ಭೂಗತ ಜಗತ್ತಿನ ಭಯ, ಗಂಡನಿಂದ ಮೋಸ… ಕನ್ನಡಿಗರ ಮನಸು ಗೆದ್ದ ನಟಿ ಸಾಕ್ಷಿ ಶಿವಾನಂದ್ ಈವಾಗ ಎಲ್ಲಿದ್ದಾರೆ?

First Published | Aug 25, 2024, 4:08 PM IST

ಸ್ಯಾಂಡಲ್’ವುಡ್’ನಲ್ಲಿ ಶಿವರಾಜ್’ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಮೊದಲಾದ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ಮಿಂಚಿದ ನಟಿ ಸಾಕ್ಷಿ ಶಿವಾನಂದ್, ಸಿನಿಮಾದಿಂದ ದೂರವಾಗಿ ಈವಾಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 
 

ಮಳೆ ಬಿಲ್ಲೆ ಮಳೆ ಬಿಲ್ಲೆ ಕೊಡೆ ಹಿಡಿಯೇ ಮಳೆ ಬಿಲ್ಲೇ ಎನ್ನುತ್ತಾ ಸೂಪರ್ ಹಾಕಿ ಹೆಜ್ಜೆ ಹಾಕಿ, ಹಾಡನ್ನು ನೋಡೋರು ಕುಣಿಯುವಂತೆ ಮಾಡಿದ ನಟಿ ಸಾಕ್ಷಿ ಶಿವಾನಂದ್ (Sakshi Shivanand). ಸೈನಿಕ ಸಿನಿಮಾದ ಹಾಡು ಇವತ್ತಿಗೂ ಸಿನಿ ರಸಿಕರ ಫೇವರಿಟ್ ಹಾಡುಗಳಲ್ಲಿ ಒಂದಾಗಿದೆ. 
 

ಸೈನಿಕ ಸಿನಿಮಾ ನಟಿ ಸಾಕ್ಷಿ ಶಿವಾನಂದ್ ಸುರ ಸುಂದರಿ ಅಂತಾನೇ ಹೇಳಬಹುದು. ಆಕೆಯ ಅಂದ, ಚೆಂದ, ನಟನೆಗೆ ಸೋಲದವರೇ ಇರಲಿಲ್ಲ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ ನಟಿ ಸಾಕ್ಷಿ ಕೊನೆಯದಾಗಿ ಪರಮಶಿವ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತ್ರ ಸಿನಿಮಾಕ್ಕೆ ಗುಡ್ ಬೈ ಹೇಳಿ ಹೋದವರು, ಮತ್ತೆ ಕಾಣಿಸಿಕೊಳ್ಳಲೇ ಇಲ್ಲ, ಹಾಗಿದ್ರೆ ನಟಿ ಎಲ್ಲಿ ಹೋದ್ರು?
 

Tap to resize

ಎಸ್ ನಾರಾಯಣ್ ನಿರ್ದೇಶನದ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅಭಿನಯದ ಗಲಾಟೆ ಅಳಿಯಂದಿರು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಾಕ್ಷಿ ಶಿವಾನಂದ್,  ಮುಂದೆ ನಾನು ನಾನೇ, ಸೈನಿಕ, ಕೋದಂಡರಾಮ, ಸೌಂದರ್ಯ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ (Upendra), ರವಿಚಂದ್ರನ್, ಯೋಗೀಶ್ವರ್, ರಮೇಶ್ ಅರವಿಂದ್ ಜೊತೆ ನಟಿಸಿದ್ದಾರೆ. 

ಬಾಲಿವುಡ್ ನಲ್ಲೂ (Bollywood), ಕಾಲಿವುಡ್ ನಲ್ಲೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ಸ್ಟಾರ್ ನಾಯಕರ ಜೊತೆಗೆ ನಟಿಸಿದ್ದ ಸಾಕ್ಷಿ ಶಿವಾನಂದ್, ಇದ್ದಕ್ಕಿದ್ದಂತೆ ಸಿನಿಮಾದಿಂದ ಮರೆಯಾದಾಗ ಹಲವಾರು ಪ್ರಶ್ನೆಗಳು ಎದ್ದಿದ್ದವು. ಕೆಲವರು ಕೌಟುಂಬಿಕ ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ, ಅಂದ್ರೆ ಇನ್ನೂ ಕೆಲವರು ಭೂಗತ ಜಗತ್ತಿನ ಭಯದಿಂದ ಸಿನಿಮಾದಿಂದ ದೂರ ಉಳಿದಿರೋದಾಗಿ ಹೇಳಿದ್ದರು. ಆದ್ರೆ ನಿಜವಾದ ಕಾರಣ ಮಾತ್ರ ಯಾರಿಗೂ ಗೊತ್ತಿಲ್ಲ. 
 

ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಾಕ್ಷಿ ಶಿವಾನಂದ್,  ತನಗೆ ಅಂಡರ್ ವಲ್ಡ್ ನಿಂದ (underworld) ಫೋನ್ ಕಾಲ್ ಗಳು ಬರುತ್ತಿದ್ದವು. ಸಿನಿಮಾ ಸೆಟ್ ನಲ್ಲಿರೋವಾಗ್ಲೂ  ಸಹ ಕೆಲವರು ನನ್ನನ್ನು ಭೇಟಿಯಾಗಲು ಬಂದಿದ್ರು , ದುಬೈಗೆ ಹೋಗಿ ಡಾನ್ ಗಳನ್ನ ಭೇಟಿಯಾಗೋದಕ್ಕೆ ಹೇಳಿದ್ರು ಎಂದು ಹೇಳಿದ್ದರು. 
 

ತಾನು ನಟಿಸುತ್ತಿರುವ ಚಿತ್ರಕ್ಕೆ ಭೂಗತ ಜಗತ್ತಿನಿಂದ ಹಣ ಸಿಗುತ್ತಿದ್ದು, ದುಬೈಗೆ ಹೋಗಬೇಕು ಎಂದು ನಿರ್ಮಾಪಕರು ಹೇಳಿದಾಗ ಸಾಕ್ಷಿಗೆ ಅಚ್ಚರಿ ಜೊತೆಗೆ ಭಯ ಕೂಡ ಆಗಿತ್ತಂತೆ. ಹಾಗಾಗಿ ನಿರ್ಮಾಪಕರಿಗೆ ಸಿನಿಮಾಕ್ಕಾಗಿ ಪಡೆದ ಹಣವನ್ನು ವಾಪಾಸ್ ನೀಡಿ, ನಟಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿರೋದಾಗಿ ಸಹ ಸುದ್ದಿಯಾಗಿತ್ತು. 
 

ಇನ್ನು ನಟಿಯ ವೈವಾಹಿಕ ಜೀವನ (married life) ಕೂಡ ಚೆನ್ನಾಗಿರಲಿಲ್ಲ. ಸಿನಿಮಾಗಳಲ್ಲಿ ತಮ್ಮ ಬೇಡಿಕೆ ಕಡಿಮೆಯಾದಾಗ ಸಾಕ್ಷಿ ಶಿವಾನಂದ್ ಅಮೇರಿಕಾಕ್ಕೆ ತೆರಳಿ ಅಲ್ಲಿ ಮ್ಯಾನೇಜ್ ಮೆಂಟ್ ಕೊರ್ಸ್ ಮಾಡಿದರು. ಅಲ್ಲೇ ಪರಿಚಯವಾದ ಸಾಗರ್ ಎಂಬುವವರ ಜೊತೆಗೆ ಲಿವ್ ಇನ್ ರಿಲೇಶನ್’ಶಿಪ್ ನಲ್ಲಿದ್ದು, ನಂತ್ರ ಅವರೊಂದಿಗೆ ಮದ್ವೆ ಕೂಡ ಆಗಿದ್ದರಂತೆ. 
 

ಮದುವೆಗೂ ಮುನ್ನವೇ ಸಾಗರ್ ಗೆ ತುಂಬಾನೆ ಆರ್ಥಿಕ ನೆರವು ನೀಡುತ್ತಿದ್ದ ಸಾಕ್ಷಿ ಶಿವಾನಂದ್ ಗೆ, ಮದುವೆಯಾದ ಸ್ವಲ್ಪ ಸಮಯದಲ್ಲಿ ಆತ ತನ್ನ ಹಣವನ್ನು ಮಾತ್ರ ಪ್ರೀತಿಸುತ್ತಿದ್ದ, ಹಣ ಮತ್ತು ಸೌಂದರ್ಯಕ್ಕಾಗಿ ತನ್ನ ಜೊತೆ ಇದ್ದ ಅನ್ನೋದು ಗೊತ್ತಾಯೊತು. ಇದು ಗೊತ್ತಾಗುತ್ತಿಂದಂತೆ ಆತನಿಂದ ದೂರವಾದ ಸಾಕ್ಷಿ, ಸದ್ಯ ಅಮೆರಿಕಾದ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾ, ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರಂತೆ ಈ ಸುಂದರಿ. ಪ್ರಚಾರದಿಂದ ದೂರವೇ ಉಳಿದಿರುವ ಸಾಕ್ಷಿ ಜೀವನದಲ್ಲಿ ಇದೆಲ್ಲಾ ನಿಜವಾಗಿ ನಡೆದಿದೆಯೇ ಅನ್ನೋದು ಮಾತ್ರ ಯಾರಿಗೂ ಸರಿಯಾಗಿ ಗೊತ್ತಿಲ್ಲ. 
 

Latest Videos

click me!