ನಟ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ‘ಕೆಜಿಎಫ್ 2’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮೊದಲ ಹಂತವಾಗಿ ಮಾಚ್‌ರ್ 21ರಂದು ಚಿತ್ರದ ತೂಫಾನ್ ಹಾಡು ಬಿಡುಗಡೆ ಆಗುತ್ತಿದೆ.
26
ಏಕಕಾಲದಲ್ಲಿ ಐದು ಭಾಷೆಗಳಲ್ಲಿ ‘ತೂಫಾನ್...’ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ ಆಗುತ್ತಿರುವ ಬಗ್ಗೆ ಸಾಕಷ್ಟುಕ್ರೇಜ್ ಹುಟ್ಟಿಕೊಂಡಿದೆ.
36
ಮಾಚ್‌ರ್ 21ರಂದು ಬೆಳಗ್ಗೆ 11.7ಕ್ಕೆ ಹೊಂಬಾಳೆ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ಬಿಡುಗಡೆ ಆಗುತ್ತಿದೆ. ಭುವನ್ ಗೌಡ ಕ್ಯಾಮೆರಾ, ರವಿ ಬಸ್ರೂರು ಸಂಗೀತ, ವಿಜಯ್ ಕಿರಗಂದೂರು ನಿರ್ಮಾಣದ ಈ ಚಿತ್ರ ಏಪ್ರಿಲ್ 14ರಂದು ಚಿತ್ರಮಂದಿರಗಳಿಗೆ ಪ್ರವೇಶ ಆಗುತ್ತಿದೆ.
46
ದೇಶ- ವಿದೇಶಗಳಲ್ಲೂ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರತಂಡ ‘ಕೆಜಿಎಫ್ 2’ ಹವಾ ಹೆಚ್ಚಿಸಲು ಮುಂದಾಗಿದೆ.
56
ಮಹಿಳಾ ದಿನಾಚರಣೆ ಪ್ರಯುಕ್ತ ಕೆಜಿಎಫ್ 2 ಚಿತ್ರದ ಪ್ರಮುಖ ಪೋಸ್ಟರ್ ಬಿಡುಗಡೆ ಆಗಿದೆ. ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಪ್ರಮುಖ ಮಹಿಳಾ ಪಾತ್ರಧಾರಿಗಳನ್ನು ಒಟ್ಟು ಸೇರಿಸಿ ಈ ವಿಶೇಷ ಪೋಸ್ಟರ್ ವಿನ್ಯಾಸ ಮಾಡಲಾಗಿದೆ.
66
'ಕೆಜಿಎಫ್ 2' (KGF 2) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಏಪ್ರಿಲ್ 14ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಮಾರ್ಚ್ 27ರಂದು ಸಿನಿಮಾದ ಟ್ರೇಲರ್ (Trailer) ರಿಲೀಸ್ ಮಾಡುವ ಬಗ್ಗೆ ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು