ರೆಡ್‌ & ವೈಟ್‌ ಲುಕ್‌ನಲ್ಲಿ ಸ್ಟೈಲಿಶ್ ಆದ ಕಾಂತಾರ ಬ್ಯೂಟಿ: ಅಂದಗಾತಿ ಕಣ್ಣಾ ತುಂಬಾ... ನೆಟ್ಟಿಗರು ಏನಂದ್ರು?

Published : Jun 27, 2025, 09:50 PM IST

ಸಪ್ತಮಿ ಗೌಡ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇದೀಗ ಅವರ ಸ್ಟೈಲಿಶ್​ ಲುಕ್​ನಲ್ಲಿ ಮಿಂಚುತ್ತಿದ್ದು, ಹೊಸ ಅವತಾರ ನೋಡಿದ ಫ್ಯಾನ್ಸ್​ ಸಖತ್ ಖುಷ್ ಆಗಿದ್ದಾರೆ.

PREV
18

ಕಾಂತಾರ ಚೆಲುವೆ ಸಪ್ತಮಿ ಗೌಡ ಇದೀಗ ಕನ್ನಡದ ಜೊತೆ ಜೊತೆಗೆ ಪರ ಭಾಷೆ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಸೂಪರ್ ಸ್ಲಿಮ್ ಆಗಿರುವ ಸಪ್ತಮಿ ಗೌಡ ಇದೀಗ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.

28

ಸಪ್ತಮಿ ಗೌಡ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಚೆಲುವೆಗೆ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಕೂಡ ಹೆಚ್ಚಿದೆ. ಸದ್ಯ ಸಪ್ತಮಿ ಇದೀಗ ಸ್ಟೈಲಿಶ್​ ಲುಕ್​ನಲ್ಲಿ ಮಿಂಚುತ್ತಿದ್ದು, ಹೊಸ ಅವತಾರ ನೋಡಿದ ಫ್ಯಾನ್ಸ್​ ಸಖತ್ ಖುಷ್ ಆಗಿದ್ದಾರೆ.

38

ಸಪ್ತಮಿ ಗೌಡ ರೆಡ್‌ & ವೈಟ್‌ ಕಾಂಬಿನೇಷನ್‌ ಡ್ರೆಸ್‌ನಲ್ಲಿ ಮಾಡಿಸಿರೋ ಫೋಟೋಶೂಟ್‌ ಸಖತ್ ಮಾರ್ಡನ್ ಆಗಿದೆ. ಜೊತೆಗೆ ಅವರು ತೊಟ್ಟಿರೋ ಬಳೆಗಳು, ವಾಚ್ ಸಖತ್ ಸ್ಟೈಲಿಶ್ ಆಗಿದೆ. ವಿಶೇಷವಾಗಿ ಅವರ ಕನ್ನಡಕದ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದೆ.

48

ಸಪ್ತಮಿ ಗೌಡ ಈ ಪೋಸ್ಟ್‌ಗೆ ವಿಶೇಷವಾದ ಕ್ಯಾಪ್ಷನ್ ಕೊಟ್ಟಿದ್ದಾರೆ. ಟಾಲಿವುಡ್‌ನ ತಮ್ಮುಡು ಸಿನಿಮಾ ಜುಲೈ 4ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

58

ಸಪ್ತಮಿ ಗೌಡ ಫೋಟೋಸ್ ನೋಡಿದ ನೆಟ್ಟಿಗರು, ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲೊ ವಯ್ಯಾರ, ಕಾಂತರ ಬೆಡಗಿ ಮುದ್ದು ಮುಖದ ಚೆಲುವೇ ನಮ್ಮ ಸಪ್ತಮಿ, ಸೋ ಕ್ಯೂಟ್, ಬ್ಯೂಟಿಫುಲ್ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

68

ಸಪ್ತಮಿ ತಮ್ಮುಡು ಚಿತ್ರದ ಮೂಲಕ ತೆಲುಗಿನಲ್ಲಿ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರತ್ನ ಪಾತ್ರದ ಮೂಲಕ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಬರುತ್ತಿದ್ದು, ತೆಲುಗು ನಟ ನಿತಿನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

78

ಈ ಮಧ್ಯೆ ಸ್ಯಾಂಡಲ್‌ವುಡ್‌ ನಟ ನೀನಾಸಂ ಸತೀಶ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ʻದಿ ರೈಸ್ ಆಫ್ ಅಶೋಕʼ ಚಿತ್ರದ ಶೂಟಿಂಗ್‌ ಮುಗಿಸಿದ್ದಾರೆ. ಇದರಲ್ಲಿ ಅಂಬಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

88

ಇನ್ನು ಸಪ್ತಮಿ ಗೌಡ 2020ರಲ್ಲಿ ಡಾಲಿ ಧನಂಜಯ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಇವರಿಗೆ ಕಾಂತಾರ ಸಿನಿಮಾದಿಂದ ಖ್ಯಾತಿ ಹೆಚ್ಚಾಯಿತು.

Read more Photos on
click me!

Recommended Stories