ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?

Published : Dec 09, 2025, 01:57 PM IST

ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾ ರಿಲೀಸ್‌ಗೂ ಮುನ್ನವೇ ಅಂದಾಜು 3.5 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಈ ಸಿನಿಮಾ ನಿರ್ಮಾಣ ಸಂಸ್ಥೆ ಜೈ ಮಾತಾ ಮಾತಾ ಕಂಬೈನ್ಸ್‌ ಈ ಕುರಿತು ಪೋಸ್ಟರ್‌ ಬಿಡುಗಡೆ ಮಾಡಿದೆ.

PREV
15
3.5 ಕೋಟಿಗೂ ಅಧಿಕ ಸಂಗ್ರಹ

ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾ ರಿಲೀಸ್‌ಗೂ ಮುನ್ನವೇ ಅಂದಾಜು 3.5 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಈ ಸಿನಿಮಾ ನಿರ್ಮಾಣ ಸಂಸ್ಥೆ ಜೈ ಮಾತಾ ಮಾತಾ ಕಂಬೈನ್ಸ್‌ ಈ ಕುರಿತು ಪೋಸ್ಟರ್‌ ಬಿಡುಗಡೆ ಮಾಡಿ, ‘ಒಂದು ಐಕಾನ್‌, ಒಂದು ಅತ್ಯುತ್ಸಾಹದ ಅಭಿಮಾನಿ ಸೇನೆ, ಇವರಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ’ ಎಂದು ತಿಳಿಸಿತ್ತು.

25
ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್‌

ಸದ್ಯ ಗಂಟೆಗೆ 11 ಸಾವಿರ ಟಿಕೆಟ್‌ ಬುಕಿಂಗ್‌ ಆಗಿದ್ದು, 55,000ಕ್ಕೂ ಹೆಚ್ಚು ಫ್ಯಾನ್ಸ್‌ ಶೋಗಳ ಟಿಕೆಟ್‌ ಸೇಲಾಗಿದೆ ಎನ್ನಲಾಗಿದೆ. ದರ್ಶನ್‌ ಸಿನಿಮಾವನ್ನು ಗೆಲ್ಲಿಸಲೇಬೇಕೆಂಬ ಛಲಕ್ಕೆ ಬಿದ್ದಿರುವ ಅವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

35
6 ಗಂಟೆಗೆ ಮೊದಲ ಶೋ

ಡಿಸೆಂಬರ್‌ 11ರ ಗುರುವಾರ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗುತ್ತಿದೆ. ಗರಿಷ್ಟ ಟಿಕೆಟ್‌ ದರ 900 ರು.ವರೆಗೂ ಏರಿಕೆಯಾಗಿದೆ. ಹಲವೆಡೆ 500 ರು. ನಿಂದ 600 ರು.ವರೆಗೂ ಟಿಕೆಟ್‌ ದರವಿದೆ.

45
ಅತ್ಯುತ್ತಮ ಪ್ರತಿಕ್ರಿಯೆ

ಇನ್ನೊಂದೆಡೆ ಸಿನಿಮಾ ಟ್ರೇಲರ್‌ ವೀಕ್ಷಣೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 1.5 ಕೋಟಿ ವೀಕ್ಷಣೆ ದಾಖಲಾಗಿದೆ. ದರ್ಶನ್‌ ಸಿನಿಮಾ ಕೆರಿಯರ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ‘ಡೆವಿಲ್‌’ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.

55
ವಿಲನ್ ಶೇಡ್​​ನಲ್ಲಿ ದರ್ಶನ್‌

ಸಿನಿಮಾ ರಿಲೀಸ್‌ (ಡಿ.11) ಗೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ವಿಲನ್ ಶೇಡ್​​ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿರುವ ದರ್ಶನ್‌ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ ಗಿಲ್ಲಿ ನಟನ ಪಾತ್ರವೂ ಹೈಲೈಟ್‌ ಆಗಿದೆ.

Read more Photos on
click me!

Recommended Stories