ಸಿನಿರಂಗಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ ಐಶು: ಫೋಟೋಶೂಟ್ ಮೂಲಕ ಸುಳಿವು ಕೊಟ್ರಾ ಅಮೂಲ್ಯ?

Published : Jun 27, 2025, 10:39 PM IST

ನಟಿ ಅಮೂಲ್ಯ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ಹಾಗಂತ ಬಣ್ಣಕ್ಕೆ ಅವರು ಚಿತ್ರರಂಗಕ್ಕೆ ವಿದಾಯವನ್ನೂ ಹೇಳಿರಲಿಲ್ಲ. ಸದ್ಯ ಅಮೂಲ್ಯ ಹೊಸ ಲುಕ್ ನೋಡಿದ್ರೆ ಮತ್ತದೇ ಹಳೆಯ ಚಾರ್ಮ್‌ಗೆ ಮರಳಿದ್ದಾರೆ ಅಂತನ್ನಿಸುತ್ತದೆ.

PREV
17

ಚೆಲುವಿನ ಚಿತ್ತಾರ ಸಿನಿಮಾದ ನಟಿ ಅಮೂಲ್ಯ ಅವರು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಇದೀಗ ಹೊಸ ಫೋಟೋಶೂಟ್ ಮೂಲಕ ನಟನೆಗೆ ರೀ-ಎಂಟ್ರಿ ಕೊಡ್ತಾರಾ ಎಂಬ ಅನುಮಾನ ಶುರುವಾಗಿದೆ.

27

ನಟಿ ಅಮೂಲ್ಯ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ಹಾಗಂತ ಬಣ್ಣಕ್ಕೆ ಅವರು ಚಿತ್ರರಂಗಕ್ಕೆ ವಿದಾಯವನ್ನೂ ಹೇಳಿರಲಿಲ್ಲ. ಸದ್ಯ ಅಮೂಲ್ಯ ಹೊಸ ಲುಕ್ ನೋಡಿದ್ರೆ ಮತ್ತದೇ ಹಳೆಯ ಚಾರ್ಮ್‌ಗೆ ಮರಳಿದ್ದಾರೆ ಅಂತನ್ನಿಸುತ್ತದೆ.

37

ಯಾವಾಗಲೂ ಸಾಂಪ್ರದಾಯಿಕವಾಗೇ ಕಾಣಿಸಿಕೊಳ್ಳುವ ನಟಿ ಅಮೂಲ್ಯ ಇದೀಗ ಮಾಡರ್ನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕಪ್ಪು ಬಿಳಿ ಮಾಡರ್ನ್ ಬಟ್ಟೆ ಧರಿಸಿ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವಂತೆ ಪೋಸ್ ಕೊಟ್ಟಿದ್ದಾರೆ.

47

ಈ ಮಾಡರ್ನ್ ಲುಕ್‌ನಲ್ಲಿ ಅಮೂಲ್ಯ ಸಖತ್ ಆಗಿ ಕಾಣಿಸುತ್ತಿದ್ದಾರೆ. ಅವರ ಕರ್ಲಿ ಹೇರ್ ಲುಕ್, ಮಾಡ್ರನ್ ಅನಿಸೋ ಡ್ರೆಸ್ ತೊಟ್ಟು, ಇಂಟ್ರಸ್ಟಿಂಗ್ ಆಗಿ ಪೋಸ್‌ಗಳನ್ನೂ ಕೊಟ್ಟಿದ್ದಾರೆ. ಇದಕ್ಕೆ ಅವರು ವಿಶೇಷ ಕ್ಯಾಪ್ಷನ್ ಕೊಟ್ಟಿದ್ದು 'ಜೀವನವು ಅಸ್ಪಷ್ಟವಾದಾಗ ನಿಮ್ಮ ಗಮನವನ್ನು ಹೊಂದಿಸಿ' ಎಂದು ಬರೆದುಕೊಂಡಿದ್ದಾರೆ.

57

ಅಂದಹಾಗೆ ಅಮೂಲ್ಯ ಸದ್ಯ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಸಿನಿಮಾಗಳಲ್ಲಿ ನಟಿಸೋ ಆಸೆ ಇದ್ದೇ ಇದೆ. ಆದರೆ, ಗಂಡ, ಮನೆ, ಮಕ್ಕಳು ಅಂತಲೂ ಟೈಮ್ ಕೊಡ್ತಾರೆ. ಟೈಮ್ ಸಿಕ್ಕಾಗ ಫೋಟೋ ಶೂಟ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ತಾರೆ.

67

ನಟಿ ಅಮೂಲ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದ್ಯಮಿ ಹಾಗೂ ರಾಜಕಾರಣಿ ಜಗದೀಶ್ ಅವರನ್ನ ಅಮೂಲ್ಯ ಮದುವೆಯಾಗಿದ್ದರು. ಈ ದಂಪತಿಗೆ ಅಥರ್ವ್‌ ಹಾಗೂ ಆಧವ್‌ ಎಂಬ ಹೆಸರಿನ ಅವಳಿ ಗಂಡು ಮಕ್ಕಳಿದ್ದಾರೆ.

77

ಇನ್ನು ಚೆಲುವಿನ ಚಿತ್ತಾರ, ನಾನು ನನ್ನ ಕನಸು, ಶ್ರಾವಣಿ ಸುಬ್ರಹ್ಮಣ್ಯ, ಗಜಕೇಸರಿ, ಕೃಷ್ಣ ರುಕ್ಕು ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯ ನಂತರ ಅಮೂಲ್ಯ ಕಂಪ್ಲೀಟ್‌ ಬಣ್ಣದ ಲೋಕದಿಂದ ದೂರ ಸರಿದಿದ್ದಾರೆ.

Read more Photos on
click me!

Recommended Stories