮುಂಬರುವ ಹಲವು ಜನಪ್ರಿಯ ಸಿನಿಮಾಗಳಲ್ಲೂ ನಟಿಸಲಿದ್ದಾರೆ. ಯಶ್ ಜೊತೆ ಟಾಕ್ಸಿಕ್ ಸಿನಿಮಾ, ಎನ್ ಟಿಆರ್ ಜೊತೆ ಡ್ರಾಗನ್ ಹಾಗೂ ಮಣಿರತ್ನಂ ಅವರ ಮುಂದಿನ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ನಟಿಸಲಿದ್ದಾರೆ.

Read more Photos on
click me!

Recommended Stories