4000 ಸಾವಿರ James ಶೋ, ಒಂದೇ ದಿನದಲ್ಲಿ 30 ಕೋಟಿ ಕಲೆಕ್ಷನ್!

First Published | Mar 18, 2022, 1:19 PM IST

ಒಂದೇ ದಿನಕ್ಕೆ ದೊಡ್ಡ ದಾಖಲೆ ಮಾಡಿದ ಪುನೀತ್ ರಾಜ್‌ಕುಮಾರ್ ಜೇಮ್ಸ್ ಸಿನಿಮಾ. ಎಷ್ಟು ಸಿಂಗಲ್ ಸ್ಕ್ರೀನ್, ಎಷ್ಟು ಮಲ್ಟಿಪ್ಲೆಕ್ಸ್‌ ಗೊತ್ತಾ? 

Photocredit: ಕನ್ನಡ ಪ್ರಭ ಸುರೇಶ್ ಮತ್ತು ವಿ.ಮಣಿ 
 

ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಜೇಮ್ಸ್ ಸಿನಿಮಾ ದೊಡ್ಡ ದಾಖಲೆ ಸೃಷ್ಟಿಸಿದೆ. ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್‌ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. 

ರಾಜ್ಯಾದ್ಯಂತ 386 ಸಿಂಗಲ್ ಸ್ಕ್ರೀನ್, 180 ಮಲ್ಟಿಪ್ಲೆಕ್ಸ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ದಿನಕ್ಕೆ 4000 ಶೋಗಳು ನಡೆಯುತ್ತಿದೆ. ಹೀಗಾಗಿ ಮೊದಲ ದಿನದ ಕಲೆಕ್ಷನ್‌ ಭರ್ಜರಿಯಾಗಿದೆ. 

Tap to resize

ಮೊದಲ ದಿನವೇ 25 ರಿಂದ 30 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್‌ನಲ್ಲಿ ಜೇಮ್ಸ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಹಾಗೂ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ.

ಮೊದಲ ದಿನ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿರುವ ಜೇಮ್ಸ್ ಎರಡನೇ ದಿನವೂ ಥಿಯೇಟರ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್.

ಹೀಗಾಗಿ ಒಂದು ವಾರದೊಳಗೆ 100 ಕೋಟಿ ಕಲೆಕ್ಷನ್ ರಿಪೋರ್ಟ್ ಹೊರ ಬೀಳೋ ಸಾಧ್ಯತೆ ಇದೆ. ಇದು ಗಾಂಧೀನಗರದ ಬಾಕ್ಸ್‌ ಆಫೀಸ್‌ ಪಂಡಿತರ ಲೆಕ್ಕಾಚಾರ.

ಟಿವಿ ರೈಟ್ಸ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಟವಾಗಿದೆ ಅಪ್ಪು ಸಿನಿಮಾ. 12.50 ಕೋಟಿಗೆ ಸ್ಟಾರ್ ಸುವರ್ಣ ಟಿವಿ ರೈಟ್ಸ್
ಸೇಲ್ ಆಗಿದೆ ಎನ್ನಲಾಗಿದೆ.

ಒಟಿಟಿಯಲ್ಲಿ 7.30 ಕೋಟಿಗೆ ಮಾರಾಟವಾಗಿದೆ, ಇದು ಜೇಮ್ಸ್ ಕನ್ನಡ ಅವತರಣಿಕೆಗೆ ಮಾತ್ರ ಸಿಕ್ಕ ಮೊತ್ತ. ಬೇರೆ ಭಾಷೆಗೂ ಡಬ್ ಆಗಿದೆ ಜೇಮ್ಸ್‌ ಬರಲಿದೆ.

Latest Videos

click me!