ಹೂಗುಚ್ಛ ಹಿಡಿದು ನಿಂತ ನೆನಪಿರಲಿ ಪ್ರೇಮ್ ಪುತ್ರಿ; ಹುಡುಗ ಸಿಕ್ಕಿರುವ ಸೂಚನೆ ಕೊಟ್ರಾ?

ಅಮೃತಾ ಪ್ರೇಮ್ ಕೈಯಲ್ಲಿ ಹೂ ನೋಡಿ ಶಾಕ್ ಆದ ನೆಟ್ಟಿಗರು. ಹುಡುಗ ಸಿಕ್ಕಿದಾನಾ ಅಥವಾ ಮದ್ವೆ ಫಿಕ್ಸ್ ಆಯ್ತಾ ಅಂತ ಕೇಳ್ತಿದ್ದಾರೆ.
 

ಕನ್ನಡ ಚಿತ್ರರಂಗದ ಚಾಕೋಲೇಟ್ ಹೀರೋ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಹೊಸ ಫೋಟೋ ಸಖ್ ವೈರಲ್ ಆಗುತ್ತಿದೆ.

ಕಲರ್ ಕಲರ್ ಮ್ಯಾಕ್ಸಿ ಡ್ರೆಸ್ ಮತ್ತು ಚಾಕೆಟ್‌ ಧರಿಸಿ ನಿಂತಿರುವ ಅಮೃತಾ ಕೈಯಲ್ಲಿ ಹೂಗುಚ್ಛ ಹಿಡಿದು ನಿಂತಿದ್ದಾರೆ. ಕೂಲ್ ಆಗಿ ಕಾಣಿಸಲು ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ.


'ಏಪ್ರಿಲ್' ಎಂದು ಬರೆದುಕೊಂಡು ಮೂರ್ನಾಲ್ಕು ಹೂಗಳ ಎಮೋಜಿ ಹಾಕಿದ್ದಾರೆ. ಅಮೃತಾ ಏನಿದರ ಅರ್ಥ ಅಂತ ಅಭಿಮಾನಿಗಳು ಕಾಮೆಂಟ್ ಮೂಲಕ ಕೇಳುತ್ತಿದ್ದಾರೆ.

ಇನ್ನು ಟಗರು ಪಲ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮೃತಾ ಪ್ರೇಮ್ ಶೀಘ್ರದಲ್ಲಿ ಎರಡನೇ ಸಿನಿಮಾ ಅನೌನ್ಸ್ ಮಾಡಬೇಕಿದೆ.

ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಖಾಸಗಿ ಬ್ರ್ಯಾಂಡ್‌ಗಳ ಫೋಟೋಶೂಟ್, ಜಾಹೀರಾತು ಮಾಡುತ್ತಿದ್ದಾರೆ. ಫಿಟ್ನೆಸ್‌ ಕಡೆಗೂ ಗಮನ ನೀಡುತ್ತಿದ್ದಾರೆ. 

ಅಮೃತಾ ನಿನ್ನ ಕೈಗೆ ಹೂ ಕೊಟ್ಟಿರುವ ಹುಡುಗ ಯಾರು? ನಿಮ್ಮ ಅಪ್ಪಂಗೆ ಗೊತ್ತಾ? ಇಷ್ಟು ಬೇಗ ಮದ್ವೆ ಆಗ್ಬೇಡ ಮಾಡಿರೋದು ಒಂದೇ ಸಿನಿಮಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!