ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ, ಸ್ಯಾಂಡಲ್‌ವುಡ್‌ನ ಚಾರ್ಲಿ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.
27
ಆಗಾಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಹೊಸ ಫೋಟೋಗಳನ್ನು ಸಂಗೀತಾ ಶೃಂಗೇರಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಈ ಭಾರೀ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಟ್ರೆಂಡಿಂಗ್ನಲ್ಲಿದ್ದಾರೆ.
37
ಹೌದು, ನಟಿ ಸಂಗೀತಾ ಶೃಂಗೇರಿ ಅವರು ಆಗಾಗ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರೋ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದ್ರೆ ಇದೀಗ ಜಿಮ್ನಲ್ಲಿ ನಟಿ ಕೊಟ್ಟ ಪೋಸ್‌ಗಳನ್ನು ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಸಂಗೀತಾ ಶೃಂಗೇರಿ ಅವರು ಜಿಮ್ನಲ್ಲಿ ನಿತ್ಯ ವರ್ಕೌಟ್ ಮಾಡಿ ಬಾಡಿ ಬಿಲ್ಡ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ವೈರಲ್ ಆಗಿದೆ. ಸದ್ಯ ಅವರು ಬಾಡಿ ಬಿಲ್ಡಿಂಗ್ ಮಾಡಿಕೊಳ್ಳುತ್ತಿರುವ ರೀತಿ ಕಾಣಿಸುತ್ತಿದ್ದಾರೆ.
57
ಸಂಗೀತಾ ಜಿಮ್ ವೇರ್ ಧರಿಸಿ ಪೋಸ್ ಕೊಟ್ಟಿದ್ದು ಅವರ ಫೋಟೋ ನೋಡಿದ ನೆಟ್ಟಿಗರು, ಅಕ್ಕ ಎಲ್ಲಾದರೂ ಸಿಕ್ಕರೆ ಹೊಡಿಬೇಡಿ ನಾನು ಮೊದಲೇ ವೀಕ್ ಇದೀನಿ, ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಕ್ಕಿದೆ. ಅಮೇಜಿಂಗ್ ಎಂದಿದ್ದಾರೆ.
67
ಇನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ 777' ಸಿನಿಮಾ ಮೂಲಕ ಸಂಗೀತಾ ಶೃಂಗೇರಿ ಕನ್ನಡ ಜನತೆಯನ್ನು ವಿಶೇಷವಾಗಿ ಸೆಳೆದರು. ತಮ್ಮ ಅದ್ಭುತ ನಟನೆಯಿಂದಲೇ ಫೇಮಸ್ ಆದರು.
77
ಈ ಚೆಲುವೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ' ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸೀರಿಯಲ್ನಲ್ಲಿ ಎಲ್ಲರ ನೆಚ್ಚಿನ ನಟಿಯಾಗಿದ್ದ ಸಂಗೀತಾ, ಚಾರ್ಲಿ 777 ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಸನಿಹವಾದರು.