ಸಂಗೀತ ಶೃಂಗೇರಿ ಮಾರ್ಡನ್ ಲುಕ್ ವೈರಲ್… ಸ್ಯಾಂಡಲ್’ವುಡ್ ಸಮಂತಾ ಎಂದ ಅಭಿಮಾನಿ

Published : Aug 25, 2024, 12:46 PM IST

ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಸೀಸನ್ 10 ಬೆಡಗಿ ಸಂಗೀತ ಶೃಂಗೇರಿ ಸೈಮಾ ನಾಮಿನೇಶನ್ ಪಾರ್ಟಿಗಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಇವರ ಈ ಲುಕ್ ಸದ್ಯ ವೈರಲ್ ಆಗುತ್ತಿದೆ.   

PREV
17
ಸಂಗೀತ ಶೃಂಗೇರಿ ಮಾರ್ಡನ್ ಲುಕ್ ವೈರಲ್… ಸ್ಯಾಂಡಲ್’ವುಡ್ ಸಮಂತಾ ಎಂದ ಅಭಿಮಾನಿ

ಸ್ಯಾಂಡಲ್ ವುಡ್ ಬೆಡಗಿ ಸಂಗೀತ ಶೃಂಗೇರಿ, ಹೆಚ್ಚು ಜನಪ್ರಿಯತೆ ಗಳಿಸಿದ್ದು ಬಿಗ್ ಬಾಸ್ ಸೀಸನ್ 10 (Bigg Boss season 10) ರಿಂದ. ಬಿಗ್ ಬಾಸ್ ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ನೀಡಿದ್ದ ಸಿಂಹಿಣಿ ಸಂಗೀತ ಟಾಪ್ 3ರಲ್ಲಿ ಸ್ಥಾನ ಪಡೆಯೋದರಲ್ಲಿ ಯಶಸ್ವಿಯಾಗಿದ್ದರು. 
 

27

ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಸಂಗೀತಾ ಕ್ರೇಜ್ ಕಡಿಮೆಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಂತೂ ಸಂಗೀತಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ದಿನಕ್ಕೊಂದು ಫೋಟೊಸ್ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್ ಜೊತೆ ಕನೆಕ್ಟ್ ಆಗಿರ್ತಾರೆ ಸಂಗೀತಾ (Sangeetha Sringeri). 
 

37

ಸಂಗೀತಾ ಶೃಂಗೇರಿ ಇತ್ತೀಚೆಗೆ ನಡೆ ಸೈಮಾ ನಾಮಿನೇಶನ್ ಪಾರ್ಟಿಗೆ ತೆರಳಿದ್ದು, ವಿಭಿನ್ನವಾದ ಲುಕ್ ನಲ್ಲಿ ಸಖತ್ ಸ್ಟೈಲ್ ಆಗಿ ಕಾಣಿಸ್ತಿದ್ದಾರೆ ಚಾರ್ಲಿ 777(Charlie 777)  ಬೆಡಗಿ. ನೆಚ್ಚಿನ ನಟಿಯ ಹೊಸ ಲುಕ್ ನೋಡಿ ಅಭಿಮಾನಿಗಳು ಮನಸೋತಿದ್ದಾರೆ. 
 

47

ಇತ್ತೀಚೆಗಷ್ಟೇ ನಟಿ ಕೈಯಲ್ಲಿ ತಾವರೆ ಹೂವು ಹಿಡಿದು, ಮಹಾದೇವಿ ಪಾರ್ವತಿಯ ಅವತಾರದಲ್ಲಿ ಫೋಟೊ ಶೂಟ್, ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಇದೀಗ ಅದಕ್ಕೆ ತದ್ವಿರುದ್ಧವಾಗಿ ಡಿಫರೆಂಟ್ ಲುಕ್ ನಲ್ಲಿ ಸಂಗೀತಾ ಕಾಣಿಸಿಕೊಂಡಿದ್ದಾರೆ. 
 

57

ಸಂಗೀತಾ ಕೆಂಪು ಬಣ್ಣದ ವೆಲ್ವೆಟ್ ಬ್ಲೇಸರ್ ಡ್ರೆಸ್ (red velvet blazer dress, ಧರಿಸಿದ್ದು, ಸ್ಪಟಿಕದ ನೆಕ್ಲೆಸ್ ಮತ್ತು ಇಯರಿಂಗ್ ಮ್ಯಾಚ್ ಮಾಡಿದ್ದಾರೆ. ಜೊತೆಗೆ ಕೂದಲನ್ನ ಎತ್ತಿ ಕಟ್ಟಿ ಜಡೆಹಾಕಿ, ಅದರ ಮೇಲೆ ಸಿಲ್ವರ್ ಥ್ರೆಡ್ ನಿಂದ ಕಟ್ಟಿದ್ದು, ಕಾಲಿಗೆ ಬ್ಲ್ಯಾಕ್ ಸ್ಟಾಕಿಂಕ್ಸ್ ಧರಿಸಿದ್ದಾರೆ. ಈ ಲುಕ್ ತುಂಬಾನೆ ವಿಭಿನ್ನ ಜೊತೆಗೆ ಸ್ಟೈಲಿಶ್ ಆಗಿ ಕಾಣುತ್ತಿದೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ, ಫ್ಯಾನ್ಸ್ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

67

ಅದು ಟ್ರೆಡಿಶನಲ್ ಲುಕ್ ಇರಲಿ, ಮಾರ್ಡನ್ ಲುಕ್ (modern look) ಇರಲಿ ನೀವೇ ಬೆಸ್ಟ್, ನಿಮಗೆ ಮೇಕಪ್ ಬೇಡ ನ್ಯಾಚುರಲ್ ಬ್ಯೂಟಿ ನೀವು. ಮಾರ್ಡನ್ ಲುಕ್, ಸ್ಟೈಲ್ ಐಕಾನ್, ಅಷ್ಟೇ ಅಲ್ಲ ಕರ್ನಾಟಕದ ಸಮಂತಾ ಅಂತಾನೂ ಹೇಳಿದ್ದಾರೆ ಅಭಿಮಾನಿಗಳು. 
 

77

ಇನ್ನೂ ಒಂದಷ್ಟು ಜನ ಕಾಮೆಂಟ್ ಮಾಡಿ, ಎಲಿಗೆಂಟ್ ಲುಕ್, ನಿನ್ನ ಮೇಲಿಂದ ಕಣ್ಣು ತೆಗೆಯೋಕೆ ಸಾಧ್ಯ ಆಗ್ತಿಲ್ಲ, ಕೆಂಪು ಗೊಂಬೆ. ಸ್ಟೈಲ್ ಐಕಾನ್, ಯೂತ್ ಐಕಾನ್ ಎಲ್ಲಾನೂ ನೀವೆ, ಮಾರ್ಡನ್ ಲುಕ್ ನಿಮಗೆ ಚೆನ್ನಾಗಿ ಸೂಟ್ ಆಗುತ್ತೆ. ಕೆಂಪು ಚಿಟ್ಟೆ ನಿಮ್ಮನ್ನ ನೋಡಿ ಕಳೆದು ಹೋಗ್ಬಿಟ್ಟೆ ಎಂದೆಲ್ಲಾ ಹಾಡಿ ಹೊಗಳಿದ್ದಾರೆ ಅಭಿಮಾನಿಗಳು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories