ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ ರುಕ್ಮಿಣಿ ವಸಂತ್ ಭಾವುಕ ಪೋಸ್ಟ್

First Published | Aug 24, 2024, 11:13 PM IST

ಅಜ್ಜಿ ಜೊತೆಗಿರುವ ಅಮೂಲ್ಯವಾದ ಫೋಟೋಗಳನ್ನು ಹಂಚಿಕೊಂಡ ರುಕ್ಮಿಣಿ ವಸಂತ್. ಭಾವುಕ ಸಾಲುಗಳು ನೋಡಿ ಸಂತಾಪ ಹೇಳಿದ ಸ್ನೇಹಿತರು.....
 

ಸಪ್ತ ಸಾಗರದಾಚೆ ಎಲ್ಲೋ, ಬಿರ್ಬಲ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿರುವ ನಾಯಕಿ ರುಕ್ಮಿಣಿ ವಸಂತ್ ತಮ್ಮ ಅಜ್ಜಿಯನ್ನು ಕಳೆದುಕೊಂಡಿದ್ದಾರೆ.  ಅಜ್ಜಿ ಜೊತೆಗಿರುವ ಪ್ರತಿಯೊಂದು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಆಗಿರದ ರುಕ್ಮಿಣಿ ವಸಂತ್ ಅಜ್ಜಿ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. 

Tap to resize

 'ನಿನ್ನೆ ನನ್ನ ವಂಡರ್‌ಪುಲ್‌ ಅಜ್ಜಿಯನ್ನು ಕಳೆದುಕೊಂಡೆ. ಆಕೆಯ ಬಗ್ಗೆ ಹೇಳಲು ನನಗೆ ಸಾವಿರಾರು ವಿಚಾರಗಳು ಇದೆ, ಆದರೆ ಆಕೆ ಎಷ್ಟು ಬುದ್ಧಿವಂತೆ, ಧೈರ್ಯವಂತೆ ಮತ್ತು ತಡೆದುಕೊಂಡು ಬೇಗ ಚೇತರಿಸಿಕೊಳ್ಳುವ ಶಕ್ತಿಯನ್ನು ಅರ್ಥ ಮಾಡಿಸುವುದು ಕಷ್ಟ. 

ಆಕೆ ಇದ್ದ ಅರ್ಧದಷ್ಟು ಆದರೂ ನಾನು ಇರಬೇಕು. ಫೋಟೋಗಳನ್ನು ಸಂಗ್ರಹ ಮಾಡಿ ಅದನ್ನು ಸ್ಕ್ರ್ಯಾಪ್‌ಬುಕ್‌ ಮಾಡುವ ಅಭ್ಯಾಸವನ್ನು ಆಕೆಯಿಂದ ಕಲಿತಿದ್ದು. 

ಈಗಲೂ ಆ ಫೋಟೋ ಆಲ್ಬಂಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತೀನಿ, ಅದರಲ್ಲಿ ಆಕೆ ಪ್ರೀತಿಪಾತ್ರರ ಫೋಟೋವನ್ನು ಹಾಕಿಟ್ಟಿದ್ದಾಳೆ ಎಂದು ರುಕ್ಮಿಣಿ ಬರೆದುಕೊಂಡಿದ್ದಾರೆ.

ನಿನ್ನೆ ನಾವೆಲ್ಲರೂ ಆ ಪುಸ್ತಕವನ್ನು ನೋಡುತ್ತಾ ನಮ್ಮ ಕಥೆಗಳನ್ನು ಮೆಲುಕು ಹಾಕಿದ್ದೇವು. ಆಗ ನಾವು ನಕ್ಕಿದ್ದೀವಿ, ಖುಷಿ ಪಟ್ಟಿದ್ದೀವಿ ಹಾಗೇ ಕಣ್ಣೀರಿಟ್ಟಿದ್ದೀವಿ. ಪ್ರತಿಯೊಂದಕ್ಕೂ ಧನ್ಯವಾದಗಳು ಪ್ರೆರ್.

ಪ್ರತಿಯೊಂದು ಫೋಟೋಗಳು ಅಮೂಲ್ಯವಾದದ್ದು. ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಧೈರ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶ್ರದ್ಧಾ ಶ್ರೀನಾಥ್ ಕಾಮೆಂಟ್ ಮಾಡಿದ್ದಾರೆ.

Latest Videos

click me!