ಬೃಂದಾವನ ಕುಟುಂಬ ಯಾವತ್ತಿಗೂ ಗಟ್ಟಿಯಾಗಿದೆ; ಧಾರಾವಾಹಿಯಿಂದ ಹೊರ ಹಾಕಿದರೂ ಋಣಿಯಾಗಿರುವ ವಿಶ್ವ!
ಧಾರಾವಾಹಿಂದ ಹೊರ ಬಂದರೂ ಕೂಡ ಯಾರನ್ನೂ ಮರೆತಿಲ್ಲ ವಿಶ್ವಾ. ಇದು ನಿಜವಾದ ಕಲಾವಿದನಿಗೆ ಇರುವ ಗುಣ ಎಂದ ನೆಟ್ಟಿಗರು.
ಧಾರಾವಾಹಿಂದ ಹೊರ ಬಂದರೂ ಕೂಡ ಯಾರನ್ನೂ ಮರೆತಿಲ್ಲ ವಿಶ್ವಾ. ಇದು ನಿಜವಾದ ಕಲಾವಿದನಿಗೆ ಇರುವ ಗುಣ ಎಂದ ನೆಟ್ಟಿಗರು.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಆಗಿದ್ದ 'ಬೃಂದಾವನ'ದಲ್ಲಿ ಗಾಯಕ ವಿಶ್ವನಾಥ್ ಪ್ರಮುಖ ಪಾತ್ರಧಾರಿ ಆಕಾಶ್ ಆಗಿ ಕಾಣಿಸಿಕೊಳ್ಳುತ್ತಿದ್ದರು.
20-30 ಅದ್ಭುತ ಕಲಾವಿದರನ್ನು ಹೊಂದಿದ್ದ ಈ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡು, ವೀಕ್ಷಕರ ಮನಸ್ಸಿನಲ್ಲಿ ಪ್ರತಿ ಪಾತ್ರವೂ ಉಳಿದುಬಿಟ್ಟಿತ್ತು.
ಆದರೆ ಮೂರ್ನಾಲ್ಕು ವಾರ ಕಳೆಯುತ್ತಿದ್ದಂತೆ ರಾತ್ರೋರಾತ್ರಿ ಹೀರೋ ವಿಶ್ವನ ಪಾತ್ರಕ್ಕೆ ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯ ಆಯ್ಕೆ ಮಾಡಿಬಿಟ್ಟರು. ಯಾಕೆ ಈ ಬದಲಾವಣೆ ಅನ್ನೋದಕ್ಕೆ ಸರಿಯಾಗಿ ಉತ್ತರವೇ ಸಿಗಲಿಲ್ಲ.
ಬಹಳ ಬೇಗ ಸೀರಿಯಲ್‌ನ ಮುಕ್ತಾಯ ಮಾಡಿಬಿಟ್ಟರು. ಆದರೆ ಈಗಲೂ ವಿಶ್ವನಾಥ್ ರವೀಂದ್ರ ಹಾವೇರಿ ತಮ್ಮ ಬೃಂದಾವನ ಕುಟುಂಬವನ್ನು ಮರೆತಿಲ್ಲ.
'ಬೃಂದಾವನ” ಕುಟುಂಬ ಯಾವತ್ತಿಗೂ ಗಟ್ಟಿಯಾಗಿದೆ, Camera ಮುಂದೆ , Camera ಹಿಂದೆ. ಏನೇ ಇರಲಿ ಬೃಂದಾವನ ಆರಂಭದಿಂದಲೂ ನೀವು ನನ್ನ ಅಮ್ಮ ಅಪ್ಪ ಆಗಿದ್ದೀರಿ. ಖಂಡಿತಾ ಅಜ್ಜಿ ಚಿತ್ರಕಲಾ ಬಿರಾದರ್‌ನ ಮಿಸ್ ಮಾಡಿಕೊಳ್ಳುತ್ತೀನಿ' ಎಂದು ವಿಶ್ವ ಬರೆದುಕೊಂಡಿದ್ದಾರೆ.
ಧಾರಾವಾಹಿಯಿಂದ ಹೊರ ಹಾಕಿದರೂ ಅಥವಾ ಹೊರ ನಡೆದರೂ ತಂಡದ ಮೇಲಿರುವ ಗೌರವ ಮತ್ತು ಹಿರಿಯ ಕಲಾವಿದರಿಗೆ ನೀನು ತೋರಿಸುತ್ತಿರುವ ಪ್ರೀತಿ ನಿಜಕ್ಕೂ ಮೆಚ್ಚಬೇಕಾದ ಗುಣ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.